
ಕಾರವಾರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಜೀವಮಾನದ ವೃತ್ತಿ ಸಾಧನೆಗಾಗಿ ಮತ್ತು ಅತ್ಯತ್ತಮ ವರದಿ (ಲೇಖನ)ಗಳಿಗಾಗಿ ಪತ್ರಕರ್ತರಿಗೆ ಕೊಡಮಾಡುವ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಈ ಪೈಕಿ ಅತ್ಯುತ್ತಮ ಕೃಷಿ ವರದಿಗೆ ವರದಿಗಾರ್ತಿ ಸಂಧ್ಯಾ ಹೆಗಡೆ ಆಲ್ಮನೆ ಅವರು ‘ಯಜಮಾನ್ ಟಿ.ನಾರಾಯಣಪ್ಪ ಸ್ಮಾರಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಧ್ಯೇಯನಿಷ್ಠ ಪತ್ರಿಕೆಯ ಮೂಲಕ ಪತ್ರಿಕಾರಂಗಕ್ಕ್ಕೆ ಕಾಲಿಟ್ಟ ಅವರು, ವಿಜಯ ಟೈಮ್ಸ್ನಲ್ಲಿ ಶಿರಸಿ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದರು.
ಸದ್ಯ ಶಿರಸಿಯಲ್ಲಿ ದಿ ಪ್ರಿಂಟರ್ಸ್ ಮೈಸೂರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಯಾಶೀಲ, ಸೃಜನಶೀಲ, ಜನಪರ ವರದಿಗಾರಿಕೆಯಲ್ಲಿ ತೊಡಗಿಕೊಂಡಿರುವ ಅವರು, ಕೃಷಿ ಸೇರಿದಂತೆ ಮಾನವೀಯ ವರದಿಗಳನ್ನು ಅತಿ ಹೆಚ್ಚಾಗಿ ಬರೆಯುತ್ತಿದ್ದಾರೆ.
ಮಾರ್ಚ್ 8ರ ಭಾನುವಾರ ಮಂಗಳೂರಿನ ಟೌನ್ ಹಾಲ್ನಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 35ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
by —- devaraj naik

Leave a Comment