
ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳವಿ-ಪಂಚಲಿಂಗೇಶ್ವರ ಮಾರ್ಗ ಸೇರಿದಂತೆ ಶಿವಪೂರ ಕಾಳಿ ನದಿಯವರೆಗಿನ ಪ್ರವಾಸೋಧ್ಯಮ ಇಲಾಖೆಯಿಂದ ಮಂಜೂರಿಯಾದ ಮುಖ್ಯ ಸಂಪರ್ಕ ಮಾರ್ಗದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ಲೋಕೋಪಯೋಗಿ ಇಲಾಖೆ ಕೂಡಲೇ ಆರಂಬಿಸದಿದ್ದರೆ ರಸ್ತೆಗಾಗಿ ಸುತ್ತಲ ಗ್ರಾಮಸ್ಥರು ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿರುತ್ತಾರೆ.
ಈ ಬಗ್ಗೆ ಲೋಕೋಪಯೋಗಿ ಸ.ಕಾ.ನಿ.ಅಭಿಯಂತರರವರಿಗೆ ಇಂದು ಗುರುವಾರ ಮನವಿ ಮಾಡಿದ್ದು, ಕಳೆದ 2017 ರಲ್ಲಿ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬಾಳ,ಗದ್ದೆಮನೆ ನೇತುರ್ಗಾ ಹಾಗೂ ಪಂಚಲಿಂಗೇಶ್ವರ ಗವಿ ಸೇರಿದಂತೆ ಶಿವಪೂರ ಕಾಳಿ ನದಿಯ ದಡದ ವರೆಗೆ ರಸ್ತೆ ಕಾಮಗಾರಿಗೆ ಪ್ರವಾಸೋದ್ಯಮದಿಂದ ಅನುದಾನ ಮಂಜೂರಿಯಾಗಿ ಕೆಲಸ ಆರಂಬಿಸಲಾಗಿತ್ತು. ಆದರೆ ಈ ಕಾಮಗಾರಿ ಅರ್ದಕ್ಕೆ ನಿಂತಿದ್ದು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ ನೆಪವೊಡ್ಡಿ ಕಾಮಗಾರಿ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದಿರುವ ಗ್ರಾಮಸ್ಥರು ಸಾರ್ವಜನಿಕರ ಹಾಗೂ ಪ್ರವಾಸೋದ್ಯಮದ ಸದುದ್ದೇಶದಿಂದ ಸರಕಾರ ಹಾಕಿಕೊಂಡ ಈ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಭಯಾರಣ್ಯ ಸಂರಕ್ಷಿತ ಪ್ರದೇಶವು ಕಂದಾಯ ಭೂಪ್ರದೇಶಕ್ಕೆ ಯಾವುದೇ ಅಡ್ಡಿಯಾಗಬಾರದು ಎನ್ನುವುದು ಅಭಯಾರಣ್ಯ ಕಾಯ್ದೆ ಹಾಗೂ ಸುಪ್ರೀಮ್ ಕೋರ್ಟ ಆದೇಶವಿದ್ದರೂ ಇಲ್ಲಿ ಅಧಿಕಾರಿಗಳು ಸಾರ್ವಜನಿಕರ ಪಾರಂಪರಿಕ ವೈವಾಟಿನ ಸಂಪರ್ಕ ರಸ್ತೆಯ ನಿರ್ಮಾಣಕ್ಕೆ ಅಡ್ಡಿಪಡಿಸುವುದು ಸೂಕ್ತವಲ್ಲ. ಈ ದಿಶೆಯಲ್ಲಿ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಕಂದಾಯ ಗ್ರಾಮಗಳ ಸಂಪರ್ಕ ರಸ್ತೆಗಳ ಅಭಿವೃದ್ದಿಗೆ ಅಡ್ಡಿಪಡಿಸದೇ ಕಾಮಗಾರಿಗೆ ಚಾಲನೆನೀಡಬೇಕೆಂದು ಗ್ರಾಮಸ್ಥರಾದ ಗ್ರಾ.ಪಂ ಉಳವಿ ಅಧ್ಯಕ್ಷರಾದ ಮಂಜುನಾಥ ಮೋಕಾಶಿ, ನರಸಿಂಹ ತಮ್ಮು ಗೌಡಾ, ಗಣೆಶ ಜಿ.ಗೌಡಾ, ಗೋಪಳ ಭಟ್ಟ ಶಿವಪೂರ, ಡಿ.ಆರ್.ಗೌಡಾ, ಶಂಕರ ರ. ಗೌಡಾ, ವಿ.ಜಿ. ಮಿರಾಶಿ, ಕಾಅವೇರಿ ಗೌಡ, ಲಕ್ಷ್ಮಣ ಗೌಡಾ, ವೆಂಕಣ್ಣ ಎನ್.ಗೌಡಾ, ವಾಸುದೇವ ಗೌಡಾ ದಿನಕರ ಟಿ. ಮಿರಾಶಿ, ದಿನಕರ ದೇ.ಮಿರಾಶಿ ಕೃಷ್ಣಾ ಗೌಡಾ ಮುಂತಾದ ನೂರಾರು ಗ್ರಾಮಸ್ಥರು ಇಲಾಖೆಗೆ ಒತ್ತಾಯಿಸಿರುತ್ತಾರೆ. ಈ ಬಗ್ಗೆ ಯಾವುದೇ ಬರುವ 26 ಒಳಗಾಗಿ ನಿರ್ಣಯ ಕೈಗೊಂಡು ಕಾಮಗಾರಿ ಆರಂಬಿಸಬೇಕೆಂದು ಒತ್ತಾಯಿಸಿದ್ದು, ಇಲ್ಲವಾರದೆ ಮಾರ್ಚ 27 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೋಳ್ಳುವುದಗಿ ಎಚ್ಚರಿಸಿರುತ್ತಾರೆ.
ಮಂಜುನಾಥ ಮೋಕಾಶಿ – ಉಳವಿ ಗ್ರಾ,ಪಂ,ಅದ್ಯಕ್ಷರು
ಶಿವಪುರ, ನೆತುರ್ಗಾ,ಹೆಬ್ಬಾಳ ಸೇರಿದಂತೆ ಕೆಲ ಹಳ್ಳಿಗಳಿಗೆ ಸಾಗಬೇಕಾದರೆ ಈ ರಸ್ತೆಯಿಮದಲೇ ಸಾಗಬೇಕು, ಈ ರಸ್ತೆ ಮಾಡಲು ಅರಣ್ಯ ಇಲಾಖೆ ತಡೆ ಮಾಡುತ್ತಿದೆ, ರಸ್ತೆ ಆರಂಭಿಸಲು ತಡೆ ಮಾಡಿದಲ್ಲಿ ದಾಂಡೇಲಿಯ ಮುಖ್ಯ ಅರಣ್ಯ ಇಲಾಖೆಯ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು.
ಗೋಪಾಲ ಭಟ್ಟ – ಸ್ಥಳೀಯರು
ಕಳೆದ 3 ವರ್ಷಗಳಿಂದ ಅರ್ಧ ಮರ್ಧವಾದ ರಸ್ತೆಯಲ್ಲಿ ನಾವು ತಿರುಗಾಡುತ್ತಿದ್ದೇವೆ, ಅರಣ್ಯ ಇಲಾಕೆ ಸುಖಾಸುಮ್ಮನೆ ರಸ್ತೆ ಮಾಡಲು ತಡೆ ಮಾಡುತ್ತಿದೆ, ಮಳೆಗಾಲದಲ್ಲಿ ನಮ್ಮ ಪರಿಸ್ಥತಿ ಹೇಳತಿರದು, ರಾಡಿ ರಸ್ತೆಯಲ್ಲಿ ತಿರುಗಾಡಿ ಸಾಕಾಗಿದೆ. ಇನ್ನೂ ನಾವು ಸುಮ್ಮನ್ನೆ ಕುಳಿತುಕೊಳ್ಳುವುದಿಲ್ಲ ನಮ್ಮ ಹೋರಾಟ ನ್ಯಾಯ ಸುಗುವ ವರೆಗೂ ಇದ್ದೇ ಇರುತ್ತದೆ.

Leave a Comment