
ಜೋಯಿಡಾ ;
ತಾಲೂಕಿನ ಬಾಪೇಲಿ ಕ್ರಾಸ್ನ ಸರಕಾರಿ ಪ್ರೌಢಶಾಲೆಯ ಪ್ರಸಕ್ತ ಸಾಲಿನ 8 ನೇ ತರಗತಿ ವಿದ್ಯಾರ್ಥಿ ಕುಮಾರ ಎನ್.ಓ. ಚಿರಂಜೀವಿ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾನೆ.
ರಾಷ್ಟ್ರೀಯ ವಿಜ್ಷಾನ ಮತ್ತು ಸಂಶೋಧನಾ ಸಂಸ್ಥೆವತಿಯಿಂದ ಕಳೆದ ಫೆಬ್ರವರಿ ತಿಂಗಳಲ್ಲಿ ಜೋಯಿಡಾ ಶ್ರೀ ರಾಮ ಪ್ರೌಢಶಾಲೆಯಲ್ಲಿ ನಡೆದ ಎನ್.ಎಂ.ಎಂ. ಎಸ್. ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಚಿರಂಜೀವಿ ಒರ್ವ ತೇರ್ಗಡೆಯಾಗಿದ್ದು, ಇವನ ಸಾಧನೆಗೆ ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಎಸ್.ಹಿರೇಮಠ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕವರ್ಗ ಹಾಗೂ ಎಸ್.ಡಿ.ಎಮ್.ಸಿ. ಅಧ್ಯಕ್ಷರು,ಸದಸ್ಯರು ಅಭಿನಂದಿಸಿದ್ದಾರೆ.
Leave a Comment