
ಹಳಿಯಾಳ :- ದಯಮಾಡಿ ಕ್ಷಮಿಸು ಮಗುವೇ ನಿನ್ನನ್ನು ಬದುಕಿಸಲಾಗಲಿಲ್ಲ, ಬದುಕಿ ಬಾಳಬೇಕಾದ ನೀನು ಇಷ್ಟು ಬೇಗ ಬದುಕನ್ನೇ ಮುಗಿಸುತ್ತಿಯಾ ಎಂದು ಅಂದುಕೊಂಡಿರಲಿಲ್ಲ ಕ್ಷಮಿಸು ಮಗುವೇ.. #ಮನಿಷಾ. ಹೌದು ಓದುಗರೇ ಶಾಲಾ ಜೀವನಕ್ಕೆ ಕಾಲಿಟ್ಟು ಈಗ ಹೊರಗಿನ ಪ್ರಪಂಚ ನೋಡುತ್ತಿದ್ದ ಮುಗ್ದ ಬಾಲಕಿ ತಡವಾಗಿ ಕಾಣಿಸಿಕೊಂಡ #ಕಿಡ್ನಿವೈಫಲ್ಯದಿಂದ #ಶುಕ್ರವಾರರಾತ್ರಿಉಸಿರುಚೆಲ್ಲಿರುವ #ಹೃದಯವಿದ್ರಾವಕಘಟನೆ ಇದು. #ಕಳೆದನಾಲ್ಕೂದಿನಗಳಹಿಂದೆಯಷ್ಟೇ #A- #ನೆಗೆಟಿವ್ ಬ್ಲಡ್ #ರಕ್ತದ #ಅವಶ್ಯಕತೆ ಇದೆ ಎಂದು ನಾವು ಹಾಕಿದ #ಪೊಸ್ಟ್ ಗೆ ಸಾಕಷ್ಟು ಜನ #ಓಗೊಟ್ಟಿದ್ದಕ್ಕೆ ಅಂದು #ರಕ್ತದೊರೆತು ಬಾಲಕಿ ಮತ್ತೇ 5 ದಿನ ತನ್ನ #ಹೆತ್ತವರಮಡಿಲಲ್ಲಿ , ಅವರ ಕಣ್ಣ ಮುಂದೆ ಇದ್ದಳು. ವೈಫಲ್ಯಕ್ಕೆ ತುತ್ತಾದ ಕಿಡ್ನಿ ಬದಲಾವಣೆ ಮಾಡಿದರೇ ಮಾತ್ರ ಮಗು ಉಳಿಯಬಹುದು ಎಂದು ವೈದ್ಯರು ಹೇಳಿದ್ದರು. ಆದರೇ ಆ ಪ್ರಕ್ರಿಯೇ ನಡೆಯುವ ಮುನ್ನವೇ ಅವಸರವಾಗಿ ದೇವರೆಡೆಗೆ ನಡೆದುಬಿಟ್ಟಿದ್ದಾಳೆ. ಶುಕ್ರವಾರ ತೀವೃ ಆರೋಗ್ಯ ಸಮಸ್ಯೆಯಾಗಿದ್ದರಿಂದ ರಾತ್ರಿ 8 ಗಂಟೆ ಸುಮಾರು ಮಗು ಕಣ್ಣು ಮುಚ್ಚಿ ಬಾರದ ಲೋಕಕ್ಕೆ ಪಯಣ ಬೆಳೆಸಿದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಕಿಡ್ನಿ ವೈಫಲ್ಯದಿಂದ ಬಳಲಿ ಚಿಕಿತ್ಸೆಯು ಫಲಕಾರಿಯಾಗದೆ ಬದುಕಿ ಬಾಳಬೇಕಾದ 11 ವರ್ಷ ವಯಸ್ಸಿನ ಮುಗ್ದ ಬಾಲಕಿ ತನ್ನ ಜೀವನದ ಪಯನ ಮುಗಿಸಿದ್ದಾಳೆ.

ದುರ್ಗಾನಗರ ನಿವಾಸಿ ಮಂಜುಳಾ ಹಾಗೂ ನಂದಗಡದ ರಾಕೇಶ ಕರಗಾರ ಎನ್ನುವವರ ಪುತ್ರಿ #ಮನೀಷಾ #ಕರಗಾರ(೧೧) ಚಿಕ್ಕ ವಯಸ್ಸಿನಲ್ಲೇ #ಸಾವನ್ನುಅಪ್ಪಿಕೊಂಡನತದೃಷ್ಠ_ಬಾಲಕಿಯಾಗಿದ್ದಾಳೆ. ಹಳಿಯಾಳದ ದುರ್ಗಾನಗರದ ನಿವಾಸಿಯಾಗಿರು ಬಾಲಕಿಗೆ ಕಳೆದ ಒಂದು ತಿಂಗಳಿಂದ ತೀವೃ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಇತ್ತೀಚೆಗೆ ಧಾರವಾಡ ಎಸ್ ಡಿಎಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಆ ಬಳಿಕ ಅಲ್ಲಿಂದ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಾರಾಯಣ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಗೆ ದಾಖಲಿಸಬೇಕಿತ್ತು. ಹೀಗಾಗಿ ಬಾಲಕಿಯನ್ನು ಮನೆಗೆ ಕರೆ ತರಲಾಗಿತ್ತು ಆದರೆ ಶುಕ್ರವಾರ ರಾತ್ರಿ ಬಾಲಕಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಅತ್ಯಂತ ಬಡ ಕುಟುಂಬವಾಗಿರುವ ಈ ಕುಟುಂಬ ಬದುಕಿ ಬಾಳಬೇಕಾದ ಮಗಳನ್ನು ಕಳೆದುಕೊಂಡು ಕಣ್ಣಿರಿಡುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಯಾರಿಗೂ ಬಾರದಿರಲಿ ದೇವಾ.

Leave a Comment