
ಜೋಯಿಡಾ –
ಉತ್ತರಕನ್ನಡ ಜಿಲ್ಲೆಯಲ್ಲಿಯೇ ಪ್ರಸಿದ್ದವಾದ ಸಾಂಸ್ಕ್ರತಿಕ ಕಲಾವಿದರುಗಳನ್ನು ಒಳಗೊಂಡ ಊರು ಗುಂದ. ಇದು ಸಾಂಸ್ಕ್ರತಿಕ ಕಲೆಗಳ ತವರುರು ಎಂದು ವಿಧಾನ ಪರಿಷತ್ ಸದಸ್ಯ ಎಸ್,ಎಲ್,ಘೋಟ್ನೇಕರ ಹೇಳಿದರು.
ಅವರು ಜೋಯಿಡಾ ತಾಲೂಕಿನ ಯರಮುಖದ ಸೋಮೇಶ್ವರ ಸಭಾ ಭವನದಲ್ಲಿ ಶನಿವಾರ ಮಕರ ಸಂಕ್ರಾತಿ ಪ್ರಯುಕ್ತ ನಡೆದ ಕನ್ನಡ ಮತ್ತು ಸಂಸ್ಕ್ರತಿ ಇಲಾಕೆ ಕಾರವಾರ, ದೇಸಾಯಿ ಸೇವಾ ಟ್ರಸ್ಟ ಜೋಯಿಡಾ, ಕಾರ್ಯನಿರತ ಪತ್ರಕರ್ತರ ಸಂಘ ಜೋಯಿಡಾ ಇವರ ಸಹಯೋಗದಲ್ಲಿ ನಡೆದ ಗಡಿನಾಡ ಯಕ್ಷಗಾನ, ನೃತ್ಯ ಹಾಗೂ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗುಂದದಲ್ಲಿ ಹಲವಾರು ಕಲಾವಿದರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡವರು ಇದ್ದಾರೆ, ಇಲ್ಲಿನ ಜನರು ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿರುವುದರಿಂದ ಚಿಕ್ಕ ಮಕ್ಕಳಲ್ಲಿಗೂ ಯಕ್ಷಗಾನದ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಇಲ್ಲಿನ ಸ್ಥಳೀಯರು ಯಾವುದೇ ಜನಪದ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿರುವುದರಿಂದ ಇಲ್ಲಿ ಉತ್ತಮವಾಗಿ ಸಂಸ್ಥೆಗಳು ಬೆಳೆದಿವೆ . ಇಲ್ಲಿ ಶಿಕ್ಷಣ ಕಲಿಯಲು ಬಹಳ ಕಷ್ಟ ಪಡಬೇಕು, ಆದರೂ ಸಹಿತ ಛಲದಿಂದ ಶಿಕ್ಷಣ ಕಲಿತು ವಕೀಲರಾದವರಿಗೆ ಮತ್ತು ಕಲಾವಿದರಿಗೆ ಸನ್ಮಾನಿಸುತ್ತಿರುವುದು ಸಂತಸದ ವಿಷಯ ಎಂದರಲ್ಲದೇ ದೇಸಾಯಿ ಸೇವಾ ಟ್ರಸ್ಟ ಎತ್ತರಕ್ಕೆ ಬೆಳೆಯಲಿ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೋಯಿಡಾ ಬ್ಲಾಕ್ ಕಾಂಗ್ರೇಸ ಅದ್ಯಕ್ಷ ಸದಾನಂದ ದಬ್ಗಾರ ಮಾತನಾಡಿ ದೇಸಾಯಿ ದೇಸಾಯಿ ಸೇವಾ ಟ್ರಸ್ಟ ಮಕರ ಸಂಕ್ರಮಣದ ಪ್ರಯುಕ್ತ ತಾಲೂಕಿನ ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದೆ, ಸ್ಥಳೀಯರಿಗೆ ವೇದಿಕೆಯಲ್ಲಿ ಅವಕಾಶ ನೀಡುವ ಮೂಲಕ ಅವರ ಪ್ರತಿಭೆ ಹೆಚ್ಚಿಸುವ ಕೆಲಸ ಮಾಡಿದೆ ಎಂದರು.
ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ,ಎನ್,ವಾಸರೆ ಮಾತನಾಡಿ ಸದಾ ಓಡಾಟದ ಬಧುಕಿನಲ್ಲಿ ಇರುವ ಪತ್ರಕರ್ತರಾದ ನಮಗೆ ಪತ್ರಕರ್ತರೇ ಸಂಘಟಿಸಿದ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾಸುತ್ತಿರುವುದು ಮನಸ್ಸಿಗೆ ಖುಷಿ ತಂದಿದೆ, ಜೋಯಿಡಾ ತಾಲೂಕಿನ ಕಾರ್ಯನಿರತ ಪತ್ರಕರ್ತರು ಸದಾ ಒಳ್ಳೆಯದನ್ನೇ ಮಾಡುತ್ತಾ ಜನರ ವಿಶ್ವಾಸ ಗಳಿಸಿದ್ದಾರೆ ಎಂದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ನಂದಿಗದ್ದಾ ಗ್ರಾ,ಪಂ,ಅದ್ಯಕ್ಷ ಅರುಣ ದೇಸಾಯಿ ಮಾತನಾಡಿ ದೇಸಾಯಿ ಸೇವಾ ಟ್ರಸ್ಟ ನಮ್ಮೂರಿನಲ್ಲಿ ಒಳ್ಳೆಯ ಮನರಂಜನಾ ಕಾರ್ಯಕ್ರಮ ಇಟ್ಟುಕೊಂಡಿರುವುದು ಸಂತಸ, ನಮ್ಮ ಸಹಕಾರ ಎಂದು ನಿಮಗಿದೆ ಎಂದರಲ್ಲದೇ, ನಂದಿಗದ್ದಾ ಗ್ರಾ,ಪಂ, ಜನತೆಯಿಂದಲೇ ತಮ್ಮ ಪಂಚಾಯತಗೆ ಉತ್ತಮ ಗ್ರಾಮ ಪಂಚಾಯತಿ ಗಾಂಧಿ ಪುರಸ್ಕಾರ ಲಭಿಸಿದೆ ಎಂದು ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಷೇಶವಾಗಿ ಸಾಧನೆ ಗೈದ ವಕೀಲರಾದ ಮಾಧವ ಗಾಂವ್ಕರ, ಗಂಗಾಧರ ಭಾಗ್ವತ, ಶಂಕರ ದಬ್ಗಾರ, ಕಲಾವಿದರಾದ ಭಾಸ್ಕರ ಗಾಂವ್ಕರ, ಸುಮಂಗಲಾ ದೇಸಾಯಿ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ವಕೀಲರಾದ ಗಂಗಾಧರ ಭಾಗ್ವತ ಮಾತಾನಾಡಿ ತಾವೂ ಕಷ್ಟಪಟ್ಟು ಕಡು ಬಡತನದಲ್ಲಿ ವಿದ್ಯೆ ಕಲಿತು ವಕೀಲರಾಗಿ ಸೇವೆ ಸಲ್ಲಿಸಿದ್ದಕ್ಕೆ ನಮ್ಮೂರಿನ ದೇಸಾಯಿ ಟ್ರಸ್ಟ ಅವರು ಗೌರವಯುತವಾಗಿ ಸನ್ಮಾನಿಸಿದ್ದಕ್ಕೆ ಅಭಿನಂದಿಸಿದರು,
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ದೇಸಾಯಿ ಸೇವಾ ಟ್ರಸ್ಟನ ಅಧ್ಯಕ್ಷ ಸಂದೇಶ ದೇಸಾಯಿ ಮಾತನಾಡಿದರು.

ವೇದಿಕೆಯಲ್ಲಿ ಕೆ,ಡಿ,ಸಿ,ಸಿ,ಬ್ಯಾಂಕ್ ನಿರ್ದೇಶಕ ಕೃಷ್ಣಾ ದೇಸಾಯಿ, ನಂದಿಗದ್ದಾ ಗ್ರಾ.ಪಂ.ಸದಸ್ಯ ಆರ್,ವಿ,ದಾನಗೇರಿ, ಜೋಯಿಡಾ ಗ್ರಾ.ಪಂ.ಸದಸ್ಯ ಸಂತೋಷ ಮಂಥೇರೋ, ಆರ,ಎ,ಭಟ್ಟ, ವಕೀಲರಾದ ಸುಂದರ ಕೆ, ಗೋಪಾಲ ಭಟ್ಟ, ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ನೃತ್ಯ ಹಾಗೂ ಜಿಲ್ಲೆಯ ಆಯ್ದ ಕಲಾವಿದರಿಂದ ಲಂಕಾ ದಹನ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಿತು ಐನೂರು ಹೆಚ್ಚು ಜನರು ಯಕ್ಷಗಾನ ನೋಡಿ ಸಂತಸ ವ್ಯೆಕ್ತ ಪಡಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ವಿಷ್ಣು ಪಟಗಾರ ಹಾಗೂ ಉಪನ್ಯಾಸಕ ಪಾಂಡುರಂಗ ಪಟಗಾರ ಸ್ವಾಗತಿಸಿದರೇ, ಶಿಕ್ಷಕ ಯಶವಂತ ನಾಯ್ಕ ವಂದಿಸಿದರು.

Leave a Comment