
ಹಳಿಯಾಳ :- ಮಹಾರಾಷ್ಟ್ರದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಬಳಿಕ ಹೊಮ್ ಕ್ವಾರಂಟೈನ್ ಆಗಿದ್ದ ಮಹಿಳೆಯಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು ಸಾಯಂಕಾಲದ ಹೆಲ್ತ್ ಬುಲೆಟಿನ್ ಈ ಬಗ್ಗೆ ಖಚಿತಪಡಿಸಲಿದೆ.
ಮಹಾರಾಷ್ಟ್ರದ_ಖಾಸಗಿ_ಆಸ್ಪತ್ರೆಯಲ್ಲಿ ಶುಶ್ರೂಷಕಿ(ನರ್ಸ್) ಆಗಿ ಕೆಲಸ ಮಾಡುತ್ತಿದ್ದ ( 32) ವರ್ಷದ ಮಹಿಳೆ ಕಳೆದ 8 ದಿನಗಳ ಹಿಂದೆ ಹಳಿಯಾಳಕ್ಕೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ.
ಸರ್ಕಾರದ ನಿಯಮದಂತೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಆಗಿದ್ದಾಗ ಇವರ ಗಂಟಲು ದ್ರವ, ರಕ್ತದ ಮಾದರಿಯನ್ನು ಸಂಗ್ರಹಿಸಿ ಕೋವಿಡ್19 ಪತ್ತೆ ಪರೀಕ್ಷೆಗಾಗಿ ಕರವಾರದ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು. ಆದರೇ ಮಹಿಳೆ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಮನೆಗೆ ಬಂದು ಹೊಮ ಕ್ವಾರಂಟೈನ್ ಆಗಿದ್ದರು.
ಆದರೇ ಇಂದು ಭಾನುವಾರ ವರದಿ ಬಂದಿದ್ದು ಮಹಿಳೆಯಲ್ಲಿ ಸೊಂಕು ಪತ್ತೆಯಾಗಿದೆ ಎನ್ನಲಾಗಿದೆ.
ಸದ್ಯ ಮಹಿಳೆಯನ್ನು ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ತಂದು ಐಸೋಲೇಷನ್ ವಾರ್ಡನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Leave a Comment