ಹಳಿಯಾಳ:- ದಿ.24 ಬುಧವಾರದಂದು ನಡೆಯಲಿರುವ ಹಳಿಯಾಳ ಎಪಿಎಮ್ಸಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಕಣ ರಂಗೇರಿದ್ದು ಕಾಂಗ್ರೇಸ್ನ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಬಿಜೆಪಿಯ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಆರೋಪ-ಪ್ರತ್ಯಾರೋಪಗಳ ಮಾತಿನ ಸಮರದ ವಿಡಿಯೋಗಳು ಕ್ಷೇತ್ರಾದ್ಯಂತ ವೈರಲ್ ಆಗುತ್ತಿದ್ದು ಕ್ಷೇತ್ರದ ಜನರಿಗೆ ಬುಧವಾರದ ಚುನಾವಣೆಯ ಕುರಿತು ತೀವೃ ಕುತೂಹಲ ಮೂಡಿಸುತ್ತಿವೆ.
ಮಾಜಿ ಶಾಸಕ ಸುನೀಲ್ ಹೆಗಡೆ ಅವರ ವಿಡಿಯೋ ಸಂದೇಶದಲ್ಲಿ ಎಪಿಎಮ್ಸಿ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ತಮ್ಮ ಮಗನನ್ನೇ ಮತ್ತೇ ಅಧ್ಯಕ್ಷ ಮಾಡಲು ಅತಿ ನೀಚ ಕೃತ್ಯ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಘೊಟ್ನೇಕರ ಅನುಸರಿಸುತ್ತಿದ್ದಾರೆ. ಬಿಜೆಪಿ ಬೆಂಬಲಿತ ಎಪಿಎಮ್ಸಿ ಸದಸ್ಯ ಕೃಷ್ಣಮೂರ್ತೀಯನ್ನು ಬಾಬು ಎನ್ನುವವರು ಹಾಗೂ ಶ್ರೀನಿವಾಸ ಘೊಟ್ನೇಕರ ಅಪಹರಿಸಿದ್ದಾರೆ.
ಅಲ್ಲದೇ ರಾಮನಗರದಲ್ಲಿ ಕಾಂಗ್ರೇಸ್ ಸದಸ್ಯನನ್ನು ಅವರೇ ಒತ್ತೆ ಇಟ್ಟುಕೊಂಡು ಸುಳ್ಳು ಕಿಡ್ನಾಪ್ ದೂರು ನೀಡಿದ್ದು ತಮ್ಮ ವಿಧಾನ ಪರಿಷತ್ ಸದಸ್ಯರ ಸ್ಥಾನ ದುರ್ಬಳಕೆ ಮಾಡಿಕೊಂಡು ಅಧಿಕಾರ ಚಲಾಯಿಸುತ್ತಿದ್ದು ಚುನಾವಣೆ ವೇಳೆ ಏನೆ ಗಲಾಟೆ ನಡೆದರು ಘೊಟ್ನೇಕರ ಅವರೇ ನೇರ ಕಾರಣ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಇನ್ನೂ ವಿಧಾನ ಪರಿಷತ್ ಸದಸ್ಯ ಇದಕ್ಕೆ ತೀರುಗೆಟು ನೀಡಿದ್ದು ಮಾಜಿ ಶಾಸಕ ಸುನೀಲ್ ಹೆಗಡೆಗೆ ನೈತಿಕತೆ ಇಲ್ಲ, ಹತಾಶರಾಗಿ ಏನೆನೋ ಹೇಳಿಕೆ ನೀಡುತ್ತಿದ್ದಾರೆ. ರಾಮನಗರದ ಎಪಿಎಮ್ಸಿ ಸದಸ್ಯ ವಸಂತ್ ಹರಿಜನ ಕಾಂಗ್ರೇಸ್ ಪಕ್ಷ ಬೆಂಬಲಿತ ಸದಸ್ಯರಿದ್ದು ಅವರನ್ನು ನಾವೇ ಅಪಹರಿಸಲು ನಮಗೆ ತಲೆ ಕೆಟ್ಟಿದೆಯೇ ? ಎಂದು ಖಾರವಾಗಿ ಪ್ರಶ್ನೀಸಿರುವ ಘೊಟ್ನೇಕರ ಯಾರು ಕಿಡ್ನಾಪ್ ಮಾಡಿದ್ದಾರೋ ಅವರ ವಿರುದ್ದ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಬಿಜೆಪಿ ಬೆಂಬಲಿತ ಸದಸ್ಯ ಕೃಷ್ಣಮೂರ್ತಿ ಪಾಟೀಲ್ ನನ್ನು ತನ್ನ ಮಗ ಶ್ರೀನಿವಾಸ್ ಕಿಡ್ನಾಪ್ ಮಾಡಿದ್ದಾರೆಂದು ಹೆಗಡೆ ದೂರಿದ್ದು ಇದು ಸತ್ಯಕ್ಕೆ ದೂರವಾದ ಹೇಳಿಕೆಯಾಗಿದ್ದು. ಕೃಷ್ಣಮೂರ್ತೀ ಈ ಹಿಂದೆಯೇ ಕಾಂಗ್ರೇಸ್ ಪಕ್ಷ ಸೇರಿದ್ದು ಈ ಬಗ್ಗೆ ತಮ್ಮ ಬಳಿ ದಾಖಲೆಗಳಿವೆ. ಸುನೀಲ್ ಹೆಗಡೆ ಸುಳ್ಳು ಹೇಳಿಕೊಂಡೆ ರಾಜಕೀಯ ಮಾಡಿಕೊಂಡು ಬಂದಿದ್ದು ಅವರ ಹೇಳಿಕೆಗಳಿಗೆ ಕಿಮ್ಮತ್ತಿಲ್ಲ ಎಂದು ಎಸ್.ಎಲ್.ಘೊಟ್ನೇಖರ ಅವರು ತೀವೃವಾಗಿ ಕಿಡಿ ಕಾರಿದ್ದಾರೆ.
ಈ ಇಬ್ಬರು ನಾಯಕರ ಆರೋಪ ಪ್ರತ್ಯಾರೋಪ ಹೇಳಿಕೆಯ ವಿಡಿಯೋಗಳ ನಡುವೆ ರಾಮನಗರದ ಕಾಂಗ್ರೇಸ್ ಬೆಂಬಲಿತ ಸದಸ್ಯ ವಸಂತ್ ಹರಿಜನ ಅವರ ಪುತ್ರಿ ಹಾಗೂ ಹೆಂಡತಿಯು ಮಾಜಿ ಶಾಸಕ ಸುನೀಲ್ ಹೆಗಡೆ ಅವರ ವಿರುದ್ದ ನೀಡಿರುವ ಹೇಳಿಕೆಗಳ ವಿಡಿಯೋಗಳು ಕೂಡ ಹರಿದಾಡುತ್ತಿದ್ದು ಅದು ಘೊಟ್ನೇಕರ ಅವರ ಬ್ಯಾಂಕಿನ ಕಚೇರಿಯಿಂದ ಅವರ ಆಜ್ಞೆಯಂತೆ ಮಾಡಿರುವ ವಿಡಿಯೋಗಳು ಎಂದು ಬಿಜೆಪಿಗರು ಆರೋಪಿಸುತ್ತಿದ್ದಾರೆ.
ತೀವೃ ಜಿದ್ದಾಜಿದ್ದಿನ, ಹಗೆತನದ ರಾಜಕೀಯಕ್ಕೆ ಹೆಸರಾದ ಹಳಿಯಾಳದಲ್ಲಿ ಸದ್ಯ ಹಳಿಯಾಳ ಎಪಿಎಮ್ಸಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ನಡೆದ ಅಪಹರಣ ಹೈಡ್ರಾಮಾಕ್ಕೆ ಸಂಬಂಧಿಸಿದಂತೆ ಒಟ್ಟೂ ನಾಲ್ಕೂ ವಿಡಿಯೋ ತುಣುಕುಗಳು ಹಳಿಯಾಳದಲ್ಲಿ ಸಂಚಲನ ಮೂಡಿಸಿದ್ದು ಕ್ಷೇತ್ರದ ಜನರ ಚಿತ್ತ ಬುಧವಾರದ ಎಪಿಎಮ್ಸಿ ಚುನಾವಣೆಯತ್ತ ನೆಟ್ಟಿದೆ.
Leave a Comment