ಹಳಿಯಾಳ :- ಜನ_ಮರಳೊ ,ಜಾತ್ರೆ_ಮರುಳೋ?ವೇಗವಾಗಿ ಹಬ್ಬುತ್ತಿರುವ ಕೊರೊನಾ ಮಹಾಮಾರಿಯ ಈ ದಿನಗಳಲ್ಲಿ ಹಳಿಯಾಳದಲ್ಲಿ ಸೋಮವಾರ ಹಾಗೂ ಮಂಗಳವಾರ ಜನ_ಜಾತ್ರೆಯೇ_ಜಮಾವಣೆಯಾಗಿತ್ತು
ಕೊರೊನಾ_ಮಹಾಮಾರಿಗೆ_ಹಳಿಯಾಳಿಗರು ಡೊಂಟ್ #ಕೇರ್ ಮಾಡುತ್ತಿದ್ದಾರೆಯೇ ಎಂಬಂತೆ ಜನ ಸೇರಿದ್ದು ಕಂಡು ಬಂದಿತು.
ಸೋಮವಾರ ಹಾಗೂ ಮಂಗಳವಾರ ಹಳಿಯಾಳದ ಪ್ರಮುಖ ಮಾರುಕಟ್ಟೆ ಪ್ರದೇಶ, ಮೀನು_ಮಾರುಕಟ್ಟೆ ರಸ್ತೆ, ಕಾರ್ಪೋರೇಷನ್ ಬ್ಯಾಂಕ್ ಎದುರಿನ ರಸ್ತೆ, ಬಸ್ ನಿಲ್ದಾಣ_ರಸ್ತೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನ ಸಂದಣಿ ಸೇರಿರುವುದು ಕಂಡು ಬಂದಿತು.
ಇಲ್ಲಿ ಸಾಮಾಜಿಕ_ಅಂತರ_ಮಾಯವಾಗಿದ್ದರೇ ಸಾಕಷ್ಟು ಜನ ಮಾಸ್ಕ್ ಕೂಡ ಧರಿಸದೆ ಇರುವುದು ಕಂಡು ಬಂದಿತು. ಈ ರೀತಿ ಆಗುತ್ತಿದ್ದರೇ ಕೊರೊನಾ ಉಲ್ಬಣಿಸದೆ ಮತ್ತೇನಾದಿತು ಎಂದು ಕೆಲವರು ಆಡಿಕೊಳ್ಳುತ್ತಿರುವುದು ಕಂಡು ಬಂದಿತು.
Leave a Comment