ಹಳಿಯಾಳ:- ಧಾರವಾಡಕ್ಕೆ ಚಿಕಿತ್ಸೆಗೆಂದು ತೆರಳಿದ್ದ ಹಳಿಯಾಳ ತಾಲೂಕಿನ ಬಸವಳ್ಳಿ ಗ್ರಾಮದ ೫೩ ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಇರುವುದನ್ನು ಹೆಲ್ತ್ ಬುಲೆಟಿನ್ ದೃಢಪಡಿಸಿದೆ.
ಶನಿವಾರವಷ್ಟೇ ಹುಣಸವಾಡ ಗ್ರಾಮದ ೩೫ ವರ್ಷದ ಮಹಿಳೆ ಧಾರವಾಡಕ್ಕೆ ಚಿಕಿತ್ಸೆಗೆ ತೆರಳಿದಾಗ ಕೊರೊನಾ ಪರೀಕ್ಷೆ ನಡೆಸಿದಾಗ ಸೊಂಕು ದೃಢಪಟ್ಟಿತ್ತು. ಮರುದಿನ ಅಂದರೇ ಭಾನುವಾರವೇ ತಾಲೂಕಿನ ಬಸವಳ್ಳಿ ಗ್ರಾಮದಲ್ಲೂ ಕೂಡ ಕೊರೊನಾ ಸೊಂಕು ತಗುಲಿರುವ ಮೂಲವೇ ಗೊತ್ತಿರದ ಪ್ರಕರಣ ಪತ್ತೆಯಾಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಧಾರವಾಡದ ಎಸ್.ಡಿಎಮ್ ಆಸ್ಪತ್ರೆಯಲ್ಲಿ ಸೊಂಕಿತ ವ್ಯಕ್ತಿಯ ಪತ್ನಿಗೆ ಶಸ್ತçಚಿಕಿತ್ಸೆ ಆಗಿರುವುದರಿಂದ ಇತ ಇಲ್ಲಿಗೆ ಹೊಗಿ ಬರುತ್ತಿದ್ದ ಈ ಸಂದರ್ಭದಲ್ಲಿ ಇತನಿಗೆ ಜ್ವರ ಕಾಣಿಸಿಕೊಂಡಿದೆ ತಕ್ಷಣ ವೈದ್ಯರು ಕೊರೊನಾ ಪರೀಕ್ಷೆ ಮಾಡಿಸಿದ್ದು ಇತನ ವರದಿ ಭಾನುವಾರ ಬಂದಿದ್ದು ಸೊಂಕು ದೃಢಪಟ್ಟಿದೆ.
ಈ ಬಗ್ಗೆ ಮಾಹಿತಿ ತಿಳಿದ ಹಳಿಯಾಳ ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆಯವರು ಸಂಪೂರ್ಣ ಸುರಕ್ಷಾ ಕ್ರಮಗಳೊಂದಿಗೆ ಹಳಿಯಾಳ ತಾಲೂಕಾ ಆಸ್ಪತ್ರೆಯ ಕೊವಿಡ್-ಕೇರ್ ಸೆಂಟರ್ಗೆ ಚಿಕಿತ್ಸೆಗಾಗಿ ಇತನನ್ನು ದಾಖಲಿಸಿದ್ದಾರೆ.
ಎಲ್ಲಿಯೂ ಹೊರ ರಾಜ್ಯಕ್ಕೆ ಹೊಗಿ ಬಂದಿರುವ ಕುರಿತು ಅಥವಾ ಸೊಂಕಿತರ ಸಂಪರ್ಕದಲ್ಲಿರುವ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು ಸೊಂಕು ತಗುಲಿರುವ ಮೂಲ ಪತ್ತೆಹಚ್ಚುವುದೇ ತಾಲೂಕಾಡಳಿತಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ.

ಸದ್ಯ ಈ ಪ್ರಕರಣವನ್ನು ಐಎಲ್ಐ ಪ್ರಕರಣವೆಂದು ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ. ಹಳಿಯಾಳದಲ್ಲಿ ಸೊಂಕಿತರ ಸಂಖ್ಯೆ ೨೨ ಕ್ಕೆ ಏರಿಕೆಯಾಗಿದೆ.
canarabuzz.com
ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಹಾಗೂ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ ಅವರು ಗ್ರಾಮಕ್ಕೆ ಭೇಟಿ ನೀಡಿ ಸೊಂಕಿತನ ಕುಟುಂಬದವರಿಗೆ ಧೈರ್ಯ ಹೇಳಿದ್ದು ಗ್ರಾಮಸ್ಥರು ವಿನಾಃಕಾರಣ ಸೀಲ್ಡೌನ್ ಪ್ರದೇಶದಲ್ಲಿ ಸುತ್ತಾಡಬಾರದು ಎಂದು ಸೂಚಿಸಿದ್ದಾರೆ.
ಮಿರಾಶಿ ಓಣಿ ಸೀಲ್ಡೌನ್
ಸೊಂಕಿತ ವ್ಯಕ್ತಿ ವಾಸವಿದ್ದ ಬಸವಳ್ಳಿ ಗ್ರಾಮದ ಮಿರಾಶಿ ಓಣಿಯ ೧೦೦ ಮೀಟರ್ ಸೀಲ್ಡೌನ್ ಮಾಡಲಾಗಿದ್ದು ೨೦೦ ಮೀಟರ್ ಬಪ್ಪರ್ಝೋನ್ ಎಂದು ಗುರುತಿಸಲಾಗಿದೆ. ಅಲ್ಲದೇ ಇತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಕುಟುಂಬದ ಮೂವರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಹಾಗೂ ದ್ವಿತಿಯ ಸಂಪರ್ಕಕ್ಕೆ ಬಂದಿರುವ ಜನರನ್ನು ಹೋಮ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಗ್ರಾಮದಲ್ಲಿ ರಾಸಾಯನಿಕ ಔಷಧಿಗಳನ್ನು ಸಿಂಪಡಿಸಲಾಗಿದೆ.
God punishment people covid 19