
ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಮೀನು_ಮಾರುಕಟ್ಟೆ (ಫಿಶ್ ಮಾರ್ಕೆಟ್ ) ಸಮೀಪದ ಕಾನ್ವೆಂಟ್ ರೋಡ್_ನಿವಾಸಿ ಎನ್ನಲಾಗಿರುವ ವಿದೇಶದಿಂದ_ಹಿಂದಿರುಗಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ_ಕೊರೊನಾ_ಸೊಂಕು ತಗುಲಿರುವ_ಶಂಕೆ_ವ್ಯಕ್ತವಾಗಿದ್ದು ಸಂಜೆಯ ಹೆಲ್ತ್ ಬುಲೆಟಿನ್ ಈ ಬಗ್ಗೆ ದೃಢಪಡಿಸಬೇಕಿದೆ.
ಫಿಲಿಪೈನ್ಸ್ ದೇಶದ_ಮನಿಲಾದಿಂದ ಭಾರತಕ್ಕೆ ಹಿಂದಿರುಗಿದ ಸಂದರ್ಭದಲ್ಲಿ ಏರಪೊರ್ಟನಲ್ಲಿ 7_ದಿನ_ಕ್ವಾರಂಟೈನ್ ಆಗಿ ಬಳಿಕ ಹಳಿಯಾಳಕ್ಕೆ ಬಂದು ಇಲ್ಲಿಯೂ ತಾಲೂಕಾಡಳಿತದಿಂದ 7 ದಿನ ಸಾಂಸ್ಥಿಕ_ಕ್ವಾರಂಟೈನ್ ಆಗಿದ್ದ 31_ವರ್ಷದ ಯುವಕನಿಗೆ ಸೊಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
ಇಂದು ಇತನ ಕ್ವಾರಂಟೈನ್ ಅವಧಿ ಮುಗಿದ ಮನೆಗೆ ಹೊಗಿದ್ದ ಅರ್ಧ ಗಂಟೆಯಲ್ಲಿಯೇ ಇತನಿಗೆ ಸೊಂಕು ತಾಗಿದೆ ಎಂಬ ಬಗ್ಗೆ ಮಾಹಿತಿ ಬಂದಿದ್ದರಿಂದ ತಕ್ಷಣ ಆರೋಗ್ಯಇಲಾಖೆ ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ಇತನ ಮನೆಗೆ ಬಂದು ಇತನನ್ನು ಚಿಕಿತ್ಸೆಗೆ ಹಳಿಯಾಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
-:ಭಯಪಡುವ ಅಗತ್ಯವಿಲ್ಲ :-
ವಿದೇಶದಿಂದ ಬಂದು ಸೊಂಕು ತಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿರುವ ಈ ಯುವಕ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರಿಂದ ರೋಗ ಹರಡುವ ಭಿತಿ ಇಲ್ಲವಾಗಿದೆ.
ಅಲ್ಲದೇ ಮನೆಗೆ ಬಂದು 30 ನಿಮಿಷದಲ್ಲೇ ವರದಿ ಬಂದಿದ್ದರಿಂದ ತಕ್ಷಣ ಇತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ. ಸಂಜೆಯ ಹೆಲ್ತ್ ಬುಲೆಟಿನ್ ಯುವಕನಿಗೆ ಸೊಂಕು ತಾಗಿರುವುದನ್ನು ಖಚಿತಪಡಿಸಬೇಕಿದೆ.
ಸದ್ಯ ಇತನ ಮನೆಯನ್ನು ಮಾತ್ರ ಸೀಲ್ ಡೌನ್ ಮಾಡಲಾಗಿದೆ. ಆದ್ದರಿಂದ ಪಟ್ಟಣದ ಜನತೆ ಅನಾವಶ್ಯಕವಾಗಿ ಯಾವುದೇ ಸುಳ್ಳು ವದಂತಿ, ಸುದ್ದಿಗಳಿಗೆ ಕಿವಿಗೊಡದೆ ಸುರಕ್ಷತಾ ಕ್ರಮಗಳೊಂದಿಗೆ ತಮ್ಮ ದೈನಂದಿನ ಕೆಲಸ- ಕಾರ್ಯದಲ್ಲಿ ತೊಡಗಬಹುದು ಎಂದು ಹೇಳಲಾಗುತ್ತಿದೆ
Leave a Comment