
ಹೊನ್ನಾವರ ;
ಎಸ್.ಡಿ.ಎಮ್ ಕಾಲೇಜ ಆಟದ ಮೈದಾನದ ಹಿಂಬದಿ ಇರುವ ಅರಣ್ಯ ಇಲಾಖೆಗೆ ಸಂಭಂದ ಪಟ್ಟ ಫಾರೆಸ್ಟ ವೀವ್ ಪಾಯಿಂಟ್ ಒಂದು ಪ್ರೇಕ್ಷಣಿಯ ಸ್ಥಳವಾಗಿದ್ದು ಒಂದು ಕಾಲದಲ್ಲಿ ಸಾರ್ವಜನಿಕರು ಸಂಜೆಯ ಸಮಯ ವಾಯು ವಿಹಾರಕ್ಕಾಗಿ ಹಾಗು ಪರಿವಾರದೊಂದಿಗೆ ಸಮಯ ಕಳೆಯುವ ಉತ್ತಮ ಜಾಗವಾಗಿತ್ತು.
ಆದರ ಸಮಯ ಕಳೆಯುತ್ತದ್ದಂತೆ ಇಂದು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದ್ದು ದುಖ:ಕರ ಸಂಗತಿಯಾಗಿದೆ.
ಯುವಜನರು ಹಾಗೂ ಸುತ್ತಮುತ್ತಲಿನ ಕಾಲೇಜು ವಿಧ್ಯಾರ್ಥಿಯರು ತಮ್ಮ ಜನುಮದಿನ ಆಚರಣೆಗಾಗಿ ಇಲ್ಲಿ ಬಂದು ನಂತರ ತಮ್ಮೋಂದಿಗೆ ತರುವ ತಿನಿಸು, ಕೇಕ್ ಪ್ಯಾಕೇಟ್ ಹಾಗೂ ಮದ್ಯದ ಬಾಟಲಿಯನ್ನು ತಂದು ಈ ಸ್ಥಳದಲ್ಲಿ ಎಸೆದು ಈ ಸ್ಥಳದ ಸೌಂದರ್ಯವನ್ನು ಕೆಡಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ.

ಈ ಹಿಂದೆ ದಿನಾಂಕ 01/03/2020 ರವಿವಾರದಂದು ಯುವ ಬ್ರಿಗೇಡ್, ಸ್ವಚ್ಛ ಹೊನ್ನಾವರ ಬಳಗ ಹಾಗೂ ಪೊಲೀಸ್ ಇಲಾಖೆ ಸೇರಿ ಜಂಟಿಯಾಗಿ ಸ್ವಚ್ಛತೆಯ ಕಾರ್ಯವನ್ನು ಕೈಗೋಂಡು ಎಸ್.ಡಿ.ಎಮ್ ಕಾಲೇಜ ಆಟದ ಮೈದಾನದ ಹಿಂಬದಿ ಇರುವ ಫಾರೆಸ್ಟ ವೀವ್ ಪಾಂಟ್ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಈ ಸಂಧರ್ಬದಲ್ಲಿ ಅಲ್ಲಿ ನೂರಾರು ಬಿಯರ್ ಬಾಟಲಿಗಳು ಹಾಗೂ ಕೇಕ್, ತಿಂಡಿ ತಿನಿಸುಗಳ ಪ್ಯಾಕೇಟ್ ದೊರೆತಿದ್ದವು. ಆದರೆ ಮುಖ್ಯವಾಗಿ ಗಾಂಜಾ ಎಳೆಯಲು ಬಳಸುತ್ತಿರುವ ಸಾಧನಗಳು ದೊರೆತದ್ದು ಅತ್ಯಂತ ಆತಂಕಕಾರಿ ಸಂಗತಿಯಾಗಿತ್ತು.
ಯುವ ಬ್ರಿಗೇಡ, ಸ್ವಚ್ಛ ಹೊನ್ನಾವರ ಬಳಗ, ಫಾರೇಷ್ಟ ಇಲಾಖೆ ವತಿಯಿಂದ 2ನೇ ಹಂತದ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡಾಗ ಕಳೆದ ವಾರ ದೊರೆತ ಬಿಯರ್ ಹಾಗೂ ಮದ್ಯದ ಬಾಟಳಿಗಳಿಗಿಂತ ದುಪ್ಪಟ್ಟು ಕಸ ದೊರೆತಿದ್ದು ಬೆಸರದ ಸಂಗತಿಯಾಗಿದೆ. ಇಲ್ಲಿ ದಿನದಿಂದ ದಿನಕ್ಕೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು ಈ ಪ್ರದೇಶದ ಸುತ್ತಲೂ ಪ್ರೌಢಶಾಲೆ, ಸರ್ಕಾರಿ ಕಾಲೇಜು, ಹೋಲಿ ರೋಸರಿ ಕಾನ್ವೆಂಟ್ ಹಾಗೂ ಪದವಿ ಪೂರ್ವ ಕಾಲೇಜು ಸೇರಿದಂತೆ ನಾಲ್ಕೈದು ಶಿಕ್ಷಣ ಸಂಸ್ಥೆಗಳು ಹೊಂದಿದೆ. ಇಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಂದ ಅಲ್ಲಿನ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು ಮುಂದೊಂದು ದಿನ ಇದು ವಿಕೋಪಕ್ಕೆ ಹೋದರೂ ಆಶ್ಚರ್ಯಪಡುವಂತಿಲ್ಲ.

ಹೊನ್ನಾವರದ ರಮಣೀಯವಾದ ಈ ಪ್ರದೇಶವನ್ನು ಅರಣ್ಯ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖೆ ಹೆಚ್ಚಿನ ಮುತುವರ್ಜಿವಹಿಸಿ ಈ ಪ್ರದೇಶದ ಸುತ್ತಲೂ ಬೇಲಿ ನಿರ್ಮಸಿ ಹಾಗೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಿ ಒಂದು ಪ್ರವಾಸಿ ತಾಣವಾಗಿಸಿದರೆ ಇಲ್ಲಿ ಸಾರ್ವಜನಿಕರ ವೀಕ್ಷಣಗೆ ಬರುವುದು ಹೆಚ್ಚಾಗಬಹುದು, ಇದರಿಂದಾಗಿ ಇಲ್ಲಿ ನಡೆಯುವ ಅಕ್ರಮ, ಅನೈತಿಕ ಚಟುವಟಿಕೆ ಕಡಿಮೆಯಾಗಬಹುದು.

Leave a Comment