
ಕುಮಟಾ/ ಉತ್ತರಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಪ್ರವೀಣ ಕುಮಾರ ಶೆಟ್ಟಿ ಸರ್ಕಾರಿ ಅತಿಥಿ ಗ್ರಹದ ಆವಾರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೀಳಗಿಯ ಕಾರ್ಯಕ್ರಮದಲ್ಲಿ ವಿದೇಶಗಳಲ್ಲಿ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿರುವ ನಮ್ಮ ಜಿಲ್ಲೆಯ ಚಂದ್ರಶೇಖರ ಟಿ. ನಾಯ್ಕ ಹಾಗೂ ನನ್ನನ್ನು ವಿಶೇಷವಾಗಿ ಸನ್ಮಾನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅಂಗವಿಕಲ ಕ್ರೀಡಾ ಪ್ರತಿಭೆಗಳಿವೆ. ಉತ್ತಮ ಸಾಧನೆಯನ್ನೂ ಮಾಡುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೂ ಸರ್ಕಾರದಿಂದ ಆರ್ಥಿಕವಾಗಿ ಯಾವುದೇ ನೆರವು ಸಿಗುತ್ತಿಲ್ಲ. ಇತರ ಜಿಲ್ಲೆಗಳಲ್ಲಿ ಇಂಥ ಪರಿಸ್ಥಿತಿ ಇಲ್ಲ. ಬೇರೆ ಜಿಲ್ಲೆಗಳಲ್ಲಿ ಅಂಗವಿಕಲ ಕ್ರೀಡಾ ಸಾಧಕರಿಗೆ ಜಿಲ್ಲಾಡಳಿತದಿಂದ ಸಾಕಷ್ಟು ಪ್ರೋತ್ಸಾಹ ಹಾಗೂ ಗೌರವ ದೊರೆಯುತ್ತಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಮಾತ್ರ ನಮ್ಮನ್ನು ಕಡೆಗಣಿಸಲಾಗುತ್ತಿದೆ “ಎಂದರು.
ಈ ಸಂಧರ್ಭದಲ್ಲಿ ಅಂಗವಿಕಲ ಕ್ರೀಡಾ ಪಟುಗಳಾದ ಚಂದ್ರಶೇಖರ ತಿಮ್ಮಪ್ಪ ನಾಯ್ಕ ಕರ್ಕಿ, ರಮೇಶ ಚಂದ್ರು ಪಟಗಾರ ಬೆಟ್ಕುಳಿ ಉಪಸ್ಥಿತರಿದ್ದರು.

Leave a Comment