
ಕುಮಟಾ : ಮಕ್ಕಳ ಮನಸ್ಸು ಅರಳಿಸುವ ಹಾಗೂ ಮಕ್ಕಳ ಸುಪ್ತ ಪ್ರತಿಭೆಗೆ ಅವಕಾಶ ನೀಡುವ ದೃಷ್ಟಿಯಿಂದ ಹಾಗೂ ರಜಾ ಅವಧಿಯಲ್ಲಿ, ಕೊರೋನಾ ಲಾಕ್ಡೌನ್ ಸಮಯದ ಸದುಪಯೋಗಕ್ಕಾಗಿ ಮಕ್ಕಳಿಗಾಗಿ ಸತ್ವಾಧಾರ ಫೌಂಡೇಶನ್(ರಿ) “ಕಥೆ ಹೇಳೋಣ ಬನ್ನಿ” ಸ್ಪರ್ಧೆ ಸಂಯೋಜಿಸಿದೆ. 6 ರಿಂದ 13 ವರ್ಷದ ಒಳಗಿನ ಮಕ್ಕಳು ಮನೆಯಿಂದಲೇ ಅಂತರ್ಜಾಲದ ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಫೌಂಡೇಶನ್ ಸಂಸ್ಥಾಪಕ ಗಣೇಶ ಜೋಶಿ ಸಂಕೊಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6 ರಿಂದ 13 ವರ್ಷದ ಒಳಗಿನ ಮಕ್ಕಳು ಮನೆಯಲ್ಲಿಯೇ ಕಥೆ ಹೇಳುವ ವಿಡಿಯೋವನ್ನು ಮಾಡಿ. ಆ ವಿಡಿಯೋವನ್ನು ಕಳುಹಿಸುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಯಾವುದೇ ಜಿಲ್ಲೆಯವರೂ ಭಾಗವಹಿಸಲು ಅವಕಾಶ ಕಲ್ಪಿಸಿದೆ ಅದಲ್ಕದರ ಮಕ್ಕಳ ಆಯ್ಕೆಯ ಭಾಷೆಯಲ್ಲಿ ಕಥೆ ಹೇಳಲು ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧೆಯ ವಿಡಿಯೋ ಕಳುಹಿಸಲು 24/05/2020 ರ ವರೆಗೆ ಅವಕಾಶ ಇದ್ದು ಮಕ್ಕಳು 5 ನಿಮಿಷಗಳ ಒಳಗಿನ ಕಥೆ ಹೇಳುವ ವಿಡಿಯೋಮಾಡಿ, ಪೂರ್ಣ ಹೆಸರು ಹಾಗೂ ಊರು,ಕಲಿಯುತ್ತಿರುವ ಶಾಲೆಯ ಹೆಸರಿನ ಜೊತೆಗೆ ವಿಡಿಯೋವನ್ನು 8431959195 ಗೆ ವಾಟ್ಸಪ್ ಮಾಡಬಹುದು ಅಥವಾ [email protected] ಗೆ ಮೇಲ್ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಅಂತರ್ಜಾಲ ಸಂವಹನ ಮಾಧ್ಯಮದ ಮೂಲಕ ಅಭಿನಂದನಾ ಪತ್ರ ನೀಡಲಾಗುವುದು. ಅದಲ್ಲದೆ ಮೊದಲ ಆಯ್ಕೆ ಸುತ್ತು, ಜನಾಭಿಪ್ರಾಯ, ನಿರ್ಣಾಯಕರ ನಿರ್ಣಯದ ಮೂರು ಹಂತದಲ್ಲಿ ವಿಜೇತರನ್ನು ಆಯ್ಕೆಮಾಡಲಾಗುವುದು. ವಿಜೇತರಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
Leave a Comment