
ಜೋಯಿಡಾ –
ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಗೇಟ್ ಬಳಿ ದಿನಾಂಕ 18 ಮಾರ್ಚದಂದು ಬೆಳಗಿನ ಜಾವ 1 ಘಂಟೆ ಸುಮಾರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮಧ್ಯ ಹಾಗೂ ಜಿ,ಎ,01 ಇ 9875 ಕಾರವೊಂದನ್ನು ಅನಮೋಡದ ಅಬಕಾರಿ ಪೋಲಿಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂದಿತರಾದ ಮಹಮದ್ ಅಲ್ಲಾಸಾಬ ತಾಜೋದ್ದೀನ್, ಮೋಹನ ಎಕನಾಥ ಗಾಂಧೀ ತೆಲಗಾಂಣ ಮೂಲದವರಾಗಿದ್ದು, ವಾಹನ ಚಾಲಕ ಗೌಸಮುದ್ದಿನ ಮಿರ್ ಸಾಭ ಜಮಖಾನ ಪಣಜಿ ಮೂಲದವರಗಿದ್ದು, ಇವರಿಂದ ಗೋವಾ ಅಕ್ರಮ ಸರಾಯಿ 56000 ಸಾವಿರ ಹಾಗೂ ವಾಹನದ ಮೌಲ್ಯ 3 ಲಕ್ಷ ಒಟ್ಟೂ 3 ಲಕ್ಷ 56 ಸಾವಿರದಷ್ಟು ಮೌಲ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಮಾನ್ಯ ಅಬಕಾರಿ ಆಯುಕ್ತರು ಜಾರಿ ಮತ್ತು ತನಿಖೆ ಮಂಗಳೂರು ವಿಭಾಗ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ ,ಮತ್ತು ಮಾನ್ಯ ಅಬಕಾರಿ ಅಧೀಕ್ಷಕರು ಜಾರಿ ಮತ್ತು ತನಿಖೆ ಮಂಗಳೂರು ಇವರ ಮಾರ್ಗದರ್ಶನದಲ್ಲಿ ಅನಮೋಡದ ಅಬಕಾರಿ ಇಲಾಖೆಯ ರೇಷ್ಮಾ ಬಾನವಳಿಕರ ಅಬಕಾರಿ ಉಪ ನಿರಿಕ್ಷಕರು ಅನಮೋಡ, ಸಿಬ್ಬಂದಿಗಳಾದ ಎಸ್,ಬಿ, ಬನಸೋಡಿ,ಸದಾಶಿವ ರಾಥೋಡ, ಉಮೇಶ ತುಳಜಿ ಇತರರು ಉಪಸ್ಥಿತರಿದ್ದರು.
Leave a Comment