
ಹಳಿಯಾಳ: ನಗರದಕನ್ನಡ ಅಭಿಮಾನಿಗಳ ಬಳಗದ ವತಿಯಿಂದ“ವಾರದಒಂದುತಾಸುಕನ್ನಡದೊಂದಿಗೆ ಸವಿಸು” ಎಂಬ ಮಾಲಿಕೆಯಹತ್ತನೇಯಉಪನ್ಯಾಸ ಮಾಲಿಕೆಇಲ್ಲಿಯ ಸರ್ದಾರ ವಲ್ಲಭಭಾಯಿಪಟೇಲ ಮಕ್ಕಳ ಉದ್ಯಾನವನದಲ್ಲಿರವಿವಾರ ಸಂಜೆ ಯಶಸ್ವಿಯಾಗಿ ಜರುಗಿತು.
ಈ ವಾರ ನಡೆದಉಪನ್ಯಾಸ ಮಾಲಿಕೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳವಾಡ ಸಹಶಿಕ್ಷಕಿಯಾದ ಶ್ರೀಮತಿಭಾರತಿ ನಲವಡೆಯವರು“ಮಹಿಳೆ, ಸಾಹಿತ್ಯ ಮತ್ತು ಸೃಜನಶೀಲತೆ” ಎಂಬ ವಿಷಯದಕುರಿತುಉಪನ್ಯಾಸ ನೀಡಿದರು. ಕೌಟುಂಬಿಕರಥವನ್ನು ನಡೆಸಲು ಸ್ರೀಯ ಮಾತ್ರ ಮಹತ್ವದು, ಮಹಿಳೆಯ ಅನುಭವವೇ ಸಾಹಿತ್ಯದ ಮೂಲಕ ಹೊರಹಾಕುತ್ತಿದ್ದುಜ್ಞಾನನುಭವದ ಸಾಹಿತ್ಯವಾಗಿ ಮಹಿಳಾ ಸಾಹಿತ್ಯ ಮುಂದುವರೆದಿದೆಎಂದುಹೇಳಿದರು.
ಮುಖ್ಯಅತಿಥಿಯಾಗಿ ಆಗಮಿಸಿದಹಿರಿಯ ನಾಗರಿಕರ ವೇದಿಕೆಯಅಧ್ಯಕ್ಷರಾದ ಶ್ರೀ ಜಿ.ಡಿ.ಗಂಗಾಧರರವರುತಾಯಿಯೇ ಮೊದಲ ಗುರು, ಸ್ರೀಯ ಪಾತ್ರವಿಲ್ಲದೆ ಸಮಾಜಅಪೂರ್ಣಎಂದುಹೇಳಿದರು.
ಕೆ.ಎಸ್.ಎಸ್. ಕಾಲೇಜುಉಪನ್ಯಾಸಕ ಶ್ರೀ ಶಾಂತಾರಾಮಚಿಬ್ಬುಲಕರಕಾರ್ಯಕ್ರಮ ನಿರೂಪಿಸಿದರು. ಶ್ರೀ ಸುರೇಂದ್ರ ಬಿರ್ಜೆ ವಂದಿಸಿದರುಕಾರ್ಯಕ್ರಮದಲ್ಲಿಅಶೋಕ ಕಣಿಮೆಹಳ್ಳಿ,ಅಣ್ಣಾಸಾಹೇಬ ದೇಸಾಯಿ, ದಿನೇಶ ನಾಯ್ಕ, ಮಹಾಲಿಂಗೇಶ ಓಸಿಮಠ, ಸುಶೀಲಾ ಪಾಟೀಲ, ಗೋಪಾಲ ತೊರ್ಲೆಕರ, ಮಂಜುನಾಥ ಭಾಗ್ವತ್, ಸಗುಣಾ ಹೆಗಡೆ, ರಮೇಶ ಪಾಟೀಲ, ಫಕಿರಪ್ಪಾ ಕೆ.ಮತ್ತಿತ್ತರುಇದ್ದರು.

Leave a Comment