ಹೊನ್ನಾವರ /ಸ್ಥಳೀಯ ಎಸ್. ಡಿ. ಎಂ. ಪದವಿ ಕಾಲೇಜಿನಲ್ಲಿ ಪ್ಲೇಸ್‍ಮೆಂಟ್ ಸೆಲ್‍ನ ಆಶ್ರಯದಲ್ಲಿ ಬೆಂಗಳೂರು ಮೂಲದ ಪ್ರತಿಷ್ಠಿತ ಹ್ಯಾವ್‍ಲೆಟ್ ಪೆಕ್ಕಾಡ್ ಕಂಪನಿಯ ವತಿಯಿಂದ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಯಿತು. ಅಂತಿಮ ವರ್ಷದ ಪದವಿ ತರಗತಿಗಳಲ್ಲಿ ಓದುತ್ತಿರುವ ಆಸಕ್ತ ಒಟ್ಟೂ 215 ವಿದ್ಯಾರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಒಳಪಟ್ಟು, ಕಂಪನಿ ನಡೆಸಿದ ಪರೀಕ್ಷೆ ಉ. ಆ. & ಊ. ಖ. ರೌಂಡ್‍ಗಳಿಗೆ ಒಳಪಟ್ಟು ಅಂತಿಮವಾಗಿ 9 ವಿದ್ಯಾರ್ಥಿಗಳು ಆಯ್ಕೆಯಾಗಿ 10 ಜನರು ವೇಟಿಂಗ್ ಲಿಸ್ಟನಲ್ಲಿ ಇದ್ದಾರೆ. ಅಮರನಾಥ ಸಿಂಗ್ ನೇತೃತ್ವದ 07 ಜನ ಅಧಿಕಾರಿಗಳು ಕಾಲೇಜಿಗೆ ಆಗಮಿಸಿ ಕ್ಯಾಂಪಸ್ ಸಂದರ್ಶನ ನಡೆಸಿದರು.
ಆರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳನ್ನು ಶಿಕ್ಷಕರಿಂದ ಸೂಕ್ತ ತರಬೇತಿ ಪಡೆದು ಬಳಸಿಕೊಳ್ಳಲು ಕರೆ ನೀಡಿದರು. ಕಂಪನಿಯ ಮ್ಯಾನೇಜರ್ ಅಮರನಾಥ ಸಿಂಗ್‍ರವರು ಆಯ್ಕೆಯ ವಿಧಾನಗಳನ್ನು ವಿವರವಾಗಿ ತಿಳಿಸಿಕೊಟ್ಟರು. ಈ ಕಾಲೇಜಿನ ಪೂರ್ವ ವಿದ್ಯಾರ್ಥಿಗಳಾದ ಪ್ರಶಾಂತ ಪ್ರಭು ಹಾಗೂ ವಿನಾಯಕ ಖಾರ್ವಿ ಇದೇ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಾರ್ಯಕ್ರಮ ಸಂಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಪ್ಲೇಸ್‍ಮೆಂಟ್ ಆಫೀಸರ್ ಡಾ. ಡಿ. ಎಲ್ ಹೆಬ್ಬಾರ ಪ್ರಾಸ್ಥಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಸ್. ಎಂ. ಭಟ್ಟ ಹಾಗೂ ಪ್ರೊ. ಎಂ. ಎಚ್. ಭಟ್ಟ ಉಪಸ್ಥಿತರಿದ್ದರು. ಡಾ. ಶಿವರಾಮ ಶಾಸ್ತ್ರಿ ವಂದಿಸಿದರು. ಕುಮಾರಿ ಪ್ರತಿಭಾ ಹೆಗಡೆ ಪ್ರಾರ್ಥಿಸಿದರು ಹಾಗೂ ಪ್ರೊ. ಪ್ರಶಾಂತ ಹೆಗಡೆ ನಿರ್ವಹಿಸಿದರು
Leave a Comment