

ಅನಾರೊಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಔಷಧಿ ವೆಚ್ಚ ಹಣವನ್ನು ಭರಿಸಿದ್ದರು. ಇಂತವರ ಕಷ್ಟಕ್ಕೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ಸರ್ಕಾರ ಮುಖ್ಯಮಂತ್ರಿ ಪರಿಹಾರ ನಿಧಿ ರೂಪದಲ್ಲಿ ನೆರವಾಗುತ್ತಿದೆ. ಇದರಂತೆಯೆ ಹೊನ್ನಾವರ ತಾಲೂಕಿನ 36 ಜನ ಫಲಾನುಭವಿಗಳಿಗೆ ಸರ್ಕರದಿಂದ ಮಂಜೂರಾದ 9 ಲಕ್ಷ 57ಸಾವಿರದ ಮೂರುನೂರು ರೂಪಾಯಿಯ ಚೆಕ್ ಅನ್ನು ಫಲಾನುಭವಿಗಳಿಗೆ ವಿತರಣೆಯನ್ನು ತಮ್ಮ ಕಾರ್ಯಲಯದಲ್ಲಿ ನೇರವೇರಿಸಿದರು. ನಂತರ ಮಾತನಾಡಿ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿ ರೂಪದಲ್ಲಿ ಕ್ಷೇತ್ರಕ್ಕೆ ತರುವ ಮೂಲಕ ಶ್ರಮವಹಿಸಿದ್ದೇನೆ. ಅನಾರೊಗ್ಯದಿಂದ ಆಸ್ಪತ್ರೆಗೆ ದಾಖಲಾತಿ ಹಣ ಪಾವತಿಸಿದ್ದರೆ ಸಂಭದಿಸಿದ ದಾಖಲಾತಿ ಒದಗಿಸಿದರೆ ಮುಂದಿನ ದಿನದಲ್ಲಿ ಮತ್ತೆ ತರುತ್ತೇನೆ. ಮಧ್ಯಮದ ಮೂಲಕ ಮನವಿ ಮಾಡಿಕೊಳ್ಳುವುದೆನೆಂದರೆ ನಿಮಗೆ ಕಛೇರಿಗೆ ಬಂದು ದಾಖಲಾತಿ ನೀಡಲು ಸಾಧ್ಯವಿಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಮ್ಮ ಆಪ್ತಸಹಾಯಕರು ದಾಖಲಾತಿ ತರಲು ವ್ಯವಸ್ಥೆ ಕಲ್ಪಿಸಿದ್ದೇನೆ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುಬ್ರಾಯ ನಾಯ್ಕ, ಉಮೇಶ ನಾಯ್ಕ, ಗಣಪತಿ ನಾಯ್ಕ ಬಿಟಿ, ಎಂ.ಎಸ್.ಹೆಗಡೆ ಕಣ್ಣಿ, ಮಹೇಶ ನಾಯ್ಕ, ಮತ್ತಿತತರು ಉಪಸ್ಥಿತರಿದ್ದರು.

Leave a Comment