
ಹಳಿಯಾಳ :- ಇಂದು ಸೋಮವಾರದಿಂದ ಮತ್ತೇ ಹಳಿಯಾಳದಲ್ಲಿ ಕಿರಾಣಿ ಅಂಗಡಿಗಳು, ತರಕಾರಿ ಮಳಿಗೆಗಳು ಕಾರ್ಯ ನಿರ್ವಹಿಸಲಿವೆ ಇಂತದ್ದೊಂದು ನಿರ್ಧಾರಕ್ಕೆ ಹಳಿಯಾಳ ತಹಶೀಲ್ದಾರ್ ಅವರು ಸಮ್ಮತಿ ಸೂಚಿಸಿದ್ದಾರೆ.
ಸೋಮವಾರ ಹಳಿಯಾಳದ ತಹಶೀಲ್ದಾರ್ ಕಚೇರಿಯಲ್ಲಿ 20 ಕ್ಕೂ ಹೆಚ್ಚು ಕಿರಾಣಿ ವರ್ತಕರೊಂದಿಗೆ ಸಭೆ ನಡೆಸಿದ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಪ್ರತಿದಿನ ಮಧ್ಯಾಹ್ನ 1 ಘಂಟೆಯವರೆಗೆ ಅಂಗಡಿ ತೆರೆಯಲು , ವ್ಯಾಪಾರ ಮಾಡಲು ಸಮ್ಮತಿ ಸೂಚಿಸಿದ್ದಾರೆ.
ಈಗಾಗಲೇ ಕಳೆದ ಮೂರು ದಿನಗಳಿಂದ ವಾರ್ಡವಾರು
ಮನೆ ಮನೆಗೆ ಕಿರಾಣಿ, ದಿನಸಿ , ತರಕಾರಿ ಮುಟ್ಟಿಸುವ ಕೆಲಸ ನಡೆದಿದೆ ಹೀಗಿದ್ದರು ಸಹಿತ
ಮತ್ತೇ ಅಂಗಡಿ ತೆರೆಯಲು ಆದೇಶ ಮಾಡಿರುವುದು ಏಕೆ ಎಂಬ ಪ್ರಶ್ನೇ ಮೂಡಿದೆ.
ಅಂದರೇ ಪುರಸಭೆ ಮನೆ ಮನೆಗೆ ತೆರಳಿ ಕಿರಾಣಿ ವಿತರಿಸುವಲ್ಲಿ ವಿಫಲವಾಗಿದೆಯೇ ? , ತರಕಾರಿ ಯಾರಿಗೂ ತಲುಪುತ್ತಿಲ್ಲವೇ ?
ಇವತ್ತಿನ ತಹಶೀಲ್ದಾರ್ ಅವರ ಈ ನಿರ್ಧಾರ ಈ ಪ್ರಶ್ನೇಗಳನ್ನು ಹುಟ್ಟುಹಾಕಿದೆ.
ಈ ಬಗ್ಗೆ ಮಾತನಾಡಿದ ತಹಶಿಲ್ದಾರ ವಿದ್ಯಾಧರ ಗುಳಗುಳೆ ಅವರು ಕಿರಾಣಿ ವರ್ತಕರಿಗೆ ಮನೆ ಮನೆಗೆ ಕಿರಾಣಿ ತಲುಪಿಸುವಂತೆ ಹೇಳಿದರು ಅವರು ನಿರಾಕರಿಸುತ್ತಿದ್ದಾರೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಅಂದರೇ ಕಿರಾಣಿ ವರ್ಕಕರಿಗೆ ಇಂತಹ ವಿಷಮ ಪರಿಸ್ಥಿತಿಯಲ್ಲಿ
ಜನರ ಸೇವೆ ಮಾಡದೆ ದುಡ್ಡು ಮಾಡುವುದೇ ಉದ್ದೇಶವಾಗಿದೆಯೇ ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಈರುಳ್ಳಿ, ಬಟಾಟಿ, ಬೆಳೆ, ಸಕ್ಕರೆ, ಎಣ್ಣೆ ಇತರ ಕೆಲವು ಪದಾರ್ಥಗಳ ಬೆಲೆಯನ್ನೂ ಹೆಚ್ಚು ಮಾಡಿ ಜನರನ್ನು ಲೂಟಿ ಮಾಡುವ ಕೆಲಸವನ್ನು ಮಾಡಲಾಗುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ ಈ ಬಗ್ಗೆ ತಾಲೂಕಾಡಳಿತ ಗಮನ ಹರಿಸಬೇಕಿದೆ.
ಕೋವಿಡ್ 19 – ಕೊರೊನಾ ವೈರಸ್ ಸ್ಟೇಜ್ -3 ಅಪಾಯಕಾರಿ ಹಂತಕ್ಕೆ ತಲುಪುತ್ತಿದೆ ಎಂದು ಸರ್ಕಾರವೇ ಹೆಳುತ್ತಿದೆ.
ಆದರೇ ಹಳಿಯಾಳದಲ್ಲಿ ಮಾತ್ರ ಜನರು ಮನೆಯಿಂದ ಹೊರ ಬರುವುದು ಕಡಿಮೆ ಆಗುತ್ತಿಲ್ಲ ಜನರಿಗೆ ವೈರಸ್ ನ ಗಂಭೀರತೆಯೇ ಸ್ಪಷ್ಟವಾಗುತ್ತಿಲ್ಲವೇ ಎಂಬ ಪ್ರಶ್ನೇ ಕಾಡುತ್ತಿದೆ.
ಈಗಾಗಲೇ ಜನರು ಬೇಕಾಬಿಟ್ಟಿ ರೋಡಿಗಿಳಿಯುತ್ತಿದ್ದು ಸೋಮಾವರದಿಂದ ಕಿರಾಣಿ ಅಂಗಡಿ ತೆರೆದಿರುವ ಕಾರಣ ಮತ್ತೇ ಜನಜಂಗುಳಿ ಆಗುವುದು ಖಚಿತವಾಗಿದೆ.
Leave a Comment