
ಹಳಿಯಾಳ:- ಅಜಾತಶತ್ರು ಅನ್ನೊ ಪದವೇ ಅರ್ಥವಿಲ್ಲದ್ದು, ಅದರಲ್ಲೂ ಪತ್ರಕರ್ತರು ಆಜಾತಶತ್ರು ಆಗಲು ಸಾಧ್ಯವೇ ಇಲ್ಲ ಅಲ್ಲದೇ ಪತ್ರಕರ್ತನ ಬರವಣಿಗೆ ನೇರ ದಿಟ್ಟವಾಗಿರಬೇಕು ಎಂದು ನಾಡು ಕಂಡ ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಹೇಳಿದ್ದರು ಎಂದು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ, ವಿಜಯ ಸಂದೇಶ ವಾರಪತ್ರಿಕೆ ಸಂಪಾದಕಿ ಸುಮಂಗಲಾ ಅಂಗಡಿಯವರು ಹೇಳಿದರು.
ಪಾಟಿಲ್ ಪುಟ್ಟಪ್ಪ ಅವರು 2000ನೇ ಸಾಲಿನ ಅಕ್ಬೋಬರ್ 2 ರಂದು ಹಳಿಯಾಳಕ್ಕೆ ಬಂದಿದ್ದರು ಅವರೊಂದಿಗೆ ಕಳೆದ ಸಮಯ ಅವರು ಆಡಿದ ಮಾತುಗಳ ಕುರಿತು ಕಡಲವಾಣಿಗೆ ಮಾಹಿತಿ ನೀಡಿದ ಸುಮಂಗಲಾ ಅಂಗಡಿ ಹಾಗೂ ಬಸವಕೇಂದ್ರ ಹಳಿಯಾಳ ಅಧ್ಯಕ್ಷ ಚಂದ್ರಕಾಂತ ಅಂಗಡಿ ಅವರು 101 ವಯಸ್ಸಾದರೂ ನಾಡಿಗೆ ಪಾಪು ಎಂದೇ ಚಿರಪರಿಚಿತರಾದ ನಾಡೋಜ ಪುಟ್ಟಪ್ಪನವರು ಇನ್ನಿಲ್ಲ ಎಂಬುದೇ ದುಃಖದ ಸಂಗತಿ ಎಂದರು.

ಹಳಿಯಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಸಂಪಾದಕತ್ವದ ವಿಜಯ ಸಂದೇಶ ವಾರಪತ್ರಿಕೆಯ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಅವರು ಸಭೆಯಲ್ಲಿ ಮಾತನಾಡಿ ಎಡದವರಿಗೆ ಹತ್ತಬಾರದು, ಬಲದವರಿಗೆ ಹತ್ತಬಾರದು, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮಕ್ಕೂ ಹತ್ತಬಾರದು ಅಂದರೆ ಏನು ಬರೆಯೊರು ನೀವು ಎಂದು ನಮ್ಮನ್ನು ಪ್ರಶ್ನೀಸಿದ್ದರು ಎಂದ ಅಂಗಡಿ ದಂಪತಿಗಳು ನೇರ ಮತ್ತು ದಿಟ್ಟ ಸ್ವಭಾವದ ವ್ಯಕ್ತಿತ್ವ ಪಾಪು ಅವರದ್ದು ಎಂದರು.
ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಂದರ್ಭದಲ್ಲಿ ಅಂದೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರು ವಾಡಿಕೆಯಂತೆ ತಡವಾಗಿ ವೇದಿಕೆಗೆ ಬಂದು ತಮ್ಮ ಭಾಷಣ ಮುಗಿಸಿ ಹೊರಡಲು ಅನುವಾದ ಬಿಎಸ್ವೈರನ್ನು ಕಂಡು ಕೆಂಡಾಮಂಡಲವಾದ ಪಾಪು ಅವರು ರಾಜಕಾರಣಿಗಳು ಸಭಾ ಗೌರವ ತಿಳಿದುಕೊಳ್ಳಿ. ನನ್ನ ಅಧ್ಯಕ್ಷೀಯ ಭಾಷಣ ಮುಗಿಯುವವರೆಗೆ ಹೊಗುವಂತಿಲ್ಲ ಎಂದು ಕಟ್ಟಪ್ಪಣೆ ಹಾಕಿ ಕೂಡಿಸಿದ್ದನ್ನು ಇಡಿ ಸಭೆ ಕರತಾಂಡನದಿಂದ ಸ್ವಾಗತಿಸಿದ್ದು ಮರೆಯುವಂತಿಲ್ಲ ಎಂದು ಚಂದ್ರಕಾಂತ ಅಂಗಡಿ ಹೇಳಿದರು.
ದಿಟವನ್ನು ದಿಟ್ಟತನದಿಂದ ಹೇಳಬೆಕೆಂಬುದನ್ನು ತಮ್ಮ ನಡೆ ನುಡಿಯಿಂದ ಸಾರಿ ತೊರಿದ ಲಿಂಗೈಕ್ಯ ಪಾಟಿಲ್ ಪುಟ್ಟಪ್ಪನವರಿಗೆ ಶರಣು ಶರಣಾರ್ಥಿ ಎಂದು ಸಂಪಾದಕಿ ಸುಮಂಗಲಾ ಅಂಗಡಿ ತಮ್ಮ ಚುಟುಕು ವಚನದ ಮೂಲಕ ಪಾಪು ಅವರಿಗೆ ಶೃದ್ದಾಂಜಲಿ ಸಲ್ಲಿಸಿದರು.
Leave a Comment