
ಕುಮಟಾ ; ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೋನ್ನಂವ್ ನ ವಿದ್ಯಾರ್ಥಿನಿ ಲಕ್ಷ್ಮಿ ಪರಮೇಶ್ವರ್ ಉಪ್ಪಾರ್ ಎಂದಿನಂತೆ ಮನೆಯಿಂದ ಕುಮಟಾದ ಗುಡಿಗಾರಗಲ್ಲಿ ಶಾಲೆಗೆ ಹೋಗುತ್ತಿದ್ದಾಗ ಆಕೆಗೆ ರಸ್ತೆಯಲ್ಲಿ ಹಣದ ಕಟ್ಟು ಬಿದ್ದಿರುವುದು ಕಂಡಿದೆ. ತಕ್ಷಣ ಆ ಹಣವನ್ನ ತೆಗೆದುಕೊಂಡ ವಿದ್ಯಾರ್ಥಿನಿ ಶಾಲೆಗೆ ಹೋಗಿ ಶಿಕ್ಷಕರ ಬಳಿ ಕೊಟ್ಟಿದ್ದಾಳೆ ನಾನು ಶಾಲೆಗೆ ಬರುವಾಗ ಈ ಹಣ ಸಿಕ್ಕಿದೆ ಎಂದು ಹೇಳಿದ್ದಾಳೆ. ಆದರೆ ಹಣ ಕಳೆದುಕೊಂಡವರು ಯಾರು ಎನ್ನುವುದು ಯಾರಿಗೂ ಗೋತ್ತಿರಲಿಲ್ಲ.
ಸುಮಾ ಎಂಬ ಮಹಿಳೆ ಧರ್ಮಸ್ಥಳ ಸಂಘದ ಸದಸ್ಯರ ಹಣವನ್ನ ಸೇರಿಸಿಕೊಂಡು ಅದನ್ನ ಸಂಘಕ್ಕೆ ತುಂಬಲು ತೆಗೆದುಕೊಂಡು ಹೋಗುತ್ತಿದ್ದಾಗ ಆ ಮಹಿಳೆಯ ಬಳಿ ಇದ್ದ ಹಣ ರಸ್ತೆಯಲ್ಲಿ ಬಿದ್ದು ಹೋಗಿತ್ತು ಎನ್ನಲಾಗಿದೆ. ಹಣ ಕಳೆದು ಹೋಗಿರುವ ವಿಚಾರವನ್ನ ಸುಮಾ ಎಲ್ಲಾಕಡೆ ಹೇಳಿಕೊಂಡಿದ್ದಾಳೆ.
ಈ ವಿದ್ಯಾರ್ಥಿನಿಗೂ ನನಗೆ ಸಿಕ್ಕಿರುವ ಹಣ ಸುಮಾ ಅವರದೆ ಇರಬೇಕು ಅಂತಾ ಹಣ ಸಿಕ್ಕಿರುವ ವಿಚಾರವನ್ನ ವಿದ್ಯಾರ್ಥಿನಿ ಲಕ್ಷ್ಮಿ ಸುಮಾ ಎಂಬುವವರಿಗೆ ತಿಳಿಸಿದ್ದಾಳೆ. ನಾನು ಶಾಲೆಗೆ ಹೋಗುವಾಗ ಹತ್ತು ಸಾವಿರ ಸಿಕ್ಕಿತ್ತು. ನಾನು ಆ ಹಣವನ್ನ ನಮ್ಮ ಶಾಲೆಯ ಶಿಕ್ಷಕರ ಹತ್ತಿರ ಕೊಟ್ಟಿರುವುದಾಗಿ ವಿದ್ಯಾರ್ಥಿನಿ ಲಕ್ಷ್ಮಿ ಹಣ ಕಳೆದುಕೊಂಡ ಸುಮಾ ಎಂಬುವವರಿಗೆ ತಿಳಿದ್ದಾಳೆ.
ಬಳಿಕ ಶಾಲೆಗೆ ಹೋದ ಮಹಿಳೆ ನಿಮ್ಮ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿಗೆ ಸಿಕ್ಕ ಹತ್ತು ಸಾವಿರ ಹಣ ತನ್ನದೆ ಎಂದು ಹೇಳಿಕೊಂಡ ಬಳಿಕ ಆ ಹಣವನ್ನ ಶಾಲಾ ಶಿಕ್ಷಕರು ವಾಪಸ್ ಮಹಿಳೆಗೆ ತಲುಪಿಸಿದ್ದಾರೆ. ವಿದ್ಯಾರ್ಥಿನಿಯ ಪ್ರಾಮಾಣಿಕತೆ ಶಾಲಾ ಶಿಕ್ಷಕ ವೃಂದ ಹಾಗೂ ಕುಮಟಾ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Leave a Comment