ಜೋಯಿಡಾ : ಇಡೀ ವಿಶ್ವದಲ್ಲಿ ಕರೋನಾ ವೈರಸ್ ಕಾಟದಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ರಾಜ್ಯದಲ್ಲಿ ಕೂಡ ಕರೋನಾ ವೈರಸ್ ಹೆಚ್ಚಾಗಿದ್ದು,ಎಲ್ಲಾ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ಕಾದುಕೊಳ್ಳಬೇಕು, ಪತ್ರಕರ್ತರ ರಾದವರೂ ತಮ್ಮ ಕೆಲಸದ ಒತ್ತಡದ ನಡುವೆಯು ಸಮಾಜ ಮುಖಿಯಾಗಿ ಕೆಲಸ ಮಾಡುತ್ತಾ ಇವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ ಹೇಳಿದರು.
ಅವರು ಜೋಯಿಡಾ ನಗರಿ ಗ್ರಾಮದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಗಿಡ ನೆಟ್ಟು ಮಾತನಾಡುತ್ತಿದ್ದರು, ಪತ್ರಕರ್ತರು ಎಂದು ಸತ್ಯ ದ ಪರವಾಗಿ ಇರಬೇಕು, ಸಮಾಜದಲ್ಲಿ ನಡೆಯುವ ಅನ್ಯಾಯದ ಬಗ್ಗೆ ಧ್ವನಿ ಎತ್ತುವನಾಗಿರಬೇಕು,ಒಟ್ಟಾರೆಯಾಗಿ ಹೇಳಬೇಕೆಂದರೆ ಪತ್ರಕರ್ತರು ಸಮಾಜದ ಒಂದು ಕಣ್ಣಾಗಿದ್ದಾರೆ, ಪೃಕೃತಿಯ ಮಡಿಲಿನಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪತ್ರಿಕಾ ದಿನಾಚರಣೆ ಮಾಡುತ್ತಿರುವುದು ಸಂಸತ ತಂದಿದೆ ಎಂದರು.

ಜೋಯಿಡಾ ಕುಣಬಿ ಸಮಾಜದ ಅಧ್ಯಕ್ಷ ಜಯಾನಂದ ಡೇರೆಕರ ಮಾತನಾಡಿ ಜೋಯಿಡಾದಂತ ತಾಲೂಕು ಅಭಿವೃದ್ಧಿ ಹೊಂದಲು ಪತ್ರಕರ್ತರು ಬಹಳ ಶ್ರಮ ಪಟ್ಟಿದ್ದಾರೆ, ಅದಲ್ಲದೆ ನಗರಿಯಂತಹ ಹಳ್ಳಿಯಲ್ಲಿ ಪತ್ರಿಕಾ ದಿನಾಚರೆ ಮಾಡುವುದರಿಂದ ಗ್ರಾಮೀಣ ಭಾಗದ ಜನರಿಗೂ ಪತ್ರಿಕೆಗಳ ಅರಿವೂ ಮೂಡಿಸುವಂತೆ ಮಾಡಿದೆ ಎಂದರು.
ಜೋಯಿಡಾ ಮಾಜಿ ಗ್ರಾ.ಪಂ ಉಪಾಧ್ಯಕ್ಷ ಶ್ಯಾಮ ಪೊಕಳೆ ಸಾಂದರ್ಭಿಕ ವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನಗರಿ ಗ್ರಾಮದ ಹಿರಿಯರಾದ ವಿಶ್ವನಾಥ ಕೋಟೆಮನೆ,ಯಶವಂತ ವೆಳಿಪ್,ಮಾಬಳು ವೆಳಿಪ್ ಹಾಗೂ ಜೋಯಿಡಾ ಅರಣ್ಯ ಇಲಾಕೆಯ ಪಾರೆಸ್ಟರ್ ಸಂತೋಷ ಗಾವಸ್ ಅವರಿಗೆ ಶಾಲು ಹೊದಿಸಿ ಹಣ್ಣು ಹಂಪಲು ನೀಡಿ ಸನ್ಮಾನಿಸಲಾಯಿತು.
ತದ ನಂತರ ನಗರಿ ಗ್ರಾಮದ ದೇವಸ್ಥಾನ ದ ಸುತ್ತಲು ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಜೋಯಿಡಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ,ಅನಂತ ದೇಸಾಯಿ, ಗಣೇಶ ಹೆಗಡೆ ,ಹಾಗೂ ನಗರಿ ಗ್ರಾಮದ ವಿಶ್ವನಾಥ ನಾಯ್ಕ ಇತರರು ಉಪಸ್ಥಿತರಿದ್ದರು, ಜೋಯಿಡಾ ತಹಶೀಲ್ದಾರ ಸಂಜಯ ಕಾಂಬಳೆ, ತಾ.ಪಂ.ಇಒ ಆನಂದ ಬಡಕುಂದ್ರಿ, ಜೋಯಿಡಾ ಪಿ.ಎಸ್.ಐ ಲಕ್ಷಣ ಪೂಜಾರಿ ಕಾರ್ಯಕ್ರಮಕ್ಕೆ ಶುಭಕೊರಿದರು.
Leave a Comment