ಹೊನ್ನಾವರ ತಾಲೂಕಿನಲ್ಲಿ ನಂಬಿ ಬರುವ ಭಕ್ತರ ಬಯಕೆಯನ್ನು ಈಡೇರಿಸುತ್ತಾಳೆ ಎನ್ನುವ ಪ್ರತಿತಿ ಹೊಂದಿರುವ ಉಪ್ಪೋಣಿಯ ಶ್ರೀ ಚಾಮುಂಡೇಶ್ವರಿ ಪರಿವಾರ ದೇವರ ಸನ್ನಿದಿಯಲ್ಲಿ ಕಳೆದ 3 ದಿನಗಳಿಂದ ಆರಂಭವಾದ ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ ವಾರ್ಷಿಕ ವರ್ಧಂತಿ ಉತ್ಸವ ಶತಚಂಡಿಕಾ ಯಾಗದ ಪೂರ್ಣಾಹುತಿ ಕಾರ್ಯಕ್ರಮ ಬುಧವಾರ ನಡೆಯಿತು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರು ಆರ್ಶಿವಚನ ನೀಡಿ ಜೀವನದಲ್ಲಿ ಪ್ರೀತಿ, ವಿಶ್ವಾಸ ನಂಬಿಕೆಯೇ ನಿಜವಾದ ಧರ್ಮ. ಯಾರು ಧರ್ಮವನ್ನು ಅನುಸರಿಸುತ್ತಾರೆಯೋ ಅವರಿಗೆ ಸುಖ ಸಿಗುತ್ತದೆ. ಧರ್ಮಗಳ ಬಗ್ಗೆ ಮೈಕ್ ಭಾಷಣದಿಂದ ಏಳ್ಗೆ ಸಾಧ್ಯವಿಲ್ಲ. ಜನಜಾಗೃತಿಯ ಮೂಲಕ ಸಾರ್ವಜನಿಕರಿಗೆ ಧರ್ಮದ ಬಗ್ಗೆ ಪ್ರೀತಿ ಬರಬೇಕು. ಆ ನಿಟ್ಟಿನಲ್ಲಿ ನಾವು ಎಲ್ಲರನ್ನು ಪ್ರೀತಿಸಿ ಗೌರವಿಸಬೇಕು. ತಂದೆ ತಾಯಿಯರನ್ನು ಗುರುಹಿರಿಯರನ್ನು ಪ್ರೀತಿಸಲು ಗೌರವಿಸಲು ಕಲಿಸಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಲೋಪಗಳಿವೆ. ಗುರುಗಳು ವಿದ್ಯಾರ್ಥಿಗಳಿಗೆ ಪಾಠದ ಜೊತೆ ಸಮಾಜಕ್ಕೆ ಕೊಡುಗೆ ನೀಡಿದ ಸಾಧಕರ ಜಿವನ ಚರಿತ್ರೆಯನ್ನು ಪ್ರತಿನಿತ್ಯ ಕೇಲ ಸಮಯವಾದರೂ ಹೇಳಿದಾಗ ಮಾತ್ರ ಧರ್ಮ ಹಾಗ ದೇಶಾಭಿಮಾನ ಮೂಡಲು ಸಾದ್ಯ. ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಒಳಿತಾಗುವುದಲ್ಲದೇ ಮನಸ್ಸಿಗೆ ಶಾಂತಿ ಸಿಗಲಿದೆ ಎಂದರು.
ಶತಚಂಡಿಕಾಯಾಗದ ಕಾರಣಿಕರ್ತರಾದ ಡಾ ಸಂಜೀವ ನಾಯಕ್ ಮಾತನಾಡಿ ದೇವತಾಕಾರ್ಯವೇ ನಿಜವಾದ ಧರ್ಮ ಕಾರ್ಯ. ಹಿಂದು ಮುಸ್ಲಿಂ, ಕೈಸ್ತ ಸೇರಿಸಂತೆ ನಮ್ಮಲ್ಲಿ ಹುಟ್ಟಿಕೊಂಡಿರುವುದು ಮತಗಳು ಇದು ದರ್ಮಗಳಲ್ಲ. ನಾವು ಮಾಡುವ ಒಳ್ಳೆಯ ಕಾರ್ಯ ಹಾಗೂ ನಡವಳಿಕೆಯೇ ನಿಜವಾದ ಧರ್ಮ. ನಾವು ಮಾಡುವ ಒಳ್ಳೆಯ ಕಾರ್ಯಗಲೀಂದ ಸಮಾಜಕ್ಕೆ ಅನೂಕೂಲವಾಗಬೇಕು ಆ ನಿಟ್ಟಿನಲ್ಲಿ ನಮ್ಮ ಕರ್ತವ್ಯ ಪಾಲಿಸಬೇಕಿದೆ ಎಂದರು.
ದೇವಾಲಯಕ್ಕೆ ಸಹಾಯ ಸಹಕಾರ ಮಾಡಿದ ಮಾಜಿ ಶಾಸಕ ಮಂಕಾಳ ವೈದ್ಯ, ಡಾ ಸಂಜೀವ ನಾಯಕ, ಎಂ.ಆರ್.ನಾಯ್ಕ, ಲಕ್ಷಣ ಉಡುಪಿ, ಜಿ.ಎಚ್.ನಾಯ್ಕ, ತಿಮ್ಮಪ್ಪ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ದೇವಾಲಯದ ಅರ್ಚಕರಾದ ರವಿ ನಾಯ್ಕ, ಗೋವಿಂದ ನಾಯ್ಕ, ಈಶ್ವರ ನಾಯ್ಕ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ವೇದಮೂರ್ತಿ ಸಂತೋಷ ಭಟ್ ಹಾಗೂ ಯೋಗೀಶ ಭಟ್ ಕರ್ಕಿ ಇವರ ಆಚಾಯತ್ವದಲ್ಲಿ ಶತಚಂಡಿಕಾಯಾಗ ಪೂರ್ನಾಹುತಿ,ಕುಂಭಾಬೀಷೇಕ, ಕುಮಾರಕಾ ಪೂಜೆ, ಸುಹಾಸಿನಾ ಪೂಜೆ, ಮಹಾಮಂಗಲರಾತಿ, ತಿರ್ಥಪ್ರಸಾದ ವಿತರಣೆ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನೇರವೇರಿತು ರಾತ್ರಿ ಮಹಾವಿಷ್ಣು ಸಂಘ ಬಳ್ಕೂರ್ ಹಾಗೂ ಅತಿಥಿ ಕಲಾವಿದರಿಂದ ರಾಜಾ ರುದ್ರಕೋಪ ಹಾಗೂ ಜಾಂಬವತಿ ಕಲ್ಯಾಣ ಯಕ್ಷಗಾನ ಕಾರ್ಯಕ್ರಮ ನೇರವೇರಿತು.
Leave a Comment