
ಜಾಕಾಯಿ,ಜಾಜಿಕಾಯಿ,ಜಾಪತ್ರೆ, ಜತಿಫಲ್
ಜಾಧಿಕಾಯ್, ಅಟ್ರಮ್,ಜಾತಿಫಲಂ,ಸುರಭಿ,ಜವಂತ್ರಿ,
ಜಾಫಲ್,ಜಾಯಿಕಾಯಿ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಸಾಂಬಾರ ಪದಾರ್ಥಗಳಲ್ಲಿ ಒಂದಾದ
ಹಾಗೂ ಸುವಾಸನೆಭರಿತವಾದ ಜಾಕಾಯಿಯನ್ನು ಭಾರತ,ಬರ್ಮಾ,ಮಲೇಷಿಯಾ,ಇಂಡೋನೇಷಿಯಾ
ಮುಂತಾದ ದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ.
ಜಾಕಾಯಿಗೆ ಸುಗಂಧ ದ್ರವ್ಯಗಳಲ್ಲಿ ಪ್ರತ್ಯೇಕ ಸ್ಥಾನವಿದೆ.ಆಹಾರಕ್ಕೆ ರುಚಿ,ಸುವಾಸನೆ ಹೆಚ್ಚಿಸುತ್ತೆ.
ವಿಶೇಷವಾದ ಪರಿಮಳ ಹಾಗೂ ಔಷಧೀಯ ಗುಣಗಳಿಂದ ಆಯುರ್ವೇದದಲ್ಲಿ ಜಾಕಾಯಿಗೆ ಮಹತ್ವದ ಸ್ಥಾನ ನೀಡಲಾಗಿದೆ.ಪ್ರಪಂಚದಲ್ಲಿ ಎಲ್ಲಾ ಕಡೆ ಬಳಸುವ ಮಸಾಲೆ ಪದಾರ್ಥ ಇದು.
ಜಾಕಾಯಿಯನ್ನು ಅಡಿಗೆಗೆ ಮಾತ್ರವಲ್ಲದೆ, ಆಯುರ್ವೇದ ಔಷಧೀಯವಾಗಿಯೂ,ಆರೋಗ್ಯ
ರಕ್ಷಿಸಿಕೊಳ್ಳಲು ಬಳಸುತ್ತಾರೆ.ಈ ವೃಕ್ಷ ಸುಮಾರು 25 ರಿಂದ 60 ಅಡಿ ಎತ್ತರ ಬೆಳೆಯುತ್ತದೆ.

ಜಾಕಾಯಿ ಮಾನಸಿಕ ಒತ್ತಡವನ್ನು ತಗ್ಗಿಸಿ, ಕಾಮ ವಾಂಚನೆಯನ್ನು ಹೆಚ್ಚಿಸುವುದಲ್ಲದೆ,ವೀರ್ಯ ಕಣಗಳ ಉತ್ಪತ್ತಿಯನ್ನು ವೃದ್ಧಿ ಮಾಡುತ್ತೆ.
ಜಾಕಾಯಿ ನೀರಿನಲ್ಲಿ ಬೇಯಿಸಿ,ನೆರಳಲ್ಲಿ ಒಣಗಿಸಿ, ಚೂರ್ಣ ಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ 5 ಗ್ರಾಂ ನಂತೆ 1 ಲೋಟ ಉಗರು ಬೆಚ್ಚಗಿನ ಹಸುವಿನ ಹಾಲಲ್ಲಿ ಕಲಸಿ ಕುಡಿಯುತ್ತಿದ್ದರೆ,ಪುರುಷರಲ್ಲಿ ನಪುಂಷಕತ್ವ ದೂರವಾಗಿ ವೀರ್ಯಾಣು ವೃದ್ಧಿಸುತ್ತೆ.ದೇಹದಲ್ಲಿ ನರಗಳ ಬಹೀನತೆಯನ್ನು ದೂರಮಾಡುತ್ತೆ.(ಬೇಕಾದ್ರೆ 1 ಚಮಚ ಶುದ್ಧ ಜೇನುತುಪ್ಪ ಅಥವಾ ಕೆಂಪು ಕಲ್ಲು
ಸಕ್ಕರೆ ಬೆರಸಿಕೊಳ್ಳಿ)
ತಾಂಬೂಲದಲ್ಲಿ ಜಾಕಾಯಿ ಸೇರಿಸಿ ಜಗಿದರೆ ಬಾಯಿ ದುರ್ವಾಸನೆ ದೂರವಾಗುತ್ತೆ.ಹಲ್ಲುಗಳ ಮೇಲಿನ ಕಲೆಗಳು ಮಾಯವಾಗುತ್ತೆ.ಅಲ್ಲದೇ ಕ್ರಿಮಿಗಳು ಸಾಯುತ್ತವೆ.
ಜಾಕಾಯಿ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕಲಸಿ ಸೇವಿಸುತ್ತಿದ್ದರೆ ಹೃದಯದಲ್ಲಿನ ನೋವು ಶಮನವಾಗುತ್ತೆ.
ಜಾಕಾಯಿ ಚೂರ್ಣವನ್ನು ಒಂದು ಲೋಟ ಹಾಲಿನಲ್ಲಿ 1 ಚಮಚ ಕಲಸಿ ದಿನವು ಕುಡಿಯುತ್ತಿದ್ದರೆ, ದೇಹದ ಚರ್ಮವು ಕಾಂತಿಯಿಂದ ಹೊಳೆಯುತ್ತೆ.
ದೇಹದ ಚರ್ಮ ಸುಕ್ಕುಗಟ್ಟುವುದಿಲ್ಲ.ಅಧಿಕ ದಾಹವನ್ನು ತಣಿಸುತ್ತೆ.ಮನದಲ್ಲಿನ ಆಂದೋಲನ, ಉದ್ರೇಕವನ್ನು ತಗ್ಗಿಸಿ ಮನಸ್ಸು ಪ್ರಶಾಂತವಾಗಿರಲು ಸಹಕರಿಸುತ್ತೆ.
ಕೆಮ್ಮು, ಕಫ ದೂರವಾಗಿ,ಮೆದಳು ಚುರುಕಾಗಿ ಕೆಲಸ ಮಾಡಲು ಅನವುಮಾಡಿಕೊಡುತ್ತೆ.

ಮೂತ್ರ ಪಿಂಡಗಳಲ್ಲಿನ ಕಲ್ಲು ಕರಗಿಸುವುದಲ್ಲದೆ,ಮೂತ್ರ ಪಿಂಡಗಳು ಸುಗುಮವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತೆ.
ನಿದ್ರಾಹೀನತೆಯಿಂದ ಬಳಲುವರು ಮಲಗುವ 15 ನಿಮಿಷ ಮುನ್ನ, ಜಾಕಾಯಿ ಚೂರ್ಣ 1/2 ಚಮಚ, ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕಿದರೆ ನಿದ್ರೆ ಚೆನ್ನಾಗಿ ಬರುತ್ತೆ.
ಕಿವಿ ನೋವಿದ್ದಾಗ ಜಾಕಾಯಿ ಗಂಧ ತೇಯ್ದು 2-3 ತೊಟ್ಟು ಕಿವಿಯಲ್ಲಿ ಹಾಕಿದ್ರೇ ನೋವು ಶಮನವಾಗುತ್ತೆ.
ಚಿಟಿಕೆ ಜಾಕಾಯಿ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕಲಸಿ ಸೇವಿಸಿದರೆ ಮಾನಸಿಕ ಒತ್ತಡ ಕೆಡಿಮೆಯಾಗಿ, ಮನಸ್ಸು ಪ್ರಶಾಂತವಾಗುತ್ತದೆ.
ದೇಹದ ಚರ್ಮ ಒರಟಾಗಿ ಇದ್ದವರು, ಜಾಕಾಯಿ ಎಣ್ಣೆಯಲ್ಲಿ ಮಸಾಜ್ ಮಾಡಿಕೊಂಡು 1 ಗಂಟೆಯ ನಂತರ ಸ್ನಾನ ಮಾಡಿದರೆ,ಚರ್ಮವು ಮೃದುವಾಗಿ ಕಾಂತಿಯಿಂದ ಹೊಳೆಯುತ್ತೆ.
ವಿ.ಸೂ:- ಗರ್ಭಿಣಿಯರು ಇದನ್ನು ಉಪಯೋಗಿಸಬಾರದು.ಆಯುರ್ವೇದ ಪಂಡಿತರ ಸಲಹೆ ಪಡೆದು ಉಪಯೋಗಿಸಿ.

Leave a Comment