
ಹೊನ್ನಾವರ ;
ಶರಾವತಿ ನದಿ ತೀರದ ಅತಿ ಅಮೂಲ್ಯವಾದ ಸಂಪತ್ತು ಮರಳು ಗಣಿ. ಇದನ್ನು ಕಳೆದ ಹಲವು ವರ್ಷಗಳಿಂದ ಪರವಾನಗಿ ಪಡೆದು ಹಲವು ಸಮಯ ಪರವಾನಗಿ ಇಲ್ಲದೇ ಅಕ್ರಮ ಸಾಗಾಟ ಮಾಡುವ ಮೂಲಕ ಸರ್ಕಾರದ ಆದಾಯ ತಪ್ಪಿಸುತ್ತಿದ್ದರು. ಆದರೆ ಈ ಆದಾಯವನ್ನು ತಪ್ಪಿಸಲು ಮರಳು ಮಾಫಿಯಾದವರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಹಲವು ಬಾರಿ ಸಾರ್ವಜನಿಕರ ಆರೋಪ ಮಾಡಿದರೂ ಸಾಕ್ಷಿ ಸಿಗುತ್ತಿರಲಿಲ್ಲ. ಆದರೆ ಇಂದು ಅಕ್ರಮ ದಾಸ್ತನು ಮಾಡಿರುವ ಸ್ಥಳ ಹೊನ್ನಾವರ ಅರಣ್ಯ ಭಾಗದ ಪ್ರದೇಶವಲ್ಲ ಪಟ್ಟಣದ ಸೆಂಥ್ ಥಾಮಸ್ ಪ್ರೌಡಶಾಲಾ ಮೈದಾನದಲ್ಲಿ. ಸರಿಸುಮಾರು 40ರಿಂದ 50 ಟಿಪ್ಪರ್ನಷ್ಟು ಅಕ್ರಮ ಮರಳು ಶೇಖರಣೆಯಾಗಿದೆ. ಅದು ಕೇವಲ ಎರಡು ಅಥವಾ ಮೂರು ದಿನದೊಳಗೆ ಎನ್ನುವ ಮಾತು ಸ್ಥಳಿಯರು ಹೇಳುತ್ತಾರೆ. ಪಟ್ಟಣದ ಪ್ರಮುಖ ಎಲ್ಲಾ ಸಿಸಿ. ಕ್ಯಾಮರ್ ಬಂದ್ ಆಗಿರುವುದು ಒಂದು ಲಾಭವಾದರೆ ಯಾವೊಬ್ಬ ಅಧಿಕಾರಿಯೂ ಮರಳು ಮಾಫಿಯಾ ತಡೆಯಲು ಮುಂದಾಗದೇ ಇರುವುದು ಇವರಿಗೆ ಶ್ರೀರಕ್ಷೆಯಾಗಿದೆ. ಕಂದಾಯ, ಗಣಿ, ಪೋಲಿಸ್ 3 ಇಲಾಖೆಯಲ್ಲಿ ಅಧಿಕಾರಿಗಳಿದ್ದರೂ ಎಲ್ಲರ ಕಣ್ಣು ತಪ್ಪಿಸಿ ಇಷ್ಟು ಪ್ರಮಾಣದಲ್ಲಿ ಸಂಗ್ರಹ ಮಾಡಲು ಸಾಧ್ಯವೇ ಇಲ್ಲ. 3 ಇಲಾಖೆಯವರು ಕಣ್ಣುಮುಚ್ಚಿ ಕುಳಿತಿದ್ದಾರೆಯೇ ಅಥವಾ ಕಣ್ಣಮುಚ್ಚಾಲೆ ಆಡುವುದರ ಮೂಲಕ ಇವರ ಬೆಂಗಾವಳಿಗೆ ನಿಂತಿದ್ದಾರೆಯೇ? ಎನ್ನುವುದು ತೋರುತ್ತಿಲ್ಲ. ವಿವಿಧ ಇಲಾಖೆ ಇದ್ದು ಜನಸಂಚಾರವಿರುವ ಪ್ರದೇಶದಲ್ಲಿಯೆ ಪಟ್ಟಣ ಭಾಗದಲ್ಲಿ ಈ ಮಟ್ಟಿಗೆ ಮರಳು ದಂದೆ ನಡೆಯುತ್ತಿದ್ದರೆ,

ಗ್ರಾಮೀಣ ಭಾಗದಲ್ಲಿ ಯಾವ ಮಟ್ಟಿಗೆ ನಡೆಯುತ್ತಿರಬಹುದು. ಇನ್ನು ಈ ಮರಳು ಸರ್ಕಾರದ ರಸ್ತೆ ಯೋಜನೆಗೆ ತರಲಾಗಿದೆ ಎಂದು ಕೇಳಿಬರುತ್ತಿದ್ದರೂ ಸರ್ಕಾರದ ಕಾರ್ಯ ಮಾಡಲು ಅಕ್ರಮವೆಸಗಬಹುದೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಒಂದು ಬುಲೆರೋ ಮರಳು ಕೂಡಾ ಹಗಲಿನಲ್ಲಿ ಬರಲಿಲ್ಲ ರಾತ್ರಿ ಬಂದಿರುದರಿಂದ ಇದು ಸಂಪೂರ್ಣ ಅಕ್ರಮವೇ ಎನ್ನುವುದಕ್ಕೆ ಸಾಕ್ಷಿ. ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗೆ ಎನ್ನುವಂತೆ ಶರಾವತಿ ನದಿಯಲ್ಲಿ ಮರಳು ಅಕ್ರಮವೆಲ್ಲ ಮುಗಿದ ಮೇಲೆ ಪರವಾನಗಿ ನೀಡುತ್ತಾರೆನ್ನುವ ಆಕ್ರೋಶದ ಮಾತು ಕೇಳಿ ಬರುತ್ತಿದೆ. ಅಲ್ಲದೇ ಈ ಅಅಕ್ರಮ ಮರಳು ಸಾಗಾಟದಿಂದ ಹೊಳೆಸಾಲು ತೀರದ ನಿವಾಸಿಗಳು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ವರ್ಷ ಬೇಸಿಗೆ ಸಮೀಪಿದರೂ ಮರಳು ದಿಬ್ಬಗಳನ್ನು ಪರಿಶೀಲನೆ ಮಾಡಿದ್ದೇವೆ ಎನ್ನುತ್ತಾರೆ ಹೊರತು ಒಂದು ದಿಬ್ಬಕ್ಕು ಅನುಮತಿ ನೀಡಿಲ್ಲ. ಆದರೂ ಪ್ರತಿನಿತ್ಯ ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ಮರಳು ಸಾಗಾಟವಾದರೆ ಈ ವರ್ಷ ಬೆರಳೆಣಿಕೆಯಷ್ಟು ಮಾತ್ರ ಪ್ರಕರಣ ದಾಖಲಿಸಿ ಸಂಭದಿಸಿದ ಇಲಾಖೆಯ ಅಧಿಕಾರಿಳು ನುಣುಚಿಕೊಳ್ಳುತ್ತಿದ್ದಾರೆ. ಕಾಂಕ್ರೀಟ್ ರಸ್ತೆ, ಸೇತುವೆ, ಮನೆ, ಶೌಚಾಲಯ ನಿರ್ಮಾಣಕ್ಕೆ ಮರಳು ಅವಶ್ಯವಿದೆ. ಪ್ರತಿಬಾರಿಯಂತೆ ಈ ಬಾರಿ ಪಾಸ್ ಕೂಡಾ ನೀಡಿಲ್ಲ. ಆದರೆ ಅಧಿಕಾರಿಗಳ ಮಾಫಿಯಾದಾರರ ನಡುವಿನ ಒಳ ಒಪ್ಪಂದಿಂದ ಈ ಬಾರಿ ಅತಿ ಹೆಚ್ಚು ಮರಳು ಸಂಪತ್ತು ಲೂಟಿಯಾಗಿದೆ, ಸರ್ಕಾರಕ್ಕೆ ಬೆರಳೆಣಿಕಯಷ್ಟು ಪ್ರಕರಣದಿಂದ ದಂಡದ ಹಣ ವಸೂಲಾಗಿದೆ.
………………………….
ನಂಬರ್ ಪ್ಲೇಟ್ ಇಲ್ಲದೇ ರಾತ್ರಿ 9ರಿಂದ ಬೆಳಗಿನ ಜಾವ 6ರವರೆಗೆ ನಿರಂತರವಾಗಿ ಮರಳು ಸಾಗಾಟ ನಡೆಯುತ್ತಿದೆ. ಗಣೆ ಇಲಾಖೆ ಪರವಾನಗಿ ಇಂದಿನವರೆಗೂ ನೀಡಿಲ್ಲ. ಕಂದಾಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಈ ರೀತಿ ಮರಳು ಸಂಗ್ರಹವಾದ ಬಳಿಕವಾದರೂ ಮುಟ್ಟುಗೋಲು ಹಾಕಿಕೊಳ್ಳಬಹುದು ಆ ಕಾರ್ಯಕ್ಕೂ ಮುಂದಾಗದೇ ಇರುವುದು ಗಮನಿಸಿದರೆ ಇವರು ಶಾಮೀಲಾಗಿದ್ದಾರೆ. ಆಡಳಿತ ಯಂತ್ರ ದುರ್ಬಲವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷರು ಸುದರ್ಶನ ಭಟ್
………………………………..
ಸಾಂಪ್ರದಾಯಿಕ ಮರಳು ನಶಿಸಿ ಹೋಗಲು ಅಕ್ರಮ ಮರಳು ಸಾಗಾಟವು ಒಂದು ಕಾರಣ. ಶರಾವತಿ ನದಿಯ ಅಮೂಲ್ಯ ಸಂಪತ್ತು ಅಧಿಕಾರಿಗಳ ಬೇಜವಬ್ದಾರಿಯಿಂದ ಲೂಟಿಯಾಗುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಈಗಲಾದರೂ ಮುಂದಾಗಲಿ ಎಂದು ಆಗ್ರಹಿಸಿದರು.
………………………………
ಮೀನುಗಾರ ಮುಖಂಡರು ಲೊಕೇಶ ಮೇಸ್ತ

Leave a Comment