
ಜೋಯಿಡಾ –
ಪಂಚಾಯತ್ ರಾಜ್ ಸಂಸ್ಥೆ ಹಾಗೂ ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆ ತರಬೇತಿ ಕಾರ್ಯಕ್ರಮವನ್ನು ಜೋಯಿಡಾ ತಾಲೂಕಿನ ೧೬ ಗ್ರಾಮ ಪಂಚಾಯತ್ ರಾಷ್ಟ್ರೀಯ ಗ್ರಾಮ ಸ್ವರಾಜ ಯೋಜನೆ ಅಡಿಯಲ್ಲಿ ಅಬ್ದುಲ್ ನಜೀರ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಮೈಸೂರು ಇವರು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರು ಹಾಗೂ ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ಕುರಿತ ಒಂದು ದಿನದ ಕಾರ್ಯಕ್ರಮವನ್ನು ದಿನಾಂಕ ೩ ಫೆ ಇಂದ ೨೬ ಫೆ ತನಕ ಯಶಸ್ವಿಯಾಗಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ತಾಲೂಕಿನ ಒಟ್ಟು 6468 ಶಿಭಿರಾರ್ಥಿಗಳಿಗೆ ತರಬೇತಿ ನೀಡಲಾಯಿತು.
ಇತ್ತಿಚಿಗೆ ಗಾಂಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಗ್ರಾ.ಪಂ.ಅದ್ಯಕ್ಷೆ ಸುನಂದಾ ಹೆಗಡೆ ಮಾತನಾಡಿ ಗ್ರಾಮ ಪಂಚಾಯತಿ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ವಾಸುದೇವ ಭಾಗ್ವತ್ ಸರ್ಕಾರದ ಇತ್ತಿಚಿನ ಯೋಜನೆಗಳು,ಕಾರ್ಯಕ್ರಮ ಗಳು ,ಕಾಯ್ದೆ ಯ ತಿದ್ದುಪಡಿ, ಹಾಗೂ ಗ್ರಾಮ ಸಭೆಗಳ ಮಹತ್ವದ ಬಗ್ಗೆ ಸ್ವಸಹಾಯ ಸಂಘದವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗಾಂಗೋಡಾ ಪಿಡಿಓ ನದಿಲಾಲ್ ಇನಾಮದಾರ, ದಯಾನಂದ ಗಾವಾಡಾ ,ದತ್ತಾ ದೇಸಾಯಿ,ಸುಬ್ರಾಯ ಹೆಗಡೆ, ಕಾರ್ಯಕ್ರಮ ಸಂಯೋಜಕ ಮರಿಸ್ವಾಮಿ,ಮಧುಕರ ಗಾವಾಡಾ ಇತರರು ಜಿ.ಪಾಂಗಿ ,ಇತರರು ಉಪಸ್ಥಿತರಿದ್ದರು.

Leave a Comment