
ಹೊನ್ನಾವರ ತಾಲೂಕ ಪಂಚಾಯತ ಸಾಮನ್ಯ ಸಭೆ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು. ಆರಂಭದಲ್ಲಿ ಪ್ರಮುಖ ಇಲಾಖೆಯಾದ ಕೃಷಿ, ಅರಣ್ಯ, ಕಂದಾಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಗೈರಾಗಿರುದಕ್ಕೆ ಆಕ್ರೋಶ ವ್ಯಕ್ತವಾಯಿತು. ಕಳೆದ ಹಲವು ಸಭೆಗೆ ನಿರಂತಂರವಾಗಿ ಗೈರಾಗುವ ಚಿಕ್ಕ ನೀರಾವರಿ, ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತಿ ಸಿ.ಈ.ಓ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿಷ್ಕಾಳಜಿ ತೋರಿಸುತ್ತಾರೆ. ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ವಿಳಂಬವಾಗುತ್ತಿದೆ. ಎಂದು ಅಸಹಾಯಕತೆಯನ್ನು ಅಧ್ಯಕ್ಷರಾದ ಉಲ್ಲಾಸ ನಾಯ್ಕ ವ್ಯಕ್ತಪಡಿಸಿದರೆ ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಅಣ್ಣಯ್ಯ ನಾಯ್ಕ ಅರಣ್ಯ ಇಲಾಖೆಯವರು ನಮಗೆ ಸಭೆಗೆ ಬರಲೆಬೇಕೆಂದು ನಿಯಮವಿಲ್ಲ ಎನ್ನುವ ಬೇಜವ್ಬಾರಿ ಹೇಳಿಕೆ ನೀಡುತ್ತಾರೆ ಎಂದು ಗಂಭೀರ ಆರೋಪ ಮಾಡಿದರು. ಸದಸ್ಯ ಗಣಪಯ್ಯ ಗೌಡ ಮಾತನಾಡಿ ಕಳೆದ ಹಲವು ಸಭೆಗಳಲ್ಲಿ ಈ ವಿಷಯ ಚರ್ಚೆಯಾಗಿದೆ ಈ ಸಂಭದ ಜಿಲ್ಲಾಧಿಕಾರಿಗಳಿಗೆ ನಿಯೋಗ ಹೋಗಲು ಎರಡು ಸಭೆಯ ಹಿಂದೆ ನಿರ್ಣಯವಾಗಿತ್ತು ಆದರೆ ಇದುವರೆಗೂ ಹೋಗಿಲ್ಲ ಈ ಬಗ್ಗೆ ಇನ್ನೊಮ್ಮೆ ದೃಡ ನಿರ್ದಾರ ತೆಗೆದುಕೊಳ್ಳಬೇಕಿದೆ. ಇಂದಿನ ಸಭೆಯಲ್ಲಿ ಈ ಬಗ್ಗೆ ಮತ್ತೊಮ್ಮೆ ಠರಾವು ಮಾಡುವಂತೆ ಆಗ್ರಹಿಸಿದರು.
ನಂತರ ವಿವಿಧ ಇಲಾಖೆಯ ಚರ್ಚೆಯಡಿಯಲ್ಲಿ ಮೊದಲಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು 16 ವರ್ಷದ ಅಂಗವಿಕಲ ವಿದ್ಯಾರ್ಥಿಗೆ ಶಿಕ್ಷಣ ಪಡೆಯಲು ಆಗಮಿಸಲು ಮನೆಯಿಂದ ರಸ್ತೆ ವ್ಯವಸ್ಥೆ ಕಲ್ಪಿಸಲು ಅವಕಾಶ ಕೊಡುತ್ತಿಲ್ಲ ಎನ್ನುವ ವಿಷಯವನ್ನು ಸದಸ್ಯ ತುಕಾರಾಂ ನಾಯ್ಕ ಸಭೆಯ ಗಮನಕ್ಕೆ ತಂದಾಗ ಸರ್ವ ಸದಸ್ಯರು ಈ ಬಗ್ಗೆ ಅಧಿಕಾರಿಗಳಿಗೆ ಕೂಡಲೇ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು. ಅಧ್ಯಕ್ಷ ಉಲ್ಲಾಸ ನಾಯ್ಕ ಮಾತನಾಡಿ ಶಿಕ್ಷಣ ಆರೋಗ್ಯ ವಿಷಯಕ್ಕೆ ತೊಂದರೆಯಾಗದಂತೆ ಪ್ರತಿಯೊಂದು ಇಲಾಖೆಯವರು ಗಮನಹರಿಸಬೇಕು. ಅದರಲ್ಲೂ ಅಂಗವಿಕಲರು ಮಹಿಳೆಯರು ಮಕ್ಕಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಆರೋಗ್ಯ ಇಲಾಖೆ ಚರ್ಚೆಯಲ್ಲಿ ಆಯುಷ್ಮಾನ್ ಭಾರತ ಹಾಗೂ ಆರೊಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ಚರ್ಚೆ ನಡೆದು ಈ ಬಗ್ಗೆ ನಿರ್ಣಯ ಮಾಡುವಂತೆ ಸೂಚಿಸಲಾಯಿತು. ಹೊರಗುತ್ತಿನೆ ನೌಕರರ ನೇಮಕ ಪ್ರಕ್ರಿಯೆ ಎರಡು ದಿನದಲ್ಲಿ ಟೆಂಡರ್ ಆರಂಭವಾಗಲಿದೆ ಎಂದರು. ಅಲ್ಲದೇ ಈ ಬಾರಿ ಸ್ಥಳಿಯರಿಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನಿರ್ಣಯ ಸಲ್ಲಿಸಿದರು. ಅಳ್ಳಂಕಿ ಕೇಂದ್ರದ ಸುತ್ತಲೂ ಕಸಕಡ್ಡಿಗಳಿಂದ ತುಂಬಿಕೊಂಡಿದೆ ಅದನ್ನು ಸ್ವಚ್ಚಗೊಳಿಸಿ ಅಲ್ಲದೇ ಹೊಸಾಡ ಆರೊಗ್ಯಕೇಂದ್ರ ಕಟ್ಟಡ ನಿರ್ಮಾಣವಾಗಿದೆ ಉದ್ಘಾಟನೆಗೆ ವಿಳಂಬವೇಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಕೆಲವು ಪಿಡಿಓ ಗಳು ಜನಸಾಮಾನ್ಯರಿಗೆ ಎನ್.ಓ.ಸಿ ಕೊಡುವಾಗ ಕಾನೂನು ಎಂದು ಸಬೂಬು ಹೇಳುತ್ತಾರೆ. ಅವರ ಕಾರ್ಯ ನಿರ್ವಹಣೆಗೆ ಕಾನೂನು ಸಂಬಂಧವಿಲ್ಲದಂತೆ ವರ್ತಿಸುತ್ತಾರೆ. ಇಂತಹ ಪಿಡಿಓಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಅಧ್ಯಕ್ಷ ಉಲ್ಲಾಸ ನಾಯ್ಕ ಸೂಚಿಸಿದರು. ಕಂದಾಯ ಇಲಾಖೆಯಲ್ಲಿ ಜನ ಸಾಮಾನ್ಯರ ಕೆಲಸ ಆಗುತ್ತಿಲ್ಲ ಎಂದು ಸಭೆಯಲ್ಲಿ ಸದಸ್ಯರು ಆರೋಪಿಸಿದರು. ಪಹಣಿ ಪತ್ರಿಕೆಯಲ್ಲಿ ತಪ್ಪುಗಳನ್ನು ಇಲಾಖೆಯಲ್ಲಿಯೇ ಮಾಡುತ್ತಾರೆ. ನಂತರ ಜನಸಾಮಾನ್ಯರಿಗೆ ಅದನ್ನು ಸರಿಪಡಿಸಲು ಎಸಿ ಕೋರ್ಟಿಗೆ ಹೋಗಿ ಎನ್ನುತ್ತಾರೆ. ಇಲಾಖೆಯವರು ಮಾಡಿದ ತಪ್ಪಿಗೆ ಜನಸಾಮಾನ್ಯರು ದಂಡ ತೆರಬೇಕಾಗುತ್ತಿದೆ ಎಂದು ಅಧ್ಯಕ್ಷ ಉಲ್ಲಾಸ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ ಇಲಾಖೆಯವರು ಪೋಡಿ ಮುಕ್ತ ಗ್ರಾಮ ಮಾಡುತ್ತೇವೆ ಎಂದಿದ್ದರು. ಆದರೆ ಯಾವ ಗ್ರಾಮವನ್ನೂ ಪೋಡಿ ಮುಕ್ತ ಮಾಡಿಲ್ಲ ಎಂದು ಸದಸ್ಯ ಅಣ್ಣಯ್ಯ ನಾಯ್ಕ ಆರೋಪಿಸಿದರು. ಸಾಮಾನ್ಯ ಸಭೆಗೆ ಕಂದಾಯ ಇಲಾಖೆಯ ವತಿಯಿಂದ ಸಿಬ್ಬಂದಿಗಳನ್ನು ಕಳುಹಿಸುತ್ತಾರೆ. ಇದರಿಂದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ. ತಹಸೀಲ್ದಾರರನ್ನು ಸಭೆಗೆ ಆಹ್ವಾನಿಸಿ ಎಂದು ಸದಸ್ಯೆ ಲಕ್ಷ್ಮೀ ಗೊಂಡ ಆಗ್ರಹಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಲಲಿತಾ ನಾಯ್ಕ, ಖಾಜಿ ಮಹ್ಮದ್ ಇರ್ಷಾದ್ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕರೀಂ ಅಸದಿ ಉಪಸ್ಥಿತರಿದ್ದರು.

Leave a Comment