
ಮಂಗಳೂರು :- ಭಾರತ ತೆರೆ ತುಕಡೆ ಹೊಂಗೆ ಎಂದು ಘೋಷಣೆ ಕೂಗಿದ , ದೇಶದ್ರೋಹದ ಆರೋಪ ಎದುರಿಸುತ್ತಿರುವ ಕನ್ಯಯ್ಯ ಕುಮಾರಗೆ ಮಂಗಳೂರಿನ #ಜೆಪ್ಪು #ಮೊಗರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಹಿಂದೂ ಜನ ಜಾಗೃತಿ ಸಮಿತಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ.
ದಿ. 8-3-2020 ರಂದು ಮಂಗಳೂರಿನ ಜೆಪ್ಪಿನಮೋಗರು ನಲ್ಲಿ CAA, NRC, NPR ಮತ್ತು ದೆಹಲಿ ದಂಗೆಯ ವಿರುದ್ದ ನಡೆಯಲಿರುವ ಕಾರ್ಯಕ್ರಮಕ್ಕೆ ಕನಯ್ಯಗೆ ಬರಲು ಅವಕಾಶ ನೀಡಬಾರದು ಎಂದು ಮಂಗಳೂರಿನ ಪೊಲೀಸ್ ಉಪ ಆಯುಕ್ತರಾದ ಲಕ್ಷ್ಮೀ ಗಣೇಶ್ ಕೆ ಹಾಗೂ ಮಂಗಳೂರಿನ ತಹಶೀಲ್ದಾರ್ ಗೋಪಾಲ ಕೃಷ್ಣ ಇವರ ಮೂಲಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.


Leave a Comment