
ಕೋವಿಡ್-19 ವೈರಸ್ನಿಂದ ಲಾಕ್ ಡೌನ್ ಆಗಿರುವುದರಿಂದ ದಿನಗೂಲಿ, ಕಾರ್ಮಿಕರು, ತೀರಾ ಬಡವರು ಸಂಕಷ್ಟಕ್ಕೆ ಸಿಲುಕಿದ್ದು ಹಳಿಯಾಳದಲಿ ಆಯ್ದ ಕೆಲವು ಕುಟುಂಬಗಳಿಗೆ ವಿ ಕೇರ್ ಫಾರ್ ಯು ಕೋವಿಡ್-19 ತಂಡವು ಸಹಾಯ ಹಸ್ತ ಚಾಚಿದ್ದು ಕಳೆದ ನಾಲ್ಕು ದಿನಗಳಿಂದ ಸಹಾಯ ಮಾಡುತ್ತಿದೆ.
ಬಿಹಾರ ಮೂಲದವರಿಗೆ, ಹೋಟೆಲ್ಗಳಲ್ಲಿ ಅಡುಗೆ ಮಾಡುವ, ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದ ಹಾಗೂ ಬೀದಿ ಬದಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಕೆಲವರಿಗೆ ಅವರ ಮನೆಗಳಿಗೆ ಭೇಟಿ ನೀಡಿ ಈ ತಂಡವು ಅಕ್ಕಿ, ಚಹಾಪುಡಿ, ಸಕ್ಕರೆ, ಒಣಖಾರ, ಅಡುಗೆ ಎಣ್ಣೆ, ಬೇಳೆ ಇತ್ಯಾದಿ ಆಹಾರ ಸಾಮಗ್ರಿ ಹೊಂದಿರುವ ಕಿಟ್ಗಳನ್ನು ವಿತರಿಸುತ್ತಿದ್ದಾರೆ.
ವೀ ಕೇರ್ ಫಾರ್ ಯು- ಕೋವಿಡ್ -19 ತಂಡದ ಪ್ರಮುಖರಾದ ಪುರಸಭೆ ಸದಸ್ಯ ನವೀನ್ ಕಾಟ್ಕರ್ ನೇತೃತ್ವದಲ್ಲಿ ರವಿ ತೊರಣಗಟ್ಟಿ, ಅಖಿಲ ಮರಾಠೆ, ಇಲಿಯಾಸ ಬಾಳೆಕುಂದ್ರಿ, ಬಸವರಾಜ ಹಿರೇಮೊರಬ, ಗುರು ಕಮ್ಮಾರ ಇತರರು ಕೈ ಜೋಡಿಸಿ ಕೆಲಸ ಮಾಡುತ್ತಿದ್ದಾರೆ.
Leave a Comment