
ಜೋಯಿಡಾ –
ಯಾರೂ ಸ್ವಾಮಿ ನಿಮಗೆ ಹೇಳಿದ್ದು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರಿಗೆ ಅನುಕೂಲವಾಗುವ ರಸ್ತೆ, ಗಟಾರು, ಮನೆ ಮಾಡಲು ಬಿಡಬೇಡಿ ಎಂದು ಹೇಳಿದ್ದು, ಯಾವ ಕಾನೂನಿನಲ್ಲಿ ಈ ರೀತಿ ಇದೆ ಎಂದು ತೋರಿಸಿ , ಸುಮ್ಮನೆ ಜನಪ್ರತಿನಿಧಿಗಳಿಗೆ , ಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಬೇಡಿ ಎಂದು ರವೀಂದ್ರ ನಾಯ್ಕ ಅರಣ್ಯ ಅಧಿಕಾರಿಗಳನ್ನು ತೀವೃ ತರಾಟೆಗೆ ತೆಗೆದುಕೊಂಡರು.
ಅವರು ಇಂದು ಸೋಮವಾರ ಜೋಯಿಡಾದ ತಹಶೀಲ್ದಾರ ಕಚೇರಿಯಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಕುರಿತು ಚರ್ಚಿಸಲು ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದರು, ಸುರ್ಪಿಂ ಕೋರ್ಟನಿಂದ ಆದೇಶವೆ ಇದೆ , ಅರಣ್ಯ ಅತಿಕ್ರಮಣಕ್ಕಾಗಿ ಅರ್ಜಿ ಸಲ್ಲಿಸಿದ ಯಾರೊಬ್ಬನ ಜಮೀನನ್ನು ಅರಣ್ಯ ಇಲಾಕೆ ವಶ ಪಡಿಸಿಕೊಳ್ಳುವಂತಿಲ್ಲ ಎಂದು, ಆದರೆ ಜೋಯಿಡಾದ ಕೆಲ ಭಾಗದ ಅರಣ್ಯ ಅಧಿಕಾರಿಗಳು ,ಸಿಬ್ಬಂದಿಗಳು, ಇಲ್ಲಿಯ ಅತಿಕ್ರಮಣದಾರರ ಮೇಲೆ ದೌರ್ಜನ್ಯ ಮಾಡಿದ್ದಾರೆ, ರೈತರ ಅತಿಕ್ರಮಣ ಭೂಮಿಯಲ್ಲಿ ಕಾಲುವೆ ಹೊಡೆದಿದ್ದಾರೆ, ಇದು ಸರಿಯಲ್ಲ ಹೀಗೆ ಆದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಕೆ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಅರಣ್ಯ ಅತಿಕ್ರಮಣದ ಹೆಸರಿನಲ್ಲಿ ಅರ್ಜಿ ಹಾಕಿದವರಿಗೆ ಹಿಂಸೆ ಕೊಡಬೇಡಿ. ಹೊಸದಾಗಿ ಯಾರಾದರೂ ಅತಿಕ್ರಮಣ ಮಾಡಿದರೆ ನಮಗೆ ಹೇಳಿ ನಾವೇ ಅವರ ಮೇಲೆ ಕೇಸ್ ದಾಖಲಿಸುತ್ತೇವೆ ಎಂದರು,

ಈ ಸಂದರ್ಭದಲ್ಲಿ ಅವರು ಸಭೆಯಲ್ಲಿ ಇದ್ದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಅತಿಕ್ರಮಣದಾರರಿಗೆ ಕಾನೂನಿನ ಅರಿವನ್ನು ಮೂಡಿಸಿದರು, ಸುಮ್ಮನೆ ಕಾನೂನು ಇಲ್ಲದೆ ಅರಣ್ಯ ಅಧಿಕಾರಿಗಳು ಯಾವ ಅರಣ್ಯ ಅತಿಕ್ರಮಣದಾರನ ಮೇಲು ಒತ್ತಾಯದಿಂದ ತೊಂದರೆ ಕೊಡುವಂತಿಲ್ಲ, ತೊಂದರೆ ಕೊಟ್ಟಲ್ಲಿ ನಮಗೆ ತಿಳಿಸಿ ಎಂದರು.
ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾ,ಪಂ,ಅಧ್ಯಕ್ಷ ಅರುಣ ದೇಸಾಯಿ, ಉಳವಿ ಗ್ರಾ,ಪಂ,ಅಧ್ಯಕ್ಷ ಮಂಜುನಾಥ ಮೊಕಾಶಿ, ಆರ್,ಎ,ಭಟ್ಟ, ಆರ್,ವಿ,ದಾನಗೇರಿ, ಗೋಪಾಲ ಭಟ್ಟ , ಇತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಅಧಿಕಾರಿಗಳಾದ ತಹಶೀಲ್ದಾರ ಸಂಜಯ ಕಾಂಬಳೆ, ಜೋಯಿಡಾ ಸಿ,ಪಿ,ಐ ಬಾಬಾ ಸಾಹೇಬ ಹುಲ್ಲನ್ನವರ, ಅರಣ್ಯ ಅಧಿಕಾರಿಗಳಾದ ಎ,ಸಿ,ಎಪ್, ಕೆ,ಎಸ್,ಗೋರವರ್, ಆರ್,ಎಪ್,ಓ ಗಳಾದ ಎಂ, ಕಳ್ಳಿಮಠ, ಮಹೀಮ್ ಜೆನ್ನು, ಅಶೋಕ ಕುಮಾರ, ಇತರರು ಉಪಸ್ಥಿತರಿದ್ದರು.
ಸಾವಿರಾರು ಅರಣ್ಯ ಅತಿಕ್ರಮಣದಾರರು ತಮ್ಮ ಅರ್ಜಿಗಳನ್ನು ಹಿಡಿದುಕೊಂಡು ಜೋಯಿಡಾ ತಹಶೀಲ್ದಾರ ಕಚೇರಿ ಎದುರು ಕುಳಿತುಕೊಂಡು ಕಾದದ್ದು ಕಂಡು ಬಂದಿತು.
Leave a Comment