
ಹಳಿಯಾಳ:-ಜಗತ್ತಿಗೆ ಜ್ಞಾನ ನೀಡಿರುವ ಹಿಂದೆ ವಿಶ್ವಗುರುವಾಗಿದ್ದ ಭಾರತ ದೇಶವನ್ನು ಮತ್ತೇ ವೈಭವದ ಸ್ಥಾನಕ್ಕೆ ಕೊಂಡೊಯ್ಯಲು ರಾಷ್ಟ್ರೀಯ ಸ್ವಯಂ ಸೇವಕ (ಆರ್ಎಸ್ಎಸ್) ಸಂಘ ಶ್ರಮಿಸುತ್ತಿದೆ ಎಂದು ಆರ್ಎಸ್ಎಸ್ನ ಕರ್ನಾಟಕ ಉತ್ತರ ಪ್ರಾಂತದ ಸಹಪ್ರಾಂತ ಪ್ರಚಾರಕ ನರೇಂದ್ರಜಿ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಾಗೂ ಆರ್ಎಸ್ಎಸ್ನ ದ್ವಿತೀಯ ಸರಸಂಘ ಚಾಲಕರಾಗಿದ್ದ ಮಾಧವ ಸದಾಶಿವರಾವ್ ಗೋಳ್ವಲಕರ ಗುರೂಜಿ ಅವರ ಜನ್ಮದಿನದ ಅಂಗವಾಗಿ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಶಿವಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ನಡೆದ “ಮಹಾ ಸಾಂಘಿಕ” ಕಾರ್ಯಕ್ರಮದಲ್ಲಿ ನರೇಂದ್ರಜಿ ಮಾತನಾಡಿದರು.
ಆಗರ್ಭ ಶ್ರೀಮಂತ ರಾಷ್ಟ್ರ ಸಾವಿರಾರು ವರ್ಷಗಳ ಕಾಲ ದೇಶದಲ್ಲಿಯ ಸಂಪತ್ತು ಕೊಳ್ಳೆ ಹೋಡೆದರು ಖಾಲಿಯಾಗದೆ ಇರುವ ಅಪಾರ ಸಂಪತ್ತು ಹೊಂದಿರುವ ಭಾರತ ದೇಶ ಎಂದಿಗೂ ಯಾರ ಮೇಲೂ ದಾಳಿ ಮಾಡಲಿಲ್ಲ ಹೊರತು ಎಲ್ಲರೂ ಆನಂದದಿಂದರಲಿ ಎಂದು ಆಶಯ ಹೊಂದಿರುವ ಜಗತ್ತಿನ ಏಕೈಕ ದೇಶವಾಗಿದೆ ಎಂದರು.
ದೇಶದಲ್ಲಿ ಮೇಕ್ಯಾಲೆ ಶಿಕ್ಷಣ ಪದ್ದತಿಯಿಂದ ದೇಶದ ಜನರು ಇಂಗ್ಲೀಷನ ದಾಸ್ಯದಲ್ಲಿ ಇದ್ದಾರೆ. ಇಂದಿಗೂ ಇಂಗ್ಲೀಷ್ನ ದಾಸ್ಯ ಕಡಿಮೆ ಆಗಿಲ್ಲ ಎಂದ ಅವರು ಭಾರತ ದೇಶದ ಬಗ್ಗೆ ಶೃದ್ದೆ ಬೇಕು ದೇಶಪ್ರೇಮ ಎಲ್ಲರಲ್ಲಿ ಇರಬೇಕು ಎಂದು ಕರೆ ನೀಡಿದರು.
ಆರ್ಎಸ್ಎಸ್ ವಿಶ್ವದ ಪ್ರಭಲ ಸಂಘಟನೆಯಾಗಿದ್ದು ಇಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಸಮಾಜ ಸೇವಕರು, ದೇಶಭಕ್ತರು ಇಲ್ಲಿ ತಯಾರಾಗುತ್ತಾರೆ. ದೇಶಕ್ಕೋಸ್ಕರ ಪ್ರತಿದಿನ ಒಂದು ತಾಸು ನೀಡಿ ಎಂದು ಕರೆ ನೀಡಿದ ನರೇಂಧ್ರಜಿ ದೇಶದಲ್ಲಿ ಹಲವು ರೀತಿಯ ಪರಿವರ್ತನೆಯಲ್ಲಿ ಸಂಘದ ಕಾರ್ಯ ಮಹತ್ವದ್ದಾಗಿದೆ ಎಂದರು.
ಜಗತ್ತಿನ ಏಕೈಕ ಯುವ ದೇಶ ಭಾರತವಾಗಿದ್ದು ಮುಂದಿನ ದಿನಗಳಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ, ಅಗ್ರಗಣ್ಯ ಸ್ಥಾನಗಳಲ್ಲಿ ಭಾರತೀಯ ಹಿಂದೂಗಳು ಇರಲಿದ್ದಾರೆ ಎಂದು ಭವಿಷ್ಯ ನುಡಿದ ಅವರು ಎಲ್ಲದರಲ್ಲಿ ದೇವರಿದ್ದಾನೆಂದು ಕೃತಜ್ಞತೆಯಿಂದ ನೋಡುವ ಏಕೈಕ ಧರ್ಮ ಹಿಂದೂ ಧರ್ಮವಾಗಿದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಹಳಿಯಾಳ ಸಿಪಿಐ ಲೊಕಾಪುರ ಬಿಎಸ್ ಮಾತನಾಡಿ ಆರ್ಎಸ್ ಎಸ್ ಸಂಘಟನೆಯ ಸಮಾಜ ಸೇವೆ, ದೇಶ ಸೇವೆಯ ಕಾರ್ಯ ಮೆಚ್ಚುವಂತದ್ದು ಎಂದು ಶ್ಲಾಘಿಸಿದ ಅವರು ಆರ್ ಎಸ್ ಎಸ್ ನವರು ಶಿಸ್ತಿನ ಸಿಪಾಯಿಗಳು ಎಂದು ಕೊಂಡಾಡಿದರು.
ಆರ್ಎಸ್ಎಸ್ನ ಪ್ರಮುಖರಾದ ಪರಮೇಶ್ವರ ಭಟ್, ಅಕ್ಷಯ ಕುಸನೂರ, ರಾಕೇಶ ವಾಣಿ, ಮಹೇಶ ವಾಲೇಕರ, ಸರ್ವೇಶ ಎಸ್,ಕೆ, ಅಪ್ಪಾರಾವ ಪೂಜಾರಿ ಇದ್ದರು. ಕಾರ್ಯಕ್ರಮದಲ್ಲಿ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡರಾದ ಮಂಗೇಶ ದೇಶಪಾಂಡೆ, ರಾಜು ಧೂಳಿ, ಅನಿಲ ಮುತ್ನಾಳೆ ಇತರರು ಇದ್ದರು.

Leave a Comment