


ಕಾರವಾರ ಶೈಕ್ಷಣಿಕ ಜಿಲ್ಲೆಯ 5 ತಾಲೂಕಿನ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಹೊನ್ನಾವರದ ಆರ್.ಎಸ್. ಪ್ರೌಡಶಾಲೆಯ ದೈಹಿಕ ಶಿಕ್ಷಕ ಮಹೇಶ ಜಿ. ಶೆಟ್ಟಿ, ಉಪಾಧ್ಯಕ್ಷರಾಗಿ ಕಾರವಾರದ ನ್ಯೂ ಪೊಮ್ಸೊಲ್ರ್ ಚೆಂಡಿಯಾ ಪ್ರೌಡಶಾಲೆಯ ದೈಹಿಕ ಶಿಕ್ಷಕ ತಿಮ್ಮಪ್ಪ ನಾಯಕ, ಕಾರ್ಯದರ್ಶಿಯಾಗಿ ಕುಮುಟಾ ಜೆ.ಎಚ್.ಗೌಡ ಇವರನ್ನು ಆಯ್ಕೆ ಮಾಡಲಾಯಿತು.

ಕೋಶಾಧ್ಯಕ್ಷರಾಗಿ ಅಂಕೋಲಾದ ಶ್ರೀಧರ ನಾಯ್ಕ, ಸಹ ಕಾರ್ಯದರ್ಶಿಯಾಗಿ ಭಟ್ಕಳದ ನ್ಯೂ ಇಂಗ್ಲೀಷ್ ಪ್ರೌಢಶಾಲೆಯ ಎಸ್.ಎಂ.ನಾಯ್ಕ, ಕೃಷ್ಣ ಗೌಡ ಆಯ್ಕೆಯಾಗಿದ್ದಾರೆ. ತಾಲೂಕ ಪ್ರತಿನಿಧಿಯಾಗಿ ಕಾರವಾರ ತಾಲೂಕಿನಿಂದ ರಮಾಕಾಂತ ಗೌಡ, ಸಂತೋಷ ಪವಾರ್, ಅಂಕೋಲಾ ತಾಲೂಕಿನಿಂದ ಭಾರ್ಗವ ನಾಯಕ್, ಸುರೇಶ ಗೌಡ, ಕುಮುಟಾದ ಜೇಕಬ್ ಫರ್ನಾಂಡಿಸ್, ಎಂ.ಎಸ್.ದೊಡ್ಮನಿ, ಹೊನ್ನಾವರ ತಾಲೂಕಿನಿಂದ ರಾಜೇಶ ನಾಯಕ, ಗೌರೀಶ ಭಂಡಾರಿ, ಭಟ್ಕಳ ತಾಲೂಕಿನಿಂದ ವೆಂಕಟೇಶ ಗುಬ್ಬಿಹಿತ್ತಲ್, ಪ್ರಲ್ಹಾದ ನಾಯಕ, ಇವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಕಾರವಾರ ಶೈಕ್ಷಣಿಕ ಜಿಲ್ಲೆಯಿಂದ ಐದು ತಾಲೂಕಿನಿಂದ ಪಧಾದಿಕಾರಿಗಳನ್ನು ಕುಮುಟಾದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. ಈ ಹಿಂದಿನ ಅವಧಿಯ ಅಧ್ಯಕ್ಷರಾಗಿ ಜಿ.ಟಿ.ತೊರ್ಕೆ, ಕಾರ್ಯದರ್ಶಿಯಾಗಿ ಪ್ರಕಾಶ ಕುಂಜಿ ಹಾಗೂ ಪದಾಧಿಕಾರಿಗಳ ಕಾರ್ಯದ ಕುರಿತು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

Leave a Comment