
ಜೋಯಿಡಾ ;
ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪಾಸ್ ವ್ಯವಸ್ಥೆಯಿಂದಾಗಿ ಸರಿಯಾದ ಸಮಯಕ್ಕೆ ಸರ್ವರ್ ಇಲ್ಲದೆ ಪಡಿತರದಾರರಿಗೆ ಪಡಿತರ ವಿತರಿಸಲು ಸಮಸ್ಯೆ ಉಂಟಾಗುತ್ತಿದ್ದು, ಕೂಡಲೇ ಪಾಸ್ ವ್ಯವಸ್ಥೆಯನ್ನು ತಾಲೂಕಿನ ಮಟ್ಟಿಗೆ ವಿನಾಯತಿ ನೀಡಿ, ನಾನ್ ಪಾಸ್ ವ್ಯವಸ್ಥೆಗೊಳಿಸುವ ಮೂಲಕ ಪಡಿತರ ವಿತರಣೆ ಸುಗಮಗೊಳಿಸಬೇÉಕೆಂದು ನ್ಯಾಯಬೆಲೆ ಅಂಗಡಿ ವರ್ತಕರು ತಹಶೀಲ್ದಾರ ಜೋಯಿಡಾ ರವರಿಗೆ ವಿನಂತಿಸಿದ್ದಾರೆ.
ಜೋಯಿಡಾ ತಾಲೂಕಿನಲ್ಲಿ ಬಿ.ಎಸ್.ಎನ್.ಎಲ್. ಅಂತರಜಾಲದ ತೊಂದರೆಯಿಂದಾಗಿ ಪಡಿತರ ದಾನ್ಯವನ್ನು ಪಾಸ್ ಮೂಲಕ ವಿತರಿಸಲು ಸರ್ವರ್ ಬ್ಯೂಸಿ ಬರುತ್ತಿದ್ದು, ಪಡಿತರ ದಾರರು ಬಾಯೋಮೇಟ್ರಿಕ್ ಮೂಲಕ ಪಡಿತರ ಪಡೆಯಲು ದಿನಗಟ್ಟಲೆ ನ್ಯಾಯಬೆಲೆ ಅಂಗಡಿಯಲ್ಲಿ ಕುಳಿತರೂ ಸರ್ವರ ಬ್ಯೂಸಿಯಿಂದಾಗಿ ಪಡಿತರ ಪಡೆಯಲಾಗುತ್ತಿಲ್ಲ. ಇದರಿಂದಾಗಿ ದೂರದೂರದ ಗ್ರಾಮೀಣ ಭಾಗದ ರೈತರು, ಕೂಲಿಕಾರ್ಮಿಕರು ಕೆಲಸವನ್ನು ಬಿಟ್ಟು ಬಂದಿರುತ್ತಿದ್ದು, ಒಂದು ದಿನಕಳೆದರೂ ಪಡಿತರ ಸಿಗದಿದ್ದಾಗ ರೊಚ್ಚಿಗೇಳುತ್ತಿದ್ದು, ನ್ಯಾಯಬೆಲೆ ಅಂಗಡಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿನ ಪಾಸ್ ವ್ಯವಸ್ಥೆಯನ್ನು ನಾನ್ಪಾಸ್ ಆಗಿ ಪರಿವರ್ತಿಸಿ ಪಡಿತರರಾದ ಸಾರ್ವಜನಿಕರಿಗೆ ಅನುಕೂಲಮಾಡಿಕೊಡಬೇಕೆಂದು ಜೋಯಿಡಾ ಪಾಸ್ ನ್ಯಾಯಬೆಲೆ ಅಂಗಡಿ ವರ್ತಕರು ತಹಶೀಲ್ದಾರ ಜೋಯಿಡಾ ರವರಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.

Leave a Comment