
ಕಾರವಾರ ನಗರದ ಪೊಲೀಸ್ ಮೈದಾನದಲ್ಲಿ ರವಿವಾರ ಜಿಲ್ಲಾಧಿಕಾರಿ ಇಲೆವನ್ ಹಾಗು ಪತ್ರಕರ್ತರ ನಡುವೆ ನಡೆದ ಕ್ರಿಕೆಟ್ ಪಂದ್ಯದಲ್ಲಿ ಜಿಲ್ಲಾಧಿಕಾರಿಗಳ ತಂಡ 2 ರನ್ ಅಂತರದಲ್ಲಿ ಗೆಲುವು ಸಾಧಿಸಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಪ್ರಾರಂಭಿಸಿದ ಡಿಸಿ ಇಲೆವನ್ ತಂಡ 12 ಓವರನ್ ನಲ್ಲಿ 6 ವಿಕೇಟ್ ಕಳೆದು ಕೊಂಡು 104ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪತ್ರಕರ್ತರ ತಂಡ 12 ಓವರಿಗೆ 103 ಗಳಿಸಷ್ಟೇ ಸಾಧ್ಯವಾಗಿ, ಸೋಲುಂಡಿತು.ಡಿಸಿ ಇಲೆವೆನ್ ತಂಡದ ಆರಂಭಿಕ ಆಟಗಾರರಾಗಿ ಮೊದಲು ಬ್ಯಾಟ್ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು 50ರನ್ ಬಾರಿಸಿದರು. ಇನ್ನು ಮಧ್ಯಂತರ ಬ್ಯಾಟ್ಸ್ ಮ್ಯಾನ್ ಆಗಿ ಕಣಕ್ಕೆ ಇಳಿದ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಅವರು ಉತ್ತಮ ಆಟವಾಡುವ ಮೂಲಕ ನಾಟೌಟ್ ಆಗಿ ಉಳಿದ್ದರು.ಪತ್ರಕರ್ತರ ತಂಡ ತನ್ನ ಆರಂಭಿಕ ಬ್ಯಾಟಿಂಗ್ ನಲ್ಲಿ ಅನಾವಶ್ಯಕವಾಗಿ ಒಂದು ವಿಕೇಟ್ ಕಳೆದುಕೊಂಡು, ನಂತರದಲ್ಲಿ ಅತ್ತ್ಯುತ್ತಮ ಆಟ ಪ್ರದರ್ಶಿಸಿದ ದರ್ಶನ್ ನಾಯ್ಕ ಹಾಗೂ ಭರತ್ ರಾಜ್ ಒಂದರ. ಮೇಲೆ ಒಂದರಂತೆ ಸಿಕ್ಸರ್ ಹಾಗೂ ಬಾಂಡರಿಗಳ ಸುರಿಮಳೆ ಗೈದರು. ಆದರೂ ಕೊನೆಯ ಓವರ್ ನಲ್ಲಿ ಗೆಲುವಿಗೆ 5 ರನ್ ಅವಶ್ಯಕತೆಯಿದ್ದು, 3 ರನ್ಷ್ಟೇ ಗಳಿಸಿದ್ದರಿಂದ ಡಿಸಿ ಇಲೆವನ್ ತಂಡ ಗೆಲುವು ಸಾಧಿಸಿತು.ಪಂದ್ಯದಲ್ಲಿ ಪತ್ರಕರ್ತರ ತಂಡದ ದರ್ಶನ್ ನಾಯ್ಕ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಪಡೆದುಕೊಂಡರೆ. ಜಿಲ್ಲಾಧಿಕರಿಗಳ ತಂಡದಲ್ಲಿ ಅಂಕೋಲಾ ಪಿಎಸ್ಐ ಸಂಪತಕುಮಾರ ಉತ್ತಮ ಬೌಲರ್ ಪ್ರಶಸ್ತಿ ಪಡೆದುಕೊಂಡರು.
Leave a Comment