
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಫೆ. 20 ರಿಂದ 24 ವರೆಗೆ ನಡೆಯಲಿದ್ದು, ವಿವಿಧ ಭಾಗಗಳಿಂದ ವೈವಿಧ್ಯಮಯ ಕಲಾವಿದರು ಮತ್ತು ಕಲಾತಂಡಗಳು ಪಾಲ್ಗೊಳ್ಳುವರು ಎಂದು ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ತಿಳಿಸಿದರು.
ಗುಣವಂತೆಯ ಯಕ್ಷಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. ಫೆ. 20 ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮವನ್ನು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೋ. ಎಂ.ಎ. ಹೆಗಡೆ ಅಧ್ಯಕ್ಷತೆ ವಹಿಸುವರು. ಅರ್ಥಧಾರಿ ಡಾ. ಪ್ರಭಾಕರ ಜೋಶಿ ಅವರು ಅಗಲಿದ ಚೇತನಗಳನ್ನು ಸ್ಮರಿಸುವರು. ಮಾವಿನಕೆರೆ ಕೃಷ್ಣ ಯಾಜಿ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಮೈಸೂರು ಜಿ.ಎಸ್.ಭಟ್ ಬರೆದ `ಇಡಗುಂಜಿ ಮೇಳ 85′ ಕೃತಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸುವರು. ಸಂಸದ ಅನಂತಕುಮಾರ ಹೆಗಡೆ, ಶಾಸಕ ಸುನೀಲ ನಾಯ್ಕ, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ತಿಮ್ಮಪ್ಪ ಭಟ್, ಯಕ್ಷರಂಗದ ಗೋಪಾಲಕೃಷ್ಣ ಭಾಗವತ, ಗ್ರಾ ಪಂ ಅಧ್ಯಕ್ಷೆ ದೇವಿ ಗೌಡ ಪಾಲ್ಗೊಳ್ಳುವರು. ಸಂಜೆ 6-30 ರಿಂದ ಸೈಯದ್ ಸಲ್ಲಾವುದ್ದೀನ್ ಪಾಷಾ ಇವರ ಬಹುಪ್ರಸಿದ್ಧ ವಿಶೇಷ ಚೇತನರ ನೃತ್ಯ, ಬೆಂಗಳೂರು ಕಲಾದರ್ಶಿನಿಯಿಂದ ಯಕ್ಷಗಾನ ಬ್ಯಾಲೆ ಪ್ರದರ್ಶನ ನಡೆಯಲಿದೆ.
ಫೆ. 21 ರಂದು ಸಂಜೆ 5 ಗಂಟೆಗೆ ನಾಟ್ಯೋತ್ಸವ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಯಕ್ಷಗಾನ ವಿದ್ವಾಂಸ ಡಾ. ರಮಾನಂದ ಬನಾರಿ, ಅರ್ಥಧಾರಿ ಎಂ.ಎನ್.ಹೆಗಡೆ, ಯಕ್ಷಗಾನ ಕಲಾವಿದ ಡಾ. ಶ್ರೀಧರ ಭಂಡಾರಿ, ಕಲಾ ಸಂಘಟಕ ಮನ್ಮಥಕುಮಾರ ಸತ್ಪತಿ ಅವರನ್ನು ಸನ್ಮಾನಿಸಲಾಗುವುದು. ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಸಾಹಿತಿ ಜಿ.ಎಸ್.ಭಟ್ ಮೈಸೂರು ಅಧ್ಯಕ್ಷತೆ ವಹಿಸುವರು. ಡಿಎಫ್ಒ ಗಣಪತಿ ಕೆ., ಬರಹಗಾರ ಜೆ.ಪಿ. ಬಸವರಾಜು, ಪತ್ರಕರ್ತ ರವೀಂದ್ರ ಐನಕೈ ಪಾಲ್ಗೊಳ್ಳುವರು. ಸಂಜೆ 6 ರಿಂದ ಓಡಿಸ್ಸಿ ನೃತ್ಯ, ಗೊಂಬೆಯಾಟ, ಜಾನಪದ ತಂಡ, ಓಡಿಶಾದ ಕಲಾವಿದರಿಂದ ಆದಿವಾಸಿ ನೃತ್ಯ ಬಸ್ತರ್ ತಡದಿಂದ.
ಫೆ. 22 ಸಂಜೆ 5 ಗಂಟೆಗೆ ನಾಟ್ಯೋತ್ಸವ ಸನ್ಮಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಾದ ಕೃಷ್ಣ ಗಾಣಿಗ ಜಲವಳ್ಳಕರ್ಕಿ, ಎಂ.ಕೆ.ರಮೇಶ ಆಚಾರ್ಯ, ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ, ಛಾಯಾಗ್ರಾಹಕ ಕೆ.ಎಸ್.ರಾಜಾರಾಮ ಅವರನ್ನು ಸನ್ಮಾನಿಸಲಾಗುವುದು. ಹೊರನಾಡು ಕ್ಷೇತ್ರದ ಡಾ. ಭೀಮೇಶ್ವರ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ, ತಹಸೀಲ್ದಾರ ವಿವೇಕ ಶೇಣ್ವೆ, ಪತ್ರಕರ್ತ ಎಂ.ಕೆ.ಭಾಸ್ಕರ ರಾವ್, ಡಾ. ವಿ. ಜಯರಾಜನ್, ಗಣಪಯ್ಯ ಗೌಡ ಪಾಲ್ಗೊಳ್ಳುವರು.. ಸಂಜೆ 6 ಗಂಟೆಗೆ ಸ್ವರಧಾರ ಸಮ್ಮೇಳದಲ್ಲಿ ಪ್ರಕಾಶ ಹೆಗಡೆ ಕಲ್ಲಾರೆಮನೆ ಕೊಳಲು, ಶಂಕರ ಕಬಾಡಿ ವಾಯಲಿನ್, ಆಸ್ಸಾಂ ತಂಡದ ಜಾನಪದ ನೃತ್ಯ, ಕೇರಳದ ತೊಗಲು ಗೊಂಬೆಯಾಟ ನಡೆಯಲಿದೆ.

ದಿ. 23 ರಂದು ಸಂಜೆ 5 ಗಂಟೆಗೆ ನಾಟ್ಯೋತ್ಸವ ಸನ್ಮಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಎ.ಎಸ್.ನಂಜಪ್ಪ, ಕಲಾ ಸಂಘಟಕ ಪ್ರಭಾಕರ ಹೆಗಡೆ ಚಿಟ್ಟಾಣಿ, ಮದ್ದಲೆ ವಾದಕ ನಾಗೇಶ ಭಂಡಾರಿ ಅವರನ್ನು ಸನ್ಮಾ ನಜಸಲಾಗುವುದು. ಕಟೀಲು ಕ್ಷೇತ್ರದ ಹರಿನಾರಾಯಣ ದಾಸ ಅಸ್ರಣ್ಣ, ಕಟೀಲು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಜಿಲ್ಲಾಧಿಕಾರಿ ಹರೀಶ ಕುಮಾರ್, ಆನಂದ ಪಿ. ಕುಂದರ್, ಡಾ. ಮೋಹನ ಆಳ್ವಾ, ಬರಹಗಾರ ಸೂರಾಲು ದೇವಿಪ್ರಸಾದ ತಂತ್ರಿ, ನೃತ್ಯ ಕಲಾಪರಷತ್ತಿನ ಅಧ್ಯಕ್ಷ ಸಾಯಿ ವೆಂಕಟೇಶ, ಗಣಪಯ್ಯ ಗೌಡ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ದೀಪ್ತಿ ನವರತ್ನ ಅವರಿಂದ ಕರ್ನಾಟಕ ಸಂಗೀತ, ವಿದ್ಯಾ ಅಂಗಾರ ಅವರಿಂದ ಕುಚುಪುಡಿ ಮತ್ತು ಶ್ರೀಹರಿ ಮತ್ತು ಚೇತನ ಅವರಿಂದ ಕಥಕ್ ನೃತ್ಯ ನಡೆಯಲಿದೆ.
ದಿ. 24 ರಂದು ಸಂಜೆ 5 ಗಂಟೆಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಪದ್ಮಶ್ರೀ ಡಾ. ಪದ್ಮಾಸುಬ್ರಹ್ಮಣ್ಯಂ ಇವರಿಗೆ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವನ್ನು ಸಚಿವ ಸಿ.ಟಿ. ರವಿ ಉದ್ಘಾಟಿಸುವರು. ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಶಾಸಕ ಶಿವರಾಮ ಹೆಬ್ಬಾರ, ಗಂಗೂಬಾಯಿ ವಿವಿ ಕುಲಸಚಿವ ನಾಗೇಶ ವಿ. ಬೆಟ್ಟಕೋಟೆ, ತೇಜಸ್ವಿನಿ ಅನಂತಕುಮಾರ, ಸಂಸ್ಕಾರ ಭಾರತಿಯ ಪ.ರಾ. ಕೃಷ್ಣಮೂರ್ತಿ, ಪತ್ರಕರ್ತ ವಿನಾಯಕ ಭಟ್ ಮೂರೂರು, ನಟ ನೀರನಳ್ಳಿ ರಾಮಕೃಷ್ಣ, ಪತ್ರಕರ್ತ ಬಿ..ಆರ್. ವಿಕ್ರಂ ಕುಮಾರ ಪಾಲ್ಗೊಳ್ಳುವರು. ಸಂಜೆ 6-30 ಗಂಟೆಗೆ ಭುವನೇಶ ಕೋಮ್ಕಳಿ, ಕಲಾಪಿನಿ ಕೋಮ್ಕಳಿ ಇವರಿಂದ ಭಕ್ತಿಸಂಗೀತ, ಡಾ. ವಸುಂಧರಾ ದೊರೆಸ್ವಾಮಿ ಅವರಿಂದ ಭರತನಾಟ್ಯ, ಮೋಹನಪ್ರಿಯ ಥವರಾಜ್ ಅವರಿಂದ ನವರಸ ವರ್ಣಂ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ ನಾಟ್ಯೋತ್ಸವದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದವರನ್ನು ಗೌರವಿಸಲಾಗುತ್ತಿದೆ. ಪ್ರತಿದಿನ ಬೆಲಗ್ಗೆ ಅಪೂರ್ವ ಪೂರ್ವ ಸ್ಮರಣೆ ನಡೆಯಲಿದೆ. ಪ್ರತಿದಿನದ ಕಾರ್ಯಕ್ರಮವನ್ನು ಪ್ರತಿನಿತ್ಯ ಕಾರ್ಯಕ್ರಮವನ್ನು ಅಗಲಿದ ಯಕ್ಷಚೇತನಗಳಾದ ಕಲಾವಿದ ರಾಮ ಮಹಾಬಲ ಹೆಗಡೆ, ನೆಬ್ಬೂರು ನಾರಾಯಣ ಭಾಗವತ, ಕೆ.ಎಂ.ಉಡುಪ ಮಂದಾರ್ತಿ, ಡಾ. ಡಿ.ಕೆ.ಚೌಡ, ಹೊಸ್ತೋಟ ಮಂಜುನಾಥ ಭಾಗವತರಿಗೆ ಸಮರ್ಪಿಸಿ ಸ್ಮರಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯ ಶಾಮಸುಂದರ ಭಾಗವತ, ಕೆ.ಜಿ.ಹೆಗಡೆ, ಶ್ರೀಧರ ಹೆಗಡೆ ಉಪಸ್ಥಿತರಿದ್ದರು.

Leave a Comment