
ಜೋಯಿಡಾ –
ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪ್ರಸಿದ್ದ ಜಾತ್ರೆ ಉಳವಿ ಜಾತ್ರೆಯ ಅಂಗವಾಗಿ ಉಳವಿ ಮುಖ್ಯ ದ್ವಾರದ ಗೇಟ್ ನ ಟೆಂಡರ್ ಪ್ರಕ್ರಿಯೆ ನಡೆಯಿತು.
ಉಳವಿ ಜಾತ್ರೆಯು ಫೆ 1 ರಿಂದ ಆರಂಭವಾಗಿ ಫೆ 10 ರಂದು ರಥೊತ್ಸವ ನಡೆಯಲಿದ್ದು ಹತ್ತು ದಿನಗಳ ಕಾಲ ಬಂದ ಖಾಸಗಿ ವಾಹನಗಳ ಕರವನ್ನು ಪಡೆಯಲು ಟೆಂಡರ್ ಕರೆಯಲಾಗಿತ್ತು, ಜೋಯಿಡಾ ತಾಲೂಕಿನ ಹಲವಾರು ಜನರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು, ಕೊನೆಯದಾಗಿ ಉಳವಿಯ ವಜೀದ್ ಸೈಯದ ಎಂಬುವವರಿಗೆ 85 ಸಾವಿರಕ್ಕೆ ಉಳವಿ ಮುಖ್ಯ ದ್ವಾರ ವಾಹನ ಕರದ ಟೆಂಡರ್ ನೀಡಲಾಯಿತು.
ಕಳೆದ ಬಾರಿ 1 ಲಕ್ಷ 5 ಸಾವಿರಕ್ಕೆ ಈ ವಾಹನ ಕರದ ಟೆಂಡರ್ ನೀಡಲಾಗಿತ್ತು. ಆದರೆ ಈ ಬಾರಿ ಉಳವಿ ಗ್ರಾ,ಪಂ,ಗೆ ನಷ್ಟ ಉಂಟಾಗಿದೆ.ಎನ್ನುವ ಮಾತುಗಳು ಕೇಳಿ ಬಂದವು.

Leave a Comment