
ಹಳಿಯಾಳ:- ಹಳಿಯಾಳದಲ್ಲಿ ಸಾರ್ವಜನೀಕರು ಸೇರಿದಂತೆ ಹಿರಿಯರ ಮಾತುಗಳಿಗೆ ಬೆಲೆಯೇ ಇಲ್ಲವಾಗಿದೆ. ಇಲ್ಲಿ ಸಕ್ಕರೆ ಕಾರ್ಖಾನೆ, ಒಳಚರಂಡಿ, ಆರ್.ಎಸ್.ಎಸ್ ನಿಯಮಿತ ಯಾವುದೇ ವಿಷಯ ಇರಲಿ ಉಸಿರುಕಟ್ಟುವ ವಾತಾವರಣದಲ್ಲಿ ನಡೆದಿದೆ ಅಲ್ಲದೇ ದೌರ್ಜನ್ಯದ ಆಡಳಿತ ನಡೆಯುತ್ತಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ, ಹಿರಿಯ ರಾಜಕಾರಣಿ ಶ್ರೀಕಾಂತ ಹೂಲಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಅವರ ನಿವಾಸದಲ್ಲಿ ಮತ್ತೊರ್ವ ಹಿರಿಯ ರೈತ ಮುಖಂಡ ಉಡಚಪ್ಪಾ ಬೊಬಾಟಿ ಅವರೊಂದಿಗೆ ಜಂಟಿಯಾಗಿ ಕರೆದಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಹಲವು ಮಹತ್ವಪೂರ್ಣ ವಿಚಾರಗಳನ್ನು ತೆರೆದಿಟ್ಟರು ಅಲ್ಲದೇ ಆರೋಪಗಳನ್ನು ಮಾಡಿದರು.
ಸದ್ಯ ತಾಲೂಕಿನ 13 ಸಹಕಾರಿ ಸಂಘಗಳು(ಸೊಸೈಟಿ) ಚುನಾವಣೆ ನಡೆಯುತ್ತಿದೆ. ಇಲ್ಲಿ ಬಹುಪಾಲು ಶೇರುದಾರ ಸದಸ್ಯರ ಮತದಾನದ ಹಕ್ಕನ್ನೇ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು ಶೇರುದಾರರ ಮಹತ್ವ ಮತದಾನದ ಸಂದರ್ಭದಲ್ಲಿಯೇ ತಿಳಿಯುವುದು ಆದರೇ ಹಳಿಯಾಳದ ರೈತರ ಸೇವಾ ಸಹಕಾರಿ ಸಂಘ(ಆರ್ಎಸ್ಎಸ್) ನಿಯಮಿತದಲ್ಲಿ 4 ವಾರ್ಡಗಳಲ್ಲಿ 3540 ಮತದಾರರಲ್ಲಿ ಕೇವಲ 1038 ಮತದಾರರು ಹಾಗೂ ಪಿಎಲ್ಡಿ ಸೊಸೈಟಿಯಲ್ಲಿ 6000 ಮತದಾರರಲ್ಲಿ 334 ಜನರಿಗೆ ಮಾತ್ರ ಮದಾನಕ್ಕೆ ಅವಕಾಶವಿರುವುದು ಉಳಿದವರನ್ನು ಮತದಾರರ ಯಾದಿಯಿಂದ ಕೈಬಿಡಲಾಗಿರುವುದು ಏಕೆ ಎಂದು ಪ್ರಶ್ನೀಸಿದರು.
2010ರಿಂದ 14ನೇ ಸಾಲಿನಲ್ಲಿ ಯಾರು 5ರಲ್ಲಿ 3 ಸಾಮಾನ್ಯ ಸಭೆ(ಜಿಬಿ)ಗಳನ್ನು ಭಾಗವಹಿಸುತ್ತಾರೋ? ಅವರಿಗೆ ಮಾತ್ರ ಮತದಾರರ ಮತದಾನದ ಹಕ್ಕನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೇ 2014ರಿಂದ 2019ರ ವರೆಗೆ ಈ ಕಾಯ್ದೆ ಇಲ್ಲ ಈ ಕಾಯ್ದೆ ಯಾವಾಗಾ ಅನುಷ್ಠಾನಕ್ಕೆ ಬಂದಿತು ಎನ್ನುವ ಬಗ್ಗೆ ಮಾಹಿತಿಯೇ ಇಲ್ಲ, ಒಂದು ಪ್ರಕಟಣೆಯು ಇಲ್ಲ ಎಂದು ಕಿಡಿಕಾರಿದ ಅವರು ತಾಲೂಕಿನ 13 ಸೊಸೈಟಿಗಳಲ್ಲಿ ಸಾವಿರಾರು ಮತದಾರ ರೈತರನ್ನು ಕೈಬಿಡುವ ಮೂಲಕ ರೈತ ಸಮುದಾಯಕ್ಕೆ ಮೊಸ ಮಾಡಲಾಗಿದೆ ಎಂದು ಆರೋಪಿಸಿದರು.
ಇದು ತಾಲೂಕು ಮತ್ತು ಜಿಲ್ಲೆಗೆ ಮೊಸವಾಗಿದ್ದು ರಾಜ್ಯಕ್ಕಾದರೇ ಮೂರ್ಖರೇ ಈ ಕಾಯ್ದೆ ಜಾರಿಗೆ ತಂದಿರಬೇಕು ಎಂದು ಕಿಡಿಕಾರಿದ ಶ್ರೀಕಾಂತ ಹೂಲಿ ತಾನು ನಿರಂತರ 14 ವರ್ಷ ನಿರ್ದೇಶಕನಾಗಿದ್ದರು ಸಹಿತ ತನಗೂ ಮಾಹಿತಿ ಇಲ್ಲ ಮಾತ್ರವಲ್ಲದೇ ಶೇರುದಾರ ಸದಸ್ಯರಿಗೆ ಈ ಕುರಿತು ಮಾಹಿತಿಯೇ ನೀಡಲಾಗಿಲ್ಲ ಎಂದು ಆರೋಪಿಸಿದರು.
ಹೀಗೆ ಮುಂದುವರೆದರೇ ಶೇರುದಾರರು ನೀರ್ಜಿವವಾಗಿ ನೂರರ ಸಂಖ್ಯೆಗೆ ತಲುಪಿರುವ ಮತದಾರರ ಸಂಖ್ಯೆ 50-60ಕ್ಕೆ ತಲುಪಿ ಇಲ್ಲಿ ದೌರ್ಜನ್ಯದ ಆಡಳಿತ ನಡೆಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನೂ ಈ ಎಲ್ಲ ಸೊಸೈಟಿಗಳು ಯಾಕೆ ಸಾಮಾನ್ಯ ಸಭೆಗೆ ಮಾಧ್ಯಮದವರನ್ನು ಹೊರಗಿಡುತ್ತಾರೆ ಎಂದು ಪ್ರಶ್ನೀಸಿದ ಅವರು ಮಾಧ್ಯಮದವರು ಬಂದರೇ ಇವರ ಬಂಡವಾಳಗಳು ಹೊರಗೆ ಬಿಳುತ್ತವೆ ಅದಕ್ಕಾಗಿ ಕರೆಯುವುದಿಲ್ಲ ಮಾತ್ರವಲ್ಲದೇ ಅಚ್ಚುಕಟ್ಟಾದ ಬಹಿರಂಗ ವಾತಾವರಣದಲ್ಲಿ ಸಭೆ ನಡೆಸದೆ ನೂರು ಜನರು ಸೇರುವ ಇಕ್ಕಟ್ಟಾದ ಸ್ಥಳದಲ್ಲಿ ಸಭೆ ನಡೆಸಿ ಅಲ್ಲಿಯೂ ಗೊಂದಲ ಸೃಷ್ಟಿಸುವ ವ್ಯವಸ್ಥಿತ ಹುನ್ನಾರ ಮಾಡಲಾಗುತ್ತದೆ ಎಂದು ಆಪಾದಿಸಿದರು.
ಆಡಳಿತ ಮಂಡಳಿಯವರು ರೈತರಿಗೆ ಮತದಾನದ ಹಕ್ಕು ತಪ್ಪಿದ್ದು ಗೊತ್ತಿದ್ದರು ಸಹ ಹೊರಾಟ ಮಾಡದೇ, ಈ ಕುರಿತು ಧ್ವನಿ ಎತ್ತದೆ ಸುಮ್ಮನಿರುವುದು ಏಕೆ, ಇದರಲ್ಲಿ ಏನೋ ಹುನ್ನಾರ ಅಡಗಿದೆ ಎಂದು ಆಪಾದಿಸಿದ ಅವರು ಅನ್ಯಾಯದ ಕುರಿತು ವಿರೋಧ ಮಾಡಿಲ್ಲ ಎಂದಾದರೇ ಇವರೆಲ್ಲ ರೈತ ವಿರೋಧಿಗಳೆಂದು ಆರೋಪಿಸಿದರು.
ರೈತರ ಪರವಾಗಿರೋ ಸರ್ಕಾರ ಮತದಾರ ರೈತರಿಗೆ ಆಗಿರುವ ಸಮಸ್ಯೆಯನ್ನು ಪರಿಶಿಲಿಸಬೇಕು, ಚುನಾವಣೆಯನ್ನು ಮುಂದುಡಬೇಕು, ಅಲ್ಲಿಯವರೆಗೆ ಆಡಳಿತಾಧಿಕಾರಿ ನೇಮಿಸಿ, ಮತದಾನದ ಹಕ್ಕನ್ನು ಮೊದಲಿನಂತೆ ಎಲ್ಲರಿಗೂ ನೀಡಿ, ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದಿದ್ದರೇ ಅವರ ಅಧಿಕಾರ ರದ್ದುಪಡಿಸಿ ಎಂದು ಶ್ರೀಕಾಂತ ಹೂಲಿ ಹಾಗೂ ಉಡಚಪ್ಪಾ ಬೋಬಾಟಿ ಜಂಟಿಯಾಗಿ ಆಗ್ರಹಿಸಿದರು.


Leave a Comment