
#ದಾಂಡೇಲಿ:- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ
ನಗರದ #ಡಿಎಫ್ಎ #ಮೈದಾನದ ಹತ್ತಿರ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾವನ್ನು ಇಟ್ಟುಕೊಂಡು ಪೇಪರನಲ್ಲಿ ಕಟ್ಟಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ದಾಂಡೇಲಿ ಪೋಲಿಸರು #ನಾಲ್ವರೂ ಯುವಕರನ್ನು ಬಂಧಿಸಿ ಅವರಿಂದ ಸಾವಿರಾರು ರೂ. ಮೌಲ್ಯದ ಗಾಂಜಾ, ಹಣ, ಬೈಕ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ದಾಂಡೇಲಿ ಸಿಪಿಐ ಪ್ರಭು ಗಂಗನಹಳ್ಳಿ ನೇತೃತ್ವದಲ್ಲಿ ಅಪರಾಧ ವಿಬಾಗದ ಪಿ.ಎಸ್.ಐ. ಮಹಾದೇವಿ ನಾಯ್ಕೊಡಿ, ಎ.ಎಸ್.ಐ.-ನಾರಾಯಣ ರಾಠೋಡ, ಎ.ಎಸ್.ಐ.- ದೇವೆಂದ್ರಪ್ಪ ರಾಠೋಡ,
ಪೋಲಿಸ್ ಸಿಬ್ಬಂದಿಗಳಾದ ಪ್ರಶಾಂತ. ನಾಯ್ಕ, ಭೀಮಪ್ಪಾ ಕದರಮಂಡಲಗಿ, ರವಿ ನಾಯ್ಕ, ಮಂಜುನಾಥ ದೇಮಟ್ಟಿ, ಎಫ್.ಎಸ್. ತಡಕೋಡ, ಗೋವಿಂದಪ್ಪ, ಪ್ರವೀಣ ಕಲ್ಲಿಯವರ, ಬಸವರಾಜ, ಆದಪ್ಪಾ, ಶರಣಪ್ಪಾ, ಚಿನ್ಮಯ, ನಾಗರಾಜ, ನಾಗರಾಜ ಹಾಗೂ ಜೀಪ್ ಚಾಲಕರಾದ ಮಹ್ಮದ್ ಹನೀಫ, ದಶರಥ ರವರ ತಂಡವು ಮಾದಕ ದ್ರವ್ಯ ಗಾಂಜಾ ಮಾರಾಟದಲ್ಲಿ ತೊಡಗಿದ್ದ
1)#ಹುಸೇನಸಾಬ @ ಇಮ್ರಾನ್ ತಂದೆ ಹಸನಸಾಬ ಶೇಖ, ಪ್ರಾಯ- 24 ವರ್ಷ, ವೃತ್ತಿ- ಕಬ್ಬಿನ ಹಾಲಿನ ಅಂಗಡಿಯಲ್ಲಿ ಕೆಲಸ, ಸಾ|| ಪಟೇಲನಗರ, ದಾಂಡೇಲಿ,
2)#ಅಶೋಕ ತಂದೆ ದೇಮಣ್ಣಾ ಗುರವ, ಪ್ರಾಯ 22 ವರ್ಷ ವೃತ್ತಿ-ಕೂಲಿ ಕೆಲಸ ಸಾ|| ಮಾರುತಿ ನಗರ, ದಾಂಡೇಲಿ.
3)#ಅಬ್ದುಲ್ಲಾ ಖಾನ ತಂದೆ ಖಾದರ್ ಖಾನ್ ಪಠಾಣ ಪ್ರಾಯ- 18 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಲಮಾಣಿಚಾಳ, ಹಳೇದಾಂಡೇಲಿ,
4)#ಮಹಮ್ಮದಗೌಸ @ ಆಸೀಪ್ ತಂದೆ ಅಬ್ದುಲ ಕುಟ್ಟಿ, ಪ್ರಾಯ-24 ವರ್ಷ, ವೃತ್ತಿ-ಚಿಕನ್ ಅಂಗಡಿಯಲ್ಲಿ ಕೆಲಸ, ಸಾ|| ಸಲೀಂ ಆಸ್ಪತ್ರೆಯ ಹತ್ತಿರ, ಹಳೇದಾಂಡೇಲಿ
ಒಟ್ಟು ನಾಲ್ಕು ಆಪಾದಿತರನ್ನು ಬಂಧಿಸಿದ್ದಾರೆ.
ಬಂಧಿತರಿಂದ
1) 672 ಗ್ರಾಂ ತೂಕದ ಗಾಂಜಾ (ಅಂದಾಜು ಮೌಲ್ಯ 10,000/- ರೂ.),
2) ಸುಜುಕಿ ಗಿಕ್ಸರ್ ಕಂಪನಿಯ ಮೋಟಾರ ಸೈಕಲ್ -01 (ಅಂದಾಜು ಮೌಲ್ಯ 90,000/-ರೂಪಾಯಿ.),
3)TVS NTORQ-125 ಕಂಪನಿಯ ಸ್ಕೂಟಿ-01 (ಅಂದಾಜು ಮೌಲ್ಯ 80,000/- ರೂಪಾಯಿ)
4)ಮೊಬೈಲ್-01 (ಅಂದಾಜು ಮೌಲ್ಯ| 5000/- ರೂಪಾಯಿ.)
5) ನಗದು ಹಣ 550/- ರೂಪಾಯಿ ಹೀಗೇ ಒಟ್ಟೂ 1,80,550/- ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ದಾಂಡೇಲಿ ನಗರ ಪೊಲೀಸ್ ಠಾಣಾ ಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನಿನ ಕ್ರಮ ಜರುಗಿಸಿರುತ್ತಾರೆ.
Leave a Comment