
#ಹಳಿಯಾಳ :- ದಿನಂಪ್ರತಿ ಅನಾವಶ್ಯಕವಾಗಿ ಓಡಾಡುತ್ತಿರುವವರನ್ನು ತಡೆಯಲು ಹಳಿಯಾಳ ಪೋಲಿಸರು ಪಟ್ಟಣದ ಅಂಚಿನ ಪ್ರಮುಖ ರಸ್ತೆಗಳಲ್ಲಿ ಬುಧವಾರ ರಾತ್ರಿ ನಾಕಾಬಂದಿ ಮಾಡಿದರು.
ಹಳಿಯಾಳ- ಧಾರವಾಡ ರಸ್ತೆಯ ಲಕ್ಷ್ಮಣ ಪ್ಯಾಲೇಸ್ ಹೊಟೆಲ್ ಸಮೀಪ, ಹಳಿಯಾಳ-ದಾಂಡೇಲಿ- ಯಲ್ಲಾಪುರ ರಸ್ತೆಯ ರುಡಸೆಟ್ ಸಮೀಪ, ಪಟ್ಟಣದ ಕಿಲ್ಲಾ ಪ್ರದೇಶ ಸರ್ಕಲ್, ಅಳ್ನಾವರ ರಸ್ತೆಯ ಹೊರಗಿನ ಗುತ್ತಿಗೇರಿ ಕೆರೆ ಸಮೀಪ ರಸ್ತೆ, ಪೋಲಿಸ್ ಠಾಣೆ ಪಕ್ಕದ ರಸ್ತೆಯ ದೇಶಪಾಂಡೆ ಆಶ್ರಯ ಬಡಾವಣೆ ಸಮೀಪ ಹೀಗೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ನಾಕಾ ಬಂದಿ ಮಾಡಲಾಗುತ್ತಿದೆ.

ಗುರುವಾರದಿಂದ ಪ್ರತಿ ಒಂದು ನಾಕಾಬಂದಿ ಸ್ಥಳದಲ್ಲಿ ಎರಡರಿಂದ ಮೂವರು ಪೋಲಿಸರು ಕರ್ತವ್ಯ ನಿರ್ವಹಿಸಲಿದ್ದು ಅನಾವಶ್ಯಕ ವಾಗಿ ಬರುವ ವಾಹನಗಳನ್ನು ಸೀಜ್ ಮಾಡಿ ಠಾಣೆಗೆ ಕಳುಹಿಸಲಿದ್ದಾರೆ.
ಬುಧವಾರ ರಾತ್ರಿ ಪಿಎಸ್ ಐ ಯಲ್ಲಾಲಿಂಗ ಕುನ್ನೂರ ನೇತೃತ್ವದಲ್ಲಿ ಹಳಿಯಾಳ ಪೋಲಿಸರು ನಾಕಾಬಂದಿ ಮಾಡಿದ್ದು ಲಾಕ್ಡೌನ್ ಆದೇಶ ಮುಗಿಯುವವರೆಗೆ ಇದು
ಪಾಲನೆಯಾಗಲಿದೆ.
ನಾಕಾಬಂದಿ ಸ್ಥಳಕ್ಕೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಡಲವಾಣಿಯೊಂದಿಗೆ ಮಾತನಾಡಿದ ಅವರು ಜನರಿಗೆ ಎಷ್ಟೇ ತಿಳುವಳಿಕೆ ಹೇಳಿದರು ಕೇಳುತ್ತಿಲ್ಲ ಹೀಗಾಗಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಕೊರೊನಾದಿಂದ ಪಾರಾಗಲು ಜನರು ಮನೆಯಲ್ಲಿಯೇ ಇದ್ದರೇ ಒಳಿತು ಎಂದರು.
Leave a Comment