ಹಳಿಯಾಳ;- ಹಳಿಯಾಳಕ್ಕೆ ಕೊರೊನಾ ಮಹಾಮಾರಿ ಸಧ್ಯ ಬಿಡುವಂತೆ ಕಾಣುತ್ತಿಲ್ಲ ಗಲ್ಲಿಗಲ್ಲಿಗೂ, ಹಳ್ಳಿ ಹಳ್ಳಿಗೂ ಖಾತೆ ತೆರೆಯುತ್ತಾ ಸಾಗಿರುವ ವೈರಸ್ ತನ್ನ ಕಬಂದ ಬಾಹುವಿನಲ್ಲಿ ಆದಷ್ಟು ಜನರನ್ನು ಸೆಳೆಯುತ್ತಿದ್ದು ಭಾನುವಾರ ಹಳಿಯಾಳ ಓರ್ವ ಪೋಲಿಸಪ್ಪನಿಗೂ ಸೊಂಕು ದೃಢಪಟ್ಟಿದೆ.
ಹಳಿಯಾಳದಲ್ಲಿ ಸದ್ಯ ಕೊರೊನಾ ಸೊಂಕಿತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. 40ಕ್ಕೂ ಅಧಿಕ ಕಂಟೇನಮೆAಟ್ ಝೋನ್ಗಳು ಇದ್ದರೇ ೪೦೦ಕ್ಕೂ ಅಧಿಕ ಜನ ಹೋಮ್ ಕ್ವಾರಂಟೈನ್ ಆಗಿದ್ದಾರೆ.
ಶನಿವಾರ ಬೆಳಿಗ್ಗೆಯ ವರದಿಯಲ್ಲಿ ಹಳಿಯಾಳಕ್ಕೆ 12 ಪಾಸಿಟಿವ್ ತೊರಿಸಲಾಗಿತ್ತು ಬಳಿಕ ರಾತ್ರಿ ಎರಡು ಬಾರಿ ಬುಲೆಟಿನ್ ಬದಲಾವಣೆ ಆಗಿ ಮತ್ತೇ 16ಜನರಲ್ಲಿ ಸೊಂಕು ದೃಢಪಟ್ಟಿದೆ ಅಂದರೇ ಶನಿವಾರ ಒಂದೇ ದಿನ 28ಜನರಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇನ್ನೂ ಭಾನುವಾರ ಕೊಂಚ ಉಸಿರಾಡಲು ಅವಕಾಶ ಕೊಟ್ಟಿರುವ ಕೊರೊನಾ ಭಾನುವಾರ ಹಳಿಯಾಳ ಪೋಲಿಸ್ ಠಾಣೆಯ ಸಿಪಿಐ ಕಚೇರಿಯ 33 ವರ್ಷದ ಓರ್ವ ಪುರುಷ ಸಿಬ್ಬಂದಿಯಲ್ಲಿ ದೃಢಪಡುವ ಮೂಲಕ ಅಲ್ಲಿಯೂ ತನ್ನ ಅಕೌಂಟ್ ಓಪನ್ ಮಾಡಿದ್ದು ಸದ್ಯ ಠಾಣೆಯನ್ನು ಸೀಲ್ಡೌನ್ ಮಾಡಿ, ಸಂಪೂರ್ಣ ಸ್ಯಾಣಿಟೈಸರ್ ಸಿಂಪಡಿಸಲಾಗಿದೆ.
ಶನಿವಾರ ರಾತ್ರಿ ಪತ್ತೆಯಾದ ಸೊಂಕಿತರ ವಿವರ :- ಹಳಿಯಾಳ ಪಟ್ಟಣದ ದೇಶಪಾಂಡೆ ನಗರದ 60 ವರ್ಷದ ಸೊಂಕಿತನ ಸಂಪರ್ಕಕ್ಕೆ ಬಂದಿದ್ದ ಆತನ ಮಗ ಮತ್ತು ಸೊಸೆಗೆ, ಮುಂಡವಾಡ ಗ್ರಾಮದ ಇಬ್ಬರು ಮಹಿಳೆಯರಲ್ಲಿ ಹಾಗೂ ತತ್ವಣಗಿ ಗ್ರಾಮದ ಮೂವರು ಪುರುಷರಲ್ಲಿ ಹಾಗೂ ಓರ್ವ ಮಹಿಳೆಯಲ್ಲಿ ಸೊಂಕು ದೃಢಪಟ್ಟಿದೆ.
ಬಿಕೆ ಹಳ್ಳಿ ಗ್ರಾಮದಲ್ಲಿ ಮೂರವಲ್ಲಿ- ಓರ್ವ 50ವರ್ಷದ ಪುರುಷ ಹಾಗೂ 15 ವರ್ಷದ ಇಬ್ಬರು ಯುವತಿಯರಲ್ಲಿ, ತೇರಗಾಂವ ಗ್ರಾಮದ 55 ಮತ್ತು 41 ವರ್ಷದ ಇಬ್ಬರು ಮಹಿಳೆಯರಲ್ಲಿ, ಹಳಿಯಾಳದ ದೇಶಪಾಂಡೆ ನಗರದ 55 ವರ್ಷದ ಮಹಿಳೆ ಮತ್ತು 20 ವರ್ಷದ ಯುವತಿಯಲ್ಲಿ ಸೊಂಕು ದೃಢಪಟ್ಟಿದೆ.
ಇನ್ನೂ ಹಳಿಯಾಳದ ಬಸವನಗರದ ನಿವಾಸಿ ೭೪ ವರ್ಷದ ವೃದ್ದೆ ಧಾರವಾಡದ ಎಸ್ಡಿಎಮ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ಅಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಆಕೆಗೆ ಕೊರೊನಾ ಸೊಂಕು ಪತ್ತೆಯಾಗಿದ್ದು ಆಕೆಯನ್ನು ಅಲ್ಲಿಯೇ ಚಿಕಿತ್ಸೆಗೆ ಒಳಪಡಿಸಲಾಗಿದೆ. ಅವಳು ವಾಸಿಸುತ್ತಿದ್ದ ಬಸವನಗರದ 100 ಮೀ. ಪ್ರದೇಶ ಸೀಲ್ಡೌನ್ ಮಾಡಲಾಗಿದ್ದು ಎಲ್ಲ ಸೊಂಕಿತರು ವಾಸಿಸುವ ೧೦೦ ಮೀ.ಪ್ರದೇಶ ಸೀಲ್ಡೌನ್ ಮಾಡಿ ಕಂಟೇನಮೆAಟ್ ಪ್ರದೇಶಗಳೆಂದು ಗುರುತಿಸಲಾಗಿದೆ.

Leave a Comment