
ಬೆಂಗಳೂರು : ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಸೀಟುಗಳಿಗೆ ನಡೆಯುವ ಕಾಮೆಡ್-ಕೆ ಪರೀಕ್ಷೆ ಮೇ 10 ರಂದು ನಡೆಯಲಿದೆ. ದೇಶ್ಯಾದ್ಯಂತ 158 ನಗರಗಳ ಸುಮಾರು 400 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜ. 16ರಿಂದ ವಿದ್ಯಾರ್ಥಿಗಳು ಕಾಮೆಡ್ ಕೆ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಏ. 17 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಮೇ 10 ರಂದು ಪರೀಕ್ಷೆ ನಡೆಯಲಿದ್ದು, ಮೇ. 26ರಂದು ಅಂಕಪಟ್ಟಿ ಪ್ರಕಟಗೊಳ್ಳಲಿದೆ.

ಪ್ರಸಕ್ತ ಸಾಲಿನಲ್ಲಿ ಕಾಮೆಡ್ ಕೆ ಪ್ರವೇಶ ಪರೀಕ್ಷೆಯ ಶುಲ್ಕ ಶೇ. 10ರಷ್ಟು ಹೆಚ್ಚಳವಾಗಲಿದೆ. ನಿಯಮದಂತೆ ಒಟ್ಟು ಇಂಜಿನಿಯರಿಂಗ್ ಸೀಟುಗಳ ಪೈಕಿ ಶೇ. 45ರಷ್ಟು ಸೀಟನ್ನು ಸಿಇಟಿ, ಶೇ. 30ರಷ್ಟು ಕಾಮೆಡ್ ಕೆ ಮತ್ತು ಶೇ. 25ರಷ್ಟು ಎನ್ ಆರ್ ಐ ಗೆ ಮೀಸಲಿರಿಸಲಾಗಿದೆ.
ಸಿಇಟಿಯ ಇಂಜಿನಿಯರಿಂಗ್ ಸೀಟುಗಳಿಗೆ 65,340 ರೂ. ಮತ್ತು ವಾಸ್ತುಶಿಲ್ಪಕ್ಕೆ 58,806 ರೂ. , ಕಾಮೆಡ್ ಕೆಯಲ್ಲಿ ಇಂಜಿನಿಯರಿಂಗ್ ಸೀಟುಗಳಿಗೆ 1,43,748 ರೂ. ಮತ್ತು ವಾಸ್ತುಶಿಲ್ಪಕ್ಕೆ 2,01,960 ರೂ.ನಿಗದಿಪಡಿಸಲಾಗಿದೆ. ಈ ಬಾರಿ ಖಾಸಗೀ ಕಾಲೇಜಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಸೀಟಿಗೆ 71,834 ರೂ ಶುಲ್ಕ ಆಗಲಿದೆ. ಅದರಂತೆ ಖಾಸಗಿ ಎಂಜಿನಿಯರಿಂಗ್ ಸೀಟಿಗೆ 1.58 ಲಕ್ಷ ಶುಲ್ಕ ಆಗಲಿದೆ.

Leave a Comment