
ಹೊನ್ನಾವರ:ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹೊನ್ನಾವರದ ಯಕ್ಷಕರಾಟೆ ಅಸೋಷಿಯೇಶನ್ ಇದರ ವಿದ್ಯಾರ್ಥಿ ಪ್ರಜ್ವಲ ಶೆಟ್ಟಿ 17 ವರ್ಷ ವಿಭಾಗದ ಕುಮಿಟೆ ವಿಭಾಗದಲ್ಲಿ ಪ್ರಥಮ, ಖಠಾ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ತರಬೇತಿದಾರ ಸೆನ್ಸಿ ರಾಜೇಶ ಪಟಗಾರ, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಸೆನ್ಸಿ ವಾಮನ ಪಾಲನ್ ಅಭಿನಂದಿಸಿದ್ದಾರೆ.

Leave a Comment