ಹಳಿಯಾಳ:- ರುಂಡ-ಮುಂಡ ಬೇರ್ಪಡಿಸಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಹೃದ್ರವಿದ್ರಾವಕ ದುರ್ಘಟನೆ ತಾಲೂಕಿನ ಬೆಳವಟಗಿ ಗ್ರಾಮ ಸಮೀಪ ನಡೆದಿದ್ದು ಕಳೆದ 3 ದಿನಗಳ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದ್ದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಕೊಲೆಯಾದ ದುರ್ದೈವಿಯನ್ನು ನಾಗರಾಜ ಚೆನ್ನಪ್ಪಾ ಕೊಳದಾರ(31) ಎಂದು ಗುರುತಿಸಲಾಗಿದೆ. ಕಳೆದ ಶನಿವಾರದಿಂದ ಇತ ನಾಪತ್ತೆಯಾಗಿದ್ದು ಅಂದಿನಿಂದ ಆತನಿಗಾಗಿ ಕುಟುಂಬದವರು ಹುಡುಕಾಟದಲ್ಲಿದ್ದರು ಮಂಗಳವಾರ ಗ್ರಾಮದವರು ಸೇರಿ ಗ್ರಾಮದ ಸುತ್ತ ಹುಡುಕಾಟ ನಡೆಸಿ ಬಳಿಕ ಪೋಲಿಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸೊಣ ಎಂದು ತೀರ್ಮಾಣಿಸಿ ಗ್ರಾಮಸ್ಥರೆಲ್ಲರು ಯುವಕನ ಹುಡುಕಾಟದಲ್ಲಿ ತೊಡಗಿದ್ದಾಗ ಗ್ರಾಮಸ್ಥರ ಕಣ್ಣಿಗೆ ಕೊಳೆತ ದೇಹ ಪತ್ತೆಯಾಗಿದೆ.

ಆತನ ಪಾಲಕರು ಮೃತನ ಕೈಯಲ್ಲಿನ ದಾರ ಹಾಗೂ ಆತನ ಚಪ್ಪಲಿಯ ಮೇಲೆ ಗುರುತು ಹಿಡಿದಿದ್ದು ತಕ್ಷಣ ಹಳಿಯಾಳ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಯುವಕ ಗೌಂಡಿ ಕೆಲಸ ಜೊತೆಗೆ ಕೃಷಿ ಕೆಲಸವನ್ನು ಮಾಡುತ್ತಿದ್ದು ಬೆಳವಟಗಿ ಗ್ರಾಮದಿಂದ 2 ಕೀಮಿ ಅಂತರದಲ್ಲಿ ವಾಟ್ನಾಳ್ ಗ್ರಾಮಕ್ಕೆ ಹೋಗುವ ದಾರಿಯ ಸಮೀಪದ ಗುಡ್ಡ ಪ್ರದೇಶದಲ್ಲಿ ಇತನ ರುಂಡ ಹಾಗೂ ಮುಂಡವನ್ನು ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಸ್ಥಳಕ್ಕೆ ಹಳಿಯಾಳ ಸಿಪಿಐ ಲೋಕಾಪುರ ಬಿಎಸ್, ಪಿಎಸ್ಐ ಯಲ್ಲಾಲಿಂಗ ಕುನ್ನೂರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದರು. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆಗಡುಕರ ಪತ್ತೆಗಾಗಿ ಪೋಲಿಸರು ಜಾಲ ಬಿಸಿದ್ದಾರೆ.

ಲಾಕ್ ಡೌನ್ನ ಈ ಸಂದರ್ಭದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಮೂರನೇ ಕೊಲೆ ಪ್ರಕರಣ ಇದಾಗಿದ್ದು ಲಾಕ್ಡೌನ್ನ ಬಂದೋಬಸ್ತ್ ಮಾಡಬೇಕೋ ಅಥವಾ ಈ ಕೊಲೆ ಪ್ರಕರಣಗಳ ಪತ್ತೆಯಲ್ಲಿ ಕಾರ್ಯೋನ್ಮೂಖರಾಗಬೇಕೋ ಎನ್ನುವುದು ಪೋಲಿಸರಿಗೂ ತಲೆ ನೋವಾಗಿ ಪರಿಣಮಿಸಿದೆ.
ಭಾನುವಾರ ತೇರಗಾಂವ ಗ್ರಾಮದಲ್ಲಿ ಚಿಕ್ಕಮ್ಮನಿಂದ ನಡೆದ ಕೊಲೆ ಪ್ರಕರಣವನ್ನು 6 ಗಂಟೆಗಳಲ್ಲಿಯೇ ಪತ್ತೆ ಹಚ್ಚಿ ಆರೋಪಿ ಚಿಕ್ಕಮ್ಮ ಸಾವಿತ್ರಿಯನ್ನು ಪೋಲಿಸರು ಜೈಲಿಗಟ್ಟಿದ್ದಾರೆ. ಈ ಘಟನೆಯ 2 ದಿನಗಳ ಹಿಂದೆ ನಡೆದಿದ್ದ ಕಾವಲವಾಡದ ಪ್ರಕರಣವನ್ನು ಭೇದಿಸಿ ಆರೋಪಿ ಗಂಡ ಪರಶುರಾಮ ಬಾವಕರನನ್ನು ಸೆರೆಮನೆಗೆ ಅಟ್ಟಿದ್ದು ಮೂರನೇ ಪ್ರಕರಣ ಇದಾಗಿದ್ದು ಯುವಕನ ಕೊಲೆ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೋಲಿಸರು ವ್ಯಾಪಕ ಜಾಲ ಬಿಸಿದ್ದು ಕೆಲವೆ ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.




Leave a Comment