
ಹಳಿಯಾಳ:- ಸ್ಥಳೀಯ ಶಾಸಕ ಆರ್.ವಿ.ದೇಶಪಾಂಡೆ ಅವರ ಪ್ರಯತ್ನದಿಂದ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯಿಂದ ಉಚಿತವಾಗಿ ನೀಡಲಾದ ತರಕಾರಿ ಬೀಜಗಳನ್ನು ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ವಿತರಿಸಿದರು.
ಈ ಕುರಿತು ಮಾತನಾಡಿದ ಘೋಟ್ನೇಕರ ಅವರು ಕೊರೊನಾ ಮಹಾಮಾರಿ ಹಿನ್ನೆಲೆ ರೈತಾಪಿ ವರ್ಗದ, ಬಡವರು, ವ್ಯಾಪಾರಸ್ಥರು, ಕೂಲಿಕಾರರು, ಸಣ್ಣ ರೈತರು, ಉದ್ಯಮಗಳ ಮಾಲಿಕರು ತುಂಬಾ ತೊಂದರೆಯಲ್ಲಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ತರಕಾರಿಗಳ ಕೊರತೆಯಾಗಬಾರದೆಂದು ಶಾಸಕ ಆರ್ವಿ ದೇಶಪಾಂಡೆ ಅವರು ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನೆಯೊಂದಿಗೆ ಮಾತನಾಡಿ ಉಚಿತ ಬೀಜಗಳನ್ನು ಮಂಜೂರಿ ಮಾಡಿಸಿದ್ದು ಅವರಿಗೆ ಹಾಗೂ ಕಂಪೆನಿಯ ಮಾಲಿಕರಾದ ಸಂತೋಷ ಅತ್ತಾವರ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಮಹೇಶ್ರಿ ಸಂಜು ಮಿಶ್ಯಾಳೆ, ಕಂಪೆನಿಯ ಅಧಿಕಾರಿ ಅನಿಲ ಖಾರದ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಇದ್ದರು.
Leave a Comment