
ಹಳಿಯಾಳ:- ಹಳಿಯಾಳದಲ್ಲಿ ಭಾನುವಾರ ಎಲ್ಲವೂ ಬಂದ್ ಆಗಿತ್ತು. ಯಶಸ್ವಿ ಜನತಾ ಕಫ್ರ್ಯೂ ನಡೆದಿತ್ತು. ಮರುದಿನ ಸೋಮವಾರ ಎಲ್ಲವೂ ಓಪನ್ ಎಲ್ಲೆಡೆ ಜನಜಂಗುಳಿ ಎಲ್ಲೆಡೆ ಫುಲ್ ರಶ್ ಇದು ಹಳಿಯಾಳದ ಕಥೆ.
ಕೊರೊನಾ ವೈರಸ್-ಸಾಂಕ್ರಾಮಿಕ ರೋಗದ ಭಿತಿ ಅದರ ಕರಾಳ ಮುಖದ ಬಗ್ಗೆ ಇನ್ನೂ ಜನತೆಗೆ ಅರಿವು ಬಂದಿಲ್ಲ ಎನ್ನುವಂತೆ ಮಾರುಕಟ್ಟೆಗಳಲ್ಲಿ, ದಿನಸಿ, ಬೇಕರಿ ಅಂಗಡಿಗಳಲ್ಲಿ ಗುಂಪು ಗುಂಪಾಗಿ ಜನ ಸೇರಿ ಅಗತ್ಯ ವಸ್ತುಗಳನ್ನು ಖರಿದಿಸಿರು. ಇಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಮಾಸ್ಕ್ ಧರಿಸಿದ್ದರೇ ಯಾರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎನ್ನುವುದು ಇನ್ನೊಂದು ವಿಚಾರ.
ಭಾನುವಾರ ಸಂಪೂರ್ಣ ಯಶಸ್ವಿಯಾಗಿ ಜನತಾ ಕಫ್ರ್ಯೂ ಆಚರಿಸಿದ್ದ ಹಳಿಯಾಳದ ಜನತೆ ಸೋಮವಾರ ಇದಕ್ಕೆ ಸಂಪೂರ್ಣ ತದ್ವಿರುದ್ದವಾಗಿ ನಡೆದುಕೊಂಡರು. ಪಟ್ಟಣದ ಮಾರುಕಟ್ಟೆ, ಕಿರಾಣಿ, ಬೇಕರಿ ಇತರ ಎಲ್ಲ ಅಂಗಡಿಗಳು ಹೌಸ್ ಫುಲ್ ಆಗಿದ್ದು ಕಂಡು ಬಂದಿತು.
ಕೊರೊನಾ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಇದನ್ನು ತಡೆಗಟ್ಟಲು ಜನರು ಅಂತರವನ್ನು ಕಾಯ್ದುಕೊಳ್ಳಬೇಕು, ಗುಂಪಾಗಿ ಸೇರಬೇಡಿ ಎನ್ನುವ ಖಡಕ್ ಆದೇಶವನ್ನು ಸರ್ಕಾರ ಈಗಾಗಲೇ ನಿಡಿದೆ ಆದರೇ ಜನರು ಇದಕ್ಕೆ ಕ್ಯಾರೆ ಎನ್ನದಿರುವುದು ಬಹುದೊಡ್ಡ ಕಂಕಟವನ್ನು ಮೈಮೆಲೆ ಹಾಕಿಕೊಳ್ಳುವಂತೆ ಕಾಣಿಸುತ್ತಿದೆ.
ಹಳಿಯಾಳದಲ್ಲಿ ಭಾನುವಾರ ಮಾತ್ರ ಕಫ್ರ್ಯೂ ಕಂಡು ಬಂದಿತು ಆದರೇ ಸೋಮವಾರ ಹಳಿಯಾಳ ಜನಜಂಗುಳಿಯಿಂದ ತುಂಬಿತ್ತು. ಯಾರಿಗೂ ಕೊರೊನಾ ವೈರಸ್ನ ಕರಾಳ ಮುಖದ ಬಗ್ಗೆ ಮಾಹಿತಿಯೇ ಇಲ್ಲದಂತೆ ಗುಂಪು ಗುಂಪಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟರು. ಕಿರಾಣಿ, ದಿನಸಿ, ಬೇಕರಿ ಇತರ ಎಲ್ಲ ವಸ್ತುಗಳನ್ನು ಖರೀದಿಸಿಲು ಜೊತೆಗೆ ಮಟನ್, ಚಿಕನ್, ಮೀನು ಮಾರುಕಟ್ಟೆಗಳು ಫೂಲ್ ರಶ್. ಇವು ಬಿಡಿ ಸ್ವಾಮಿ ಸರಾಯಿ ಮಾರಾಟದ ಎಮ್ಎಸ್ಐಎಲ್ ಬಳಿ ಕೂಡ ಹತ್ತಾರು ಜನ ಕ್ಯೂನಲ್ಲಿ ನಿಂತು ಸರಾಯಿ ಖರಿದಿಸಿದರು. ಇನ್ನೂ ಬಾರ್ಗಳು ರಶ್ ಇರುವುದು ಕಂಡು ಬಂದಿತು.

ಇನ್ನೂ ಧಾರವಾಡದಲ್ಲಿ ಕೊರೊನಾ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಹೊಗುವುದು-ಬವುರುವುದನ್ನು ನಿಷೇಧಿಸಲಾಗಿತ್ತು. ತೀರಾ ಅಗತ್ಯತೆ ಇರುವವರು ಮಾತ್ರ ಧಾರವಾಡಕ್ಕೆ ಪ್ರಯಾಣಿಸುವಂತೆ ತಾಲೂಕಾಡಳಿತ ಸೂಚನೆ ನೀಡಿತ್ತು. ಆದರೇ ಸೋಮವಾರ ಸಾಕಷ್ಟು ಜನ ಧಾರವಾಡದಿಂದ ಹಳಿಯಾಳಕ್ಕೆ ಪ್ರಯಾಣ ಬೆಳೆಸಿದ್ದು ಕಂಡು ಬಂದಿತು.
ಧಾರವಾಡ ಜಿಲ್ಲೆಯ ಮಧ್ಯ ಪ್ರೀಯರು ಅಲ್ಲಿ ಸರಾಯಿ ಬಂದ್ ಇರುವ ಹಿನ್ನೆಲೆಯಲ್ಲಿ ಹಲವರು ಹಳಿಯಾಳಕ್ಕೆ ಬಂದು ಮಧ್ಯ ಖರಿದಿಸಿದ್ದು ಮಧ್ಯದಂಗಡಿಯವರು ಹೈರಾಣಾದರು. ಕೆಲವರು ಭಯಪಟ್ಟು ತಮಗೆ ವ್ಯಾಪಾರವೇ ಬೇಡ ಧಾರವಾಡದಿಂದ ಸೊಂಕು ಹಳಿಯಾಳಕ್ಕೆ ಬೇಡ ಎಂದು ತಮ್ಮ ಅಂಗಡಿಗಳನ್ನು ಮುಚ್ಚಿರುವ ಬಗ್ಗೆಯೂ ತಿಳಿದು ಬಂದಿದೆ.
ಹಳಿಯಾಳ ಪಟ್ಟಣದ ಅಕ್ರಮ ಕಸಾಯಿಖಾನೆಯಲ್ಲಿಯೂ ವ್ಯಾಪಾರ ಜೋರಾಗಿಯೇ ನಡೆದಿತ್ತು. ಹತ್ತಾರು ವಾಹನಗಳು, ಜನರು ಇಲ್ಲಿ ತಂಡೊಪತಂಡವಾಗಿ ಬರುತ್ತಿರುವುದರಿಂದ ಭಯಗೊಂಡ ಜನತೆ ತಹಶೀಲ್ದಾರ್ ಹಾಗೂ ಪುರಸಭೆಗೆ ಕಸಾಯಿಖಾನೆ ಕಾರ್ಯ ಸ್ಥಗೀತಗೊಳಿಸುವಂತೆ ಆಗ್ರಹಿಸಿ ಮೌಖಿಕ ದೂರು ನೀಡಿದರು.
ಹಳಿಯಾಳದ ಹಲವು ಜನರು ಧಾರವಾಡದಲ್ಲಿ ವಾಸಿಸುತ್ತಿದ್ದು ಭಾನುವಾರ ಅಲ್ಲಿ ಕೊರೊನಾ ವೈರಸ್ ಕೇಸ್ ಪತ್ತೆಯಾಗಿದ್ದೇ ತಡ ಅಲ್ಲಿಂದ ಜನರು ಹಳಿಯಾಳಕ್ಕೆ ಆಗಮಿಸುತ್ತಿದ್ದಾರೆ. ಈ ಬಗ್ಗೆ ತಾಲೂಕಾಡಳಿತ ಗಮನ ಹರಿಸಬೇಕಿದ್ದು ಅಲ್ಲಿರುವ ಜನರನ್ನು ಅಲ್ಲೆ ಇರುವಂತೆ ನೋಡಿಕೊಳ್ಳಬೇಕಿದೆ ಎಂಬುದು ಪಟ್ಟಣದ ಜನರ ಮನವಿಯಾಗಿದೆ.
Leave a Comment