
ಕುಮಟಾ / ಸ್ಕೂಲ್ ಗೇಮ್ ಫೆಡರೇಶನ್ ಆಪ್ ಇಂಡಿಯಾದ ವತಿಯಿಂದ ಅಂಕೋಲಾದಲ್ಲಿ ಜಿಲ್ಲಾ ಮಟ್ಟದ ಸ್ಕೂಲ್ಸ್ ಕಬ್ಬಡ್ಡಿ ಲೀಗ್ ನಡೆಯಲಿದೆ ಎಂದು ಅಮೆಚ್ಚೂರ್ ಕಬ್ಬಡ್ಡಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಮಂಜುನಾಥ ನಾಯ್ಕ ತಿಳಿಸಿದರು.
ತಾಲೂಕಿನ ಖಾಸಗಿ ಹೊಟೆಲ್ ನಲ್ಲಿ ಕರೆದ ಮಾದ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಅಂಕೋಲಾ ತಾಲೂಕಾ ಕ್ರೀಡಾಂಗಣದಲ್ಲಿ ಪೆಬ್ರವರಿ 2 ರಂದು ರಾತ್ರಿ ಹೊನಲು ಬೆಳಕಿನ ಪಂದ್ಯಾವಳಿ ನಡೆಯಲಿದೆ.
ಸಂಸ್ಥೆಯು ಬೇರೆ ಸ್ಥಳಗಳಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುವ ಯೋಜನೆ ಹೊಂದಿದ್ದು ವಿಭಾಗ ಮಟ್ಟದಲ್ಲಿ ವಲಯ ಮಟ್ಟದಲ್ಲಿ , ರಾಜ್ಯ ಮಟ್ಟದಲ್ಲಿ , ರಾಷ್ಟ ಮಟ್ಟದಲ್ಲಿ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ಬಾಲಕ ಬಾಲಕಿಯರಿಗೆ ಪ್ರತಿಯೊಂದು ಹಂತದಲ್ಲೂ ನಗದು ಬಹುಮಾನ ನೀಡಲಾಗುತ್ತದೆ. ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ಆಯ್ಕೆಯಾದ ತಂಡಗಳು ರಾಜ್ಯ ಮಟ್ಟದ ಮತ್ತು ರಾಜ್ಯ ಮಟ್ಟದಿಂದ ಆಯ್ಕೆಯಾದ ತಂಡಗಳು ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುತ್ತವೆ . ರಾಷ್ಟ್ರೀಯ ಲೀಗ್ ಸ್ಪರ್ಧೆಯಲ್ಲಿ ಅಂತಿಮವಾಗಿ ಉಳಿಯುವ ನಾಲ್ಕು ತಂಡಗಳು ವಿದೇಶ ತೆರಳಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಲಿದೆ ಎಂದರು.

ಕಬ್ಬಡ್ಡಿ ಅಸೋಸಿಯೇಶನ್ ತಾಲೂಕಾ ಅಧ್ಯಕ್ಷರಾದ ಗಜಾನನ ನಾಯ್ಕ ಮಾತನಾಡಿ ಸ್ಪರ್ಧೆಯಲ್ಲಿ ಭಾಗವಹಿಸುವ ವಿಧ್ಯಾರ್ಥಿಗಳು ದಿ 01-01-2002 ರ ನಂತರ ಜನಿಸಿರಬೇಕು.ಪ್ರಸ್ತುತ 6 ರಿಂದ 12 ( ಪಿಯುಸಿ) ಓದುತ್ತಿರಬೇಕು.ಬಾಲಕರು 65 ಕೆಜಿ,ಹಾಗೂ ಬಾಲಕಿಯರು 60 ಕೆಜಿಯ ಒಳಗಡೆ ತೂಕ ಹೊಂದಿರಬೇಕು. ಲೀಗ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿ 500 ರೂಗಳ ನೊಂದಣಿ ಮೊತ್ತವನ್ನು ಪಾವತಿಸಬೇಕು. ಊಟ, ವಸತಿ ಹಾಗೂ ಪ್ರಯಾಣದ ಖರ್ಚನ್ನು ಜಿಲ್ಲಾ ಅಸೋಸಿಯೇಷನ್ ಭರಿಸಲಿದೆ. ವಿದ್ಯಾರ್ಥಿಗಳು ಆಧಾರ್ ಕಾರ್ಡ, ಪಾಸ್ ಪೋರ್ಟ, ಅಂಕಪಟ್ಟಿ, ಜನನ ಪ್ರಮಾಣ ಪತ್ರದೊಂದಿಗೆ ಶಾಲಾ ಕಾಲೇಜುಗಳ ಧೃಢೀಕರಿಸಿದ ಎಲ್ಲಾ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು. ಗೆದ್ದ ತಂಡಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ Schoolkabbaddileague.com ಗೆ ಭೇಟಿ ನೀಡಬಹುದು. ಅಲ್ಲದೇ ಜಿಲ್ಲಾ ಮಟ್ಟದ ಪಂದ್ಯಾವಳಿಯನ್ನು ಯಟ್ಯೂಬ್ ಚಾನಲ್ ನ ಮುಖೇನ ಲೈವ್ ಸ್ಕೋರ್ ಸಮೇತ, ಮ್ಯಾಚ್ ನೋಡುವ ಅವಕಾಶವನ್ನು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳ ಪಾಲಕರಿಗೆ ಮೊಬೈಲ್ ಲಿಂಕ್ ನೀಡಲಾಗುವುದು “ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 9480897774, 9520306422 ಗೆ ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಅಮೆಚ್ಚೂರ್ ಕಬ್ಬಡ್ಡಿ ಅಸೋಸಿಯೇಶನ್ ನ ಕಾರ್ಯದರ್ಶಿ ಅನಿಲ್ ಕುಮಾರ್, ಮಂಜುನಾಥ ಹನೆಹಳ್ಳಿ ಉಪಸ್ಥಿತರಿದ್ದರು.

Leave a Comment