
ಹಳಿಯಾಳ:- ಸಣ್ಣ ಭೂಮಿಯಲ್ಲಿ ಕೃಷಿತನದ ಚಟುವಟಿಕೆಯಲ್ಲಿ ಹೊಸತನ ಹಾಗೂ ಆಧುನಿಕ ತಂತ್ರಾಂಶದ ಮೂಲಕ ಕಡಿಮೆ ಹಣದಲ್ಲಿ ಹೆಚ್ಚಿನ ಆದಾಯ ಗಳಿಸುವಲ್ಲಿ ರೈತರು ಗಮನಹಿರಸಬೇಕು ಹೀಗಾದರೇ ರೈತರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂದು ಹಳಿಯಾಳ ಶಾಸಕ ಆರ್ ವ್ಹಿ ದೇಶಪಾಂಡೆ ಅಭಿಪ್ರಾಯಪಟ್ಟರು.
ಇಲ್ಲಿಯ ಕೃಷಿ ಇಲಾಖೆಯ ಆವರಣದಲ್ಲಿ ತೋಟಗಾರಿಕೆ ಇಲಾಖೆ, ಆರ್ಸೆಟ್ ಸಂಸ್ಥೆ ಮತ್ತು ಕೃಷಿ ಇಲಾಖೆಯ ಜಂಟಿ ಸಂಯೋಗದಲ್ಲಿ ನಡೆದ ಕೃಷಿ ಪರಿಕರ ವಿತರಣೆ, ಮಣ್ಣು ಆರೋಗ್ಯ ಮತ್ತು ರೈತರ ಮೇಳವನ್ನು ಉಧ್ಘಾಟಿಸಿ ಮಾತನಾಡಿದರು.
ಸದ್ಯ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಕಠಿಣವಾಗಿದೆ. ದೇಶದಲ್ಲಿ ಉದ್ಯೋಗ ಸೃಷ್ಠಿ ಕಡಿಮೆ ಆಗುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ಒಂದು ಸಮಯದಲ್ಲಿ ದೇಶದ ಜಿ.ಡಿ.ಪಿ. 9.5.ರವರೆಗೆ ತಲುಪಿತ್ತು ಆದರೆ ಸದ್ಯ ಅದರ ಪ್ರಮಾಣ ಕಡಿಮೆಯಾಗಿ 4 ರಿಂದ 5ರವರೆಗೆ ತಲುಪಿದೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.
ರೈತರು ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿರುವ ಹಳಿಯಾಳ ತಾಲೂಕು ಕೃಷಿ ಪ್ರಧಾನ ತಾಲೂಕು ಆಗಿ ಪರಿವರ್ತನೆ ಆಗುತ್ತಿದೆ. ಒಂದು ಸಮಯದಲ್ಲಿ ಹಳಿಯಾಳ ತಾಲೂಕಿಗೆ ಕೇವಲ ಭತ್ತದ ಕಣಜ ಎಂದು ಕರೆಯುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ ಎಂದರು.
ಸರ್ಕಾರ ಕೇವಲ ಸಾಲಮನ್ನಾ ಮಾಡಿದರೆ ಸಾಲದು ಸಾಲಮನ್ನಾದ ಮೊತ್ತ ರೈತರಿಗೆ ಯಾವ ಮಟ್ಟದಲ್ಲಿ ಉಪಯೋಗವಾಗುತ್ತಿದೆ ಅನ್ನುವುದರ ಬಗ್ಗೆ ನೋಡಿಕೊಳ್ಳಬೇಕಿದೆ ಎಂದರು.

ವಿ.ಪ ಸದಸ್ಯ ಎಸ್ ಎಲ್ ಘೋಟ್ನೆಕರ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದಾ ರೈತರ ಪರವಾಗಿ ಕೆಲಸ ಮಾಡಿದೆ. 5 ವರ್ಷದಲ್ಲಿ ಹಂತ-ಹಂತವಾಗಿ ಎಲ್ಲಾ ರೀತಿಯ ಕೃಷಿ ಸಲಕರಣೆಗಳನ್ನು ನೀಡಿದೆ. ಈ ಭಾಗದ ರೈತರು ಪುಣ್ಯವಂತರು ಕಾಂಗ್ರೇಸ್ ಆಡಳಿತ ಅವಧಿಯಲ್ಲಿ ನಿರಿಕ್ಷೆಗೂ ಮೀರಿ ಅನುದಾನಗಳು, ಸಾಲಮನ್ನಾ, ಯೋಜನೆಗಳು, ನೀಡಿದೆ. ಆದರೆ ಬಿಜೆಪಿ ಸರ್ಕಾರ ಸಾಲಮನ್ನಾ ಮಾಡಿದೆ ಆದರೆ ಯಾವ ಲೆಕ್ಕದಲ್ಲಿ ಮಾಡಿದೆ ಗೊತ್ತಿಲ್ಲ, ಆದ್ದರಿಂದ ಕೇವಲ ಬಡ್ಡಿ ಮನ್ನಾ ಮಾಡದೇ ಈ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ತಾಲೂಕಿನ ರೈತರಿಗೆ ತುಂತುರು ನೀರಾವರಿ ಘಟಕಗಳು, ಕೃಷಿ ಯಾಂತ್ರಿಕರಣ, ಕೃಷಿ ಪರಿಕರಗಳು ಮತ್ತು ಚೆಕ್ ವಿತರಣೆ ಮಾಡಲಾಯಿತು. ರೈತ ಆತ್ಮಹತ್ಯೆ ಪ್ರಕರಣದಲ್ಲಿ ಮುತ್ತಲಮುರಿ ಗ್ರಾಮದ ಗೀತಾ ಮಿರಾಶಿ ಇವರಿಗೆ 5ಲಕ್ಷ ರೂ. ಪರಿಹಾರ ಧನ ಚೆಕ್ ಶಾಸಕರು ವಿತರಿಸಿದರು.
ಜಿ.ಪಂ. ಸದಸ್ಯ ಕೃಷ್ಣಾ ಪಾಟೀಲ, ಮಂಜುಶ್ರಿ ಮಿಶಾಳೆ, ತಾ.ಪ ಅಧ್ಯಕ್ಷೆ ರೀಟಾ ಸಿದ್ದಿ, ದೇಮಾಣಿ ಶಿರೋಜಿ, ಗೀರಿಶ ಟೋಸೂರ, ರೈತ ಮುಖಂಡ ಎಂ.ವ್ಹಿ ಘಾಡಿ, ತಹಶೀಲ್ದಾರ ವಿದ್ಯಾಧರ ಗುಳುಗುಳಿ, ತಾ.ಪಂ ಅಧಿಕಾರಿ ಪ್ರವಿಣಕುಮಾರ ಸಾಲಿ, ಕೃಷಿ ಇಲಾಖೆ ಅಧಿಕಾರಿ ಪಾಂಡುರಂಗ ಮಾನೆ, ತೋಟಗಾರಿಕೆ ಇಲಾಖೆಯ ಎ.ಆರ್ ಹೆರಿಯಾಲ್ ಇದ್ದರು.

Leave a Comment