
ಸರ್ಕಾರವು ಮಾಡದ ಯೋಜನೆಗಳನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಹಮ್ಮಿಕೊಳ್ಳುತ್ತಿದೆ ಆ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸುತ್ತಿದೆ : ಪತ್ರಕರ್ತ ಜಿ.ಯು ಭಟ್
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ ಇವರ ವತಿಯಿಂದ ಕೆಳಗಿನಪಾಳ್ಯ ರಾಘವೇಂದ್ರ ಶಿಕ್ಷಣ ಮತ್ತು ಸಾಂಸ್ಕ್ರತಿಕ ಸಂಸ್ಥೆಯಲ್ಲಿ ಆಯೋಜಿಸಿದ ವಿಶೇಷಚೇತನರಿಗೆ ಜನಮಂಗಳ ಯೋಜನೆಯ ಮಂಜೂರಾದ ಸಲಕರಣೆ ವಿತರಣಾ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿ ರಾಜ್ಯದ ಒಂದು ಕೋಟಿಗೂ ಅಧಿಕ ಜನರ ಜನರಿಗೆ ಯೋಜನೆಯ ಲಾಭ ತಲುಪಿದೆ. ವೈದ್ಯಕೀಯ ತರಬೇತಿ, ಉಚಿತ ವಿವಾಹ ಕಾರ್ಯಕ್ರಮದಂತಹ ಅನೇಕ ಮಾನವೀಯ ಯೋಜನೆ ನಡೆಸುತ್ತಿದೆ. ರಾಜ್ಯದ ವಿವಿಧ ಭಾಗದಲ್ಲಿ ಒಂದು ಕೋಟಿಗೂ ಅಧಿಕ ಮೊತ್ತದ ಉಪಕರಣಗಳನ್ನು ನೀಡಿದೆ. ವಿಕಲಾಂಗರಿಗೆ,ಅನಾರೋಗ್ಯ ಪೀಡಿತರಿಗೆ,ಸಂಕಷ್ಟದಲ್ಲಿರುವವರಿಗೆ ಹಣಕಾಸಿನ ನೆರವು ನೀಡಿದೆ. ಅನೇಕ ಜನಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಯೋಜನೆ ಪ್ರಯೋಜನ ಪಡೆದವರು ಸದುಪಯೋಗ ಪಡೆದುಕೊಳ್ಳಬೇಕು ನೀವು ಅಭಿವೃದ್ಧಿ ಹೊಂದಿದರೆ ಅದು ಹೆಗ್ಗಡೆಯವರಿಗೆ ಗೌರವ ಪುಣ್ಯ ಲಭಿಸಿದಂತೆ ಎಂದರು. ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಕನಸಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೂರಾರು ವಿಧದಲ್ಲಿ ಬಡವರಿಗೆ ನೆರವಾಗುತ್ತಿದೆ. ಒಂದು ಕೋಟಿ ಜನರನ್ನು, ರಾಜ್ಯದ ಎಲ್ಲ ಜಿಲ್ಲೆಯನ್ನು ತಲುಪಿದೆ. ಈ ಯೋಜನೆ ಮಾತ್ರ ವಿಶೇಷ ಪ್ರಶಂಸೆಗೆ ಪಾತ್ರವಾಗಿದ್ದು ಸರ್ಕಾರ ನೀಡುವ ಕಳಪೆ ಉಪಕರಣಗಳನ್ನು ಪಡೆದಿರುವವರು ಗೋಳಿಡುತ್ತಿರುವಾಗ ಧರ್ಮಸ್ಥಳ ಯೋಜನೆ ಉತ್ತಮ ಗುಣಮಟ್ಟದ ಉಪಕರಣ ವಿತರಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.

ಯೋಜನೆಯ ಜಿಲ್ಲಾ ನಿರ್ದೆಶಕ ಶಂಕರ ಶೆಟ್ಟಿ ಮಾತನಾಡಿ ಯೋಜನೆ ಹಲವು ಸಮಾಜಮುಖಿ ಕಾರ್ಯ ನಡೆಸುತ್ತಿದೆ. ಬಾಹುಬಲಿ ಮೂರ್ತಿ ಪ್ರತಿಷ್ಟಾಪನೆಯ ಸವಿನೆನಪಿಗಾಗಿ ಗ್ರಾಮಭಿವೃದ್ದಿ ಯೋಜನೆ ಜಾರಿಗೆ ತಂದು ಮಹಾಮಸ್ತಕಾಭಿಷೆಕದ ಸವಿನೆನಪಿಗಾಗಿ ಈ ಜನಮಂಗಳ ಕಾರ್ಯಕ್ರಮದ ಮೂಲಕ ವಿಶೇಷಚೇತರಿಗೆ ನೆರವಾಗುತ್ತಿದೆ. ಹೊನ್ನಾವರ ತಾಲೂಕಿನ 56 ಫಲಾನುಭವಿಗೆ ಈ ಸೌಲಭ್ಯ ನೀಡಿದರೆ ಜಿಲ್ಲೆಯ 232 ಫಲಾನುಭವಿಗಳಿಗೆ ಹಾಗೂ ರಾಜ್ಯದ 4135 ಫಲಾನುಭವಿಗಳಿಗೆ ಒಟ್ಟು 92ಲಕ್ಷದ 39ಸಾವಿರ ಮೊತ್ತದ ಸಲಕರಣೆ ವಿತರಿಸಲಾಗಿದೆ. ಇದು ಯೋಜನೆ ಸದಸ್ಯರಿಗಷ್ಟೆ ಸಿಮೀತವಾಗಿರದೇ ಎಲ್ಲರಿಗೂ ನೀಡುತ್ತಿರುವುದು ಇನ್ನೊಂದು ವಿಶೇಷತೆಯಾಗಿದೆ ಇದರ ಸದುಪಯೋಗ ಪಡೆಯುವಂತೆ ಸೂಚಿಸಿದರು.
ಉತ್ತರಕನ್ನಡ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ಶೇಟ್ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಪಟ್ಟಣ ಪಂಚಾಯತ ಸದಸ್ಯ ಶಿವರಾಜ ಮೇಸ್ತ, ಸುಜಾತ ಮೇಸ್ತ, ಯೋಜನಾಧಿಕಾರಿ ಎಂ.ಎಸ್.ಈಶ್ವರ ಮೇಲ್ವಿಚಾರಕ ರಮೇಶ ನಾಯ್ಕ, ಸೇವಾಪ್ರತಿನಿಧಿ ಮಂಜುಳಾ, ವಿಕ್ಟೊರಿಯಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Comment