
ಹೊನ್ನಾವರ ತಾಲೂಕಿನ ಹಲವು ವರ್ಷದ ಬೇಡಿಕೆಗೆ ಕೊನೆಗೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ತಿವ್ರ ಚರ್ಚೆಗೆ ಕಾರಣವಾಗಿದ್ದ ಹಡಿನಬಾಳ ಗುಂಡಬಾಳ ರಸ್ತೆ ಹಾಗೂ ಗುಂಡಿಬೈಲ್ ಜನಕಡ್ಕಲ್ ರಸ್ತೆಗೆ ರವಿವಾರದಂದು ಶಾಸಕ ಸುನೀಲ ನಾಯ್ಕ ಗುದ್ದಲಿ ಪೂಜೆ ನೇರವೇರಿಸುವ ಮೂಲಕ ರಸ್ತೆ ನಿರ್ಮಾಣದ ಕನಸು ಸಾರ್ವಜನಿಕರಿಗೆ ನನಸಾಗುವತ್ತ ಸಾಗಿದೆ.

ಹೊನ್ನಾವರ ತಾಲೂಕಿನ ವಿವಿಧ ಯೋಜನೆಯಡಿ ಒಂದೆ ದಿನಕ್ಕೆ 5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕ ಗುದ್ದಲಿ ಪೂಜೆ ನೇರಿವೇರಿಸಿದರು. ಹಡಿನಬಾಳದಿಂದ ಗುಂಡಬಾಳ ಸಾಗುವ ರಸ್ತೆಗೆ 2ಕೋಟಿ ವೆಚ್ಚ ಹಾಗೂ ಗುಂಡಿಬೈಲ್ ಜನಕಡಕಲ್ ರಸ್ತೆ 2 ಕೋಟಿ ವೆಚ್ಚದ ರಸ್ತೆಗೆ ಗುದ್ದಲಿಪೂಜೆ ನೇರವೇರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ ನಾನು ಅಧಿಕಾರಕ್ಕೆ ಬಂದ ಬಳಿಕ ಪ್ರತಿಷ್ಟೆಯಾಗಿದ್ದ ಹಿಂದಿನಿಂದಲೂ ನೆನೆಗುದಿಗೆ ಬಿದ್ದಿರುವ ಗುಂಡಬಾಳ ರಸ್ತೆ ಹಾಗೂ ಗುಂಡಿಬೈಲ್ ರಸ್ತೆ ನಿರ್ಮಾಣಕ್ಕೆ ತಲಾ 2 ಕೋಟಿಯಂತೆ ಅನುದಾನ ಬಿಡುಗಡೆಗೊಳಿಸಿ ಭೂಮಿಪೂಜೆ ನೇರವೇರಿಸಲಾಗಿದೆ.

ಈ ಹಿಂದೆಯೆ ಈ ರಸ್ತೆ ಬಗ್ಗೆ ಬೇಡಿಕೆ ಸಲ್ಲಿಸಿದಾಗ ಕಾಣದ ಕೈ ಕೆಲಸ ಮಾಡಿತ್ತು. ಸಮಿಶ್ರ ಸರ್ಕಾರದಿಂದ ಈ ರಸ್ತೆಗೆ ಅನುದಾನ ಬಿಡುಗಡೆಗೆ ತೋಡಕಾಗಿತ್ತು. ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 4 ತಿಂಗಳಿನಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ. ನನ್ನ ಅವಧಿಯಲ್ಲಿ ಚಿಕ್ಕೊಳಿಯವರೆಗೂ ರಸ್ತೆ ಮಾಡಿಯೇ ತೀರುತ್ತೇನೆ. ಇದು ಶತಸಿದ್ದ.ಎಂದು ಆ ಭಾಗದ ಜನರಿಗೆ ಭರವಸೆ ನೀಡಿದರು. ಬಳಿಕ ಹಿಂದಿನ ಅವಧಿಯಲ್ಲಿ ಕೋಟಿ ಅನುದಾನದ ಮಾತು ಕೇಳುತ್ತಿತ್ತು. 2ಸಾವಿರ ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ ಎಂದು ಬ್ಯಾನರ್ ಮೂಲಕ ಪ್ರಚಾರವಾಗುತ್ತಿತ್ತು. ಆದರೆ ರಸ್ತೆ ಮಾತ್ರ ದುಸ್ತಿತಿಯಲ್ಲೆ ಇತ್ತು. ಅಭಿವೃದ್ದಿ ಹರಿಕಾರ ಎಂದು ಸ್ವಯಂಘೋಷಿತ ನಾಯಕತ್ವ ಮನೋಭಾವನೆ ಇಟ್ಟುಕೊಂಡಿದ್ದರು ಎಂದು ಮಾಜಿ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು. ಕೋಟಿ ಅನುದಾನದ ಬಗ್ಗೆ ದಾಖಲೆಯೊಂದಿಗೆ ಚರ್ಚೆಗೆ ಬನ್ನಿ ನಾನು ಸಿದ್ದ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ನಾಗವೇಣಿ ನಾಯ್ಕ, ತಾಲೂಕ ಪಂಚಾಯತ ಸದಸ್ಯ ಆರ.ಪಿ.ನಾಯ್ಕ, ಬಿಜೆಪಿ ಮುಖಂಡರಾದ ಉಮೇಶ ನಾಯ್ಕ, ಗಣಪತಿ ನಾಯ್ಕ ಬಿಟಿ, ಮಂಜುನಾಥ ನಾಯ್ಕ, ವಿಘ್ನೇಶ್ವರ ಹೆಗಡೆ, ಗ್ರಾಮ ಪಂಚಾಯತ ಸದಸ್ಯರು ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಇಂಜನಿಯರ್ ಎನ್. ಎಸ್ ನಾಯ್ಕ ಸೇರಿದಂತೆ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Comment