ಭಟ್ಕಳ :- ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೊರೋನಾ ಸೋಂಕು ತಗುಲಿದ ಕುಟುಂಬದ ಮೂವರಲ್ಲಿ ಇದೀಗ ಸೋಂಕು ಇರೋದು ದೃಢ ಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.
ದುಬೈನಿಂದ ಮುಂಬಯವರೆಗೆ ವಿಮಾನದ ಮೂಲಕ ಬಂದು ಅಲ್ಲಿದ್ದ ಭಟ್ಕಳಕ್ಕೆ ರೈಲ್ವೆಯಲ್ಲಿ ಪ್ರಯಾಣಿಸಿ ಭಟ್ಕಳಕ್ಕೆ ಬಂದಿದ್ದ 65 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಇರೋದು ಕಳೆದ ಮೂರನಾಲ್ಕು ದಿನದ ಹಿಂದೆ ದೃಢ ಪಟ್ಟಿತ್ತು. ಇದೀಗ ಆತನ ಕುಟುಂಬದಲ್ಲಿರುವ ಮೂವರಲ್ಲೊ ಕೊರೋನಾ ಪಾಸಿಟಿವ್ ದೃಢ ಪಟ್ಟಿದೆ.
ಸೋಂಕಿತ 55 ವರ್ಷದ ಪತ್ನಿ, 28 ವರ್ಷದ ಪುತ್ರಿ ಹಾಗೂ 22 ವರ್ಷದ ಮತ್ತೋರ್ವ ಪುತ್ರಿಗೆ ಸೋಂಕು ಇರುವುದು ಪಕ್ಕಾ ಆಗಿದೆ.
ಇವರೇಲ್ಲರನ್ನು ಕಾರವಾರದ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ಸೋಂಕಿತರನ್ನು ರವಾನಿಸಲಾಗಿದೆ. ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
Leave a Comment