
ಈ ತಾಂಡವ ಪ್ರಾರಂಭವಾಗಿದ್ದು ಚೈನಾದ ವುಹಾನ್ ಶಹರದಿಂದ. ಆದರೆ ತುಂಬಾ ತೀವ್ರಗತಿಯಲ್ಲಿ ಚಲಿಸಿ ವಿಶ್ವದಾದ್ಯಂತ ಕ್ರಮಿಸುತ್ತಾ ಕೈಲಾಸ ಇರುವ ಈ ದೇಶವನ್ನು ಆವರಿಸಿ ನರ್ತಿಸುತ್ತಿದೆ. ಶಿವನ ತಾಂಡವಲಾಸ್ಯ ಇಂಪಾಗಿ ಕಿವಿಗೆ, ಕಣ್ಣಿಗೆ, ಮುದಿಸುತ್ತಿದ್ದ ಕಾರಣ ಶಕ್ತಿಪ್ರಧಾನವಾಗಿ ಅಜರಾಮರವಾಗಿ ಉಳಿದಿದೆ.ಈಗ ಜಗದಾದ್ಯಂತ ವ್ಯಾಪಿಸಿರುವ ಕೊರೋನಾ ತಾಂಡವವನ್ನು ನಿಲ್ಲಿಸುವುದಾದರೆ ಧೈರ್ಯದಿಂದ, ಶಾಂತಿಯಿಂದ, ಪಂಚ ಮಹಾಭೂತಗಳನ್ನು ಪ್ರಾರ್ಥಿಸುತ್ತಾ ಎದುರಿಸಿ, ಎದೆಗುಂದದೆ “ಕಾಲಾಯ ತಸ್ಮೈ ನಮಃ” ಎಂಬ ವೇದ ವಾಕ್ಯದಂತೆ ಮೂಕಪ್ರೇಕ್ಷಕರಾಗಿ ಇರುವುದೆ ಕ್ಷೇಮ.ಅಶ್ವತ್ಥಾಮನ ನಾರಾಯಣಾಸ್ತ್ರವನ್ನು ಯಾರಿದಂಲೂ ಎದುರಿಸಲು ಅಸಾಧ್ಯವಾದಾಗ, ಶ್ರೀಕೃಷ್ಣನ ಉಪದೇಶ ಮಾತ್ರ ಶಾಂತ ಮನಸ್ಥಿತಿಯಲ್ಲಿ ಎದುರಿಸುವುದು. ಅದನ್ನು ಎದುರಿಸುವ ವಿಚಾರ ಹೃದಯದಾಳದಲ್ಲಿ ಇದ್ದರೂ, ಆ ವಿಚಾರವನ್ನೆ ಕಿತ್ತು ಬಿಡುವಂತಹ ಶಕ್ತಿ ಆ ನಾರಾಯಣಾಸ್ತ್ರಕ್ಕೆ ಇದ್ದಿತ್ತು. “ದೈರ್ಯಂ ಸರ್ವತ್ರ ಸಾಧನಂ” ಎನ್ನುವ ಮಾತನ್ನು ಮರೆಯದೇ, ಈ ದಿನವೂ ಶಾಶ್ವತವಾಗಿ ನಿಲ್ಲುವಂತದಲ್ಲ. ಸತತ ಬದಲಾವಣೆಯೇ ಸ್ಥಿರ ಹೊರತು ಇನ್ಯಾವುದಲ್ಲ. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಮುಕ್ತಸ್ಥಿತಿಯಲ್ಲಿ ಇರುವುದೆ ಸಹಜಸಾಧನೆ ಹಾಗೂ ಸಮಾಧಿ. ಇದೂ ಒಂದು ಪರೀಕ್ಷೆ.ಸ್ಥಿತಪ್ರಜ್ಞತೆಯಲ್ಲಿ ಯಾವ ದ್ವಂದ್ವವು ಇಲ್ಲದೆ ಮೌನವಾಗಿರುವುದೇ ಒಳಿತು. ಇದ್ದನ್ನೆ ಭಗವಾನ್ ರಮಣ ಮಹರ್ಷಿಗಳು ತಿಳಿಸಿರುತ್ತಾರೆ. ವಿಶ್ವದ ಶಕ್ತಿ ಯಾವಾಗಲೂ ನಮ್ಮನ್ನು ರಕ್ಷಿಸಲು ತವಕಿಸುತ್ತಿದೆ. ಆದರೆ ಅದನ್ನೇ ಧಿಕ್ಕರಿಸಿದರೆ ಪಾಠ ಕಲಿಸುವವಳು ಆ ಮಾತೆಯು. ಇದು ಒಂದು ಪ್ರಳಯದ ಪ್ರತೀಕ. ಅದರ ಬಗ್ಗೆ ವಿಚಾರ ಮಾಡಿದಷ್ಟು ಮನಸ್ಸು ಅಲ್ಲೋಲ ಕಲ್ಲೋಲವಾಗುವ ಕಾರಣ, ನಾವೇಕೆ ದೇಶದ ಒಳತಿನ ಸಲುವಾಗಿ ಮನೆ ಮನೆಯಲ್ಲೇ ದೇವರನ್ನು ಸ್ಮರಿಸುತ್ತಾ ಪ್ರಾರ್ಥನೆ ಮಾಡುವುದೇ ಉಪಾಯವಲ್ಲವೇ? ಹೃದಯಬಲ ಹೆಚ್ಚಾಗಿ ಚಿತ್ತವನ್ನು ಸ್ಥಿರಕರಿಸಿ, ಕೆಲವು ಕಾಲ ಧ್ಯಾನ, ಸಾಧನೆಯಿಂದ ಪರಮಶಕ್ತಿಯೊಡಗೂಡಿ ಆನಂದಿಸುವುದು ಅತಿ ಸುಲಭ ಮತ್ತು ಅಂಕಿತ ವಿಲ್ಲದ ಉಪಾಯ. ಇದಕ್ಕೆ ಜನ, ಧನಬಲ ಬೇಕಿಲ್ಲ. ಸಾಮೂಹಿಕತೆಯಲ್ಲಿ ಭಾಗವಹಿಸದೇ ಕೆಲಕಾಲ ತಮ್ಮ ಮನೆಗಳಲ್ಲೇ ಇದ್ದು ಆ ಪರಮಶಕ್ತಿಯನ್ನು ಆರಾಧಿಸುವದು ಉತ್ತಮ. “ಧರ್ಮೋ ರಕ್ಷತಿ ರಕ್ಷತ:”, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಇದು ಸತ್ಯ. “ದಯಾ ಧರ್ಮಸ್ಯ ಮೂಲ” ಅಂದರೆ ದಯೆಯೇ ಧರ್ಮದ ಮೂಲ ಎನ್ನುವ ಮಾತನ್ನು ಮರೆಯದೇ ಆದಷ್ಟು ಶಕ್ತಿಹೀನರಿಗೆ ಭಕ್ತಿಯಿಂದ ಸೇವೆಯ ಮಾಡುವುದೇ ಧರ್ಮ. ಇದರಲ್ಲಿ ಆತ್ಮಜ್ಞಾನವೇ ಪ್ರಾಧ್ಯಾನ್ಯ. ಹೀಗಿರುವಾಗ ಭಯಪಡದೆ ಮುನ್ನಡೆಯುವದೇ ನಮ್ಮ ಧರ್ಮ. ನಮ್ಮ ದೇಶದ ಪ್ರಧಾನಿಯೆ ನಮ್ಮ ಆಚಾರ್ಯರು. ಹೌದು ಅವರು ಹೇಳಿದ ನಿಯಮಗಳನ್ನು ನಿಷ್ಠೆಯಿಂದ ಪಾಲಿಸುತ್ತಾ ಇರುವುದು ನಮ್ಮ ಧರ್ಮ ಹಾಗೂ ಕರ್ಮ. ಇಡೀ ಮಾನವತೆಯ ಭಾರವನ್ನೆ ಹೊತ್ತಿರುವ ಈ ಪ್ರಧಾನಿಯನ್ನು ಆದೃಶ್ಯ ಈಶ್ವರೀಶಕ್ತಿ ಕಾಪಾಡಲೆಂದು ಹಾರೈಸಿ, ನಮ್ಮನ್ನು ರಕ್ಷಿಸುತ್ತಿರುವ ಪಂಚ ಮಹಾಭೂತಗಳನ್ನು ನಮಸ್ಕರಿಸಿ, ನನ್ನ ಈ ಆಲೋಚನೆಗಳು ವಿನಮ್ರವಾಗಿ ಓದುಗರನ್ನು ಪ್ರೋತ್ಸಾಹಿಸುತ್ತಾ ಇರುವದೆಂಬನಂಬಿಕೆಯಿಂದ ಬರೆದಿರುತ್ತೇನೆ.
Leave a Comment